ಹುಡುಗರ ಈ ಭಾಗಗಳನ್ನು ಮುಟ್ಟಿದರೆ ಕಾಮೋತ್ತೇಜನ ಹೆಚ್ಚು | ಹೆಚ್ಚಿನ ಹುಡುಗೀರಿಗೆ ಗೊತ್ತೇ ಇಲ್ಲದ ಕುತೂಹಲ ಮಾಹಿತಿ!
ಲೈಂಗಿಕತೆ ಎನ್ನುವುದು ಗಂಡು ಹೆಣ್ಣುಗಳ ನಡುವೆ ನಡೆಯುವ ಸುಮಧುರ ಭಾವ. ಈ ಸಮಯದಲ್ಲಿ ಗಂಡು ಹೆಣ್ಣು ಉತ್ತುಂಗಕ್ಕೆ ಹೋಗೋದು ಅತೀ ಮುಖ್ಯ. ಅದರಲ್ಲೂ ಒಬ್ಬರನ್ನೊಬ್ಬರು ಕಾಮೋತ್ತೇಜನಕ್ಕೆ ಒಳಗಾಗಿಸುವುದು ತಿಳಿದಿದ್ದರೆ ಉತ್ತಮ. ಇಲ್ಲಿ ನಾವು ನಿಮಗೆ ಗಂಡು ಅಥವಾ ಹೆಣ್ಣಿನ ಯಾವ ಭಾಗಗಳನ್ನು ಮುಟ್ಟಿದರೆ ಬೇಗನೇ ಕಾಮೋತ್ತೇಜನಗೊಳಗಾಗುತ್ತಾರೆ ಎಂದು ಹೇಳ್ತೀವಿ.
ನಿಮಗೆ ಗೊತ್ತಾ, ಪುರುಷರನ್ನು ಕಾಮೋತ್ತೇಜನಕ್ಕೆ ಒಳಪಡಿಸುವುದು ಅತೀ ಸುಲಭ. ಆದರೆ ಲೈಂಗಿಕ ಸಮಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ದೇಹವು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಪುರುಷರನ್ನು ಉದ್ರೇಕಿಸಲು ನೀವು ಸರಿಯಾದ ಎರೋಜೆನಸ್ ವಲಯಗಳನ್ನು ತಿಳಿದುಕೊಳ್ಳಬೇಕು. ಇದನ್ನು ತಿಳಿದರೆ ನಿಮ್ಮ ಸಂಗಾತಿಯನ್ನು ಮೂಡ್ಗೆ ಬರಿಸುವುದು ನಿಮಗೆ ಸುಲಭ ಸಾಧ್ಯವಾಗುತ್ತದೆ.
ಕುತ್ತಿಗೆಯನ್ನು ಹೊರತುಪಡಿಸಿ ಪುರುಷರಿಗೆ ಇನ್ನೂ ಕೆಲವು ಎರೋಜೆನಸ್ ವಲಯಗಳು ಇಲ್ಲಿವೆ.
ಒಳ ತೊಡೆಗಳು : ಪುರುಷರ ಒಳ ತೊಡೆಗಳು ಬಹಳ ಸೂಕ್ಷ್ಮವಾಗಿರುತ್ತದೆ. ಇದನ್ನು ಸ್ಪರ್ಶಿಸುವಾಗ ಅವರು ಬಹಳ ಬೇಗ ಉತ್ಸುಕರಾಗುತ್ತಾರೆ. ಇದು ಹೆಚ್ಚಿನ ಮಹಿಳೆಯರಿಗೆ ತಿಳಿದಿಲ್ಲ. ಮೊಣಕಾಲುಗಳ ಹಿಂದಿನ ಪ್ರದೇಶದಿಂದ ಪ್ರಾರಂಭಿಸಿ, ನಿಧಾನವಾಗಿ ಮೇಲಕ್ಕೆ ಸರಿಸಿ. ಹೀಗೆ ಮಾಡುವುದರಿಂದ ಪುರುಷರು ತುಂಬಾ ಆನಂದ ಪಡೆಯುತ್ತಾರೆ. ಅನಂತರ ನೀವು ಲೈಂಗಿಕತೆಯನ್ನು ಆನಂದಿಸಬಹುದು.
ಪುರುಷರ ಬೆನ್ನುಮೂಳೆಯ ಮೇಲ್ಭಾಗ, ಬೆನ್ನುಹುರಿ, ಸೊಂಟದ ನಡುವಿನ ಬೆನ್ನೆಲುಬಿನ ತುದಿಯಲ್ಲಿರುವ ಸಣ್ಣ ಮೂಳೆ ಇಲ್ಲೆಲ್ಲ ಸ್ಪರ್ಶಿಸಿದಾಗ ನಿಜಕ್ಕೂ ಖುಷಿ ಪಡುತ್ತಾರೆ. ಅಷ್ಟೇ ಅಲ್ಲ ಅವರು ರೋಮಾಂಚನಕ್ಕೊಳಗಾಗುತ್ತಾರೆ. ಏಕೆಂದರೆ ಅತ್ಯಂತ ಸೂಕ್ಷ್ಮವಾಗಿರುವ ಈ ಪ್ರದೇಶ. ಇವುಗಳು ಪುರುಷರ ಜನನಾಂಗಗಳಿಗೆ ಸಂಪರ್ಕ ಹೊಂದಿದ ನರ ಕೋಶಗಳನ್ನು ಹೊಂದಿರುವ ಪ್ರದೇಶವಾಗಿರುವುದರಿಂದ ಉತ್ತೇಜನಗೊಳಗಾಗುತ್ತಾರೆ.
ಲೈಂಗಿಕ ಸಮಯದಲ್ಲಿ ಸಹ ನೀವು ಪುರುಷರ ಈ ಭಾಗದ ಮೇಲೆ ಕೈಯಾಡಿಸುವುದರಿಂದ ಅವರು ಇನ್ನಷ್ಟು ಕಾಮೋತ್ತೇಜನಗೊಳಗಾಗುತ್ತಾರೆ.
ಹೊಕ್ಕುಳು : ಹೊಕ್ಕುಳು ಕೂಡ ಈ ಕಾಮೋತ್ತೇಜನ ಮಾಡುವ ಒಂದು ಸ್ಥಳ. ಇದನ್ನು ಮುಟ್ಟುವ ಮೂಲಕ ಪುರುಷರ ಪುರುಷರನ್ನು ಉತ್ತೇಜಿಸಬಹುದು. ನಿಮ್ಮ ಬೆರಳುಗಳನ್ನು ಸಂಗಾತಿಯ ಹೊಕ್ಕುಳಲ್ಲಿ ಲಘುವಾಗಿ ಹಿಡಿದುಕೊಂಡು, ನಂತರ ನಿಧಾನವಾಗಿ ಸ್ಪರ್ಶಿಸಿ. ಈ ರೀತಿ ಮಾಡುವುದರಿಂದ ನಿಮ್ಮಸಂಗಾತಿ ತುಂಬಾ ಖುಷಿತಯಾಗುತ್ತಾರೆ. ಇದನ್ನ ನೀವು ಗಮನಿಸಬಹುದು.
ತುಟಿಗಳು : ಇವು ಕೂಡಾ ಎರೋಜೆನಸ್ ವಲಯಗಳಲ್ಲಿ ಒಂದು. ತುಟಿಗಳಲ್ಲಿ ಅನೇಕ ನರ ತುದಿಗಳಿವೆ ಮತ್ತು ಚರ್ಮವು ತುಂಬಾ ತೆಳುವಾಗಿರುತ್ತದೆ. ಆದ್ದರಿಂದ ಪ್ರಚೋದನೆಯು ಅಲ್ಲಿ ತುಂಬಾ ಪ್ರಬಲವಾಗಿದೆ. ಇದು ಅನೇಕ ಮಹಿಳೆಯರಿಗೆ ತಿಳಿದಿಲ್ಲ. ನಿಮ್ಮ ಸಂಗಾತಿಯ ತುಟಿಗಳೊಂದಿಗೆ ಆಟವಾಡಿ, ಚುಂಬಿಸಿ ಮತ್ತು ಅವುಗಳನ್ನು ಪ್ರಚೋದಿಸಿ. ಈ ಕ್ರಿಯೆ ನಿಮ್ಮ ಸಂಗಾತಿಯನ್ನು ಪ್ರಚೋದನೆಗೊಳ ಪಡಿಸುತ್ತದೆ.