ಮೊಡವೆಗಳನ್ನು ಈಸಿಯಾಗಿ ಹೀಗೆ ಮಾಯ ಮಾಡಿ

ಮೊಡವೆ ಸಮಸ್ಯೆ ಬಹುತೇಕ ಎಲ್ಲರನ್ನೂ ಕಾಡುತ್ತವೆ. ಮೊಡವೆ ಎಣ್ಣೆಯುಕ್ತ ತ್ವಚೆ ಹೊಂದಿರುವ ಜನರನ್ನು ಬಹಳಷ್ಟು ಕಾಡುತ್ತದೆ. ಸೌಂದರ್ಯ ಹಾಳು ಮಾಡುವುದರ ಜೊತೆಗೆ ನೋವು ಉಂಟು ಮಾಡುತ್ತದೆ. ಕೆಲವರು ಮೊಡವೆ ಸಮಸ್ಯೆ ತೊಡೆದು ಹಾಕಲು ಮನೆಮದ್ದು ಟ್ರೈ ಮಾಡ್ತಾರೆ. ಇನ್ನು ಕೆಲವರು ಏನನ್ನೂ ಮಾಡದೇ ನೋವು ಅನುಭವಿಸುತ್ತಾರೆ. ಕೆಲವು ತಪ್ಪು ತಿಳಿವಳಿಕೆ ಮತ್ತು ಮಿಥ್ಯದಿಂದಾಗಿ ತೊಂದರೆ ಅನುಭವಿಸುತ್ತಾರೆ. ಇದರ ಬಗ್ಗೆ ತಜ್ಞರು ಏನ್ ಹೇಳಿದ್ದಾರೆ ಇಲ್ಲಿ ನೋಡೋಣ.

 

ಸೌಂದರ್ಯವರ್ಧಕಗಳ ಅತಿಯಾದ ಬಳಕೆ; ಸೌಂದರ್ಯವರ್ಧಕಗಳ ಅತಿಯಾದ ಬಳಕೆ ಮೊಡವೆಗೆ ಕಾರಣವಾಗುತ್ತದೆ. ಮಹಿಳೆಯರು ಹೆಚ್ಚಾಗಿ ದಿನವಿಡೀ ಮೇಕಪ್‌ನಲ್ಲಿರುವುದು, ರಾತ್ರಿ ಸರಿಯಾಗಿ ಮೇಕಪ್ ಸ್ವಚ್ಛಗೊಳಿಸದಿರುವುದು ಮೊಡವೆಗೆ ಕಾರಣ.

ತಿನ್ನುವ ಅಭ್ಯಾಸ; ಆಹಾರದಲ್ಲಿನ ಟ್ರಾನ್ಸ್ ಕೊಬ್ಬು, ಹಾಲು ಮತ್ತು ಮೀನು ಹೆಚ್ಚಿನ ಸೇವನೆ ಮೊಡವೆಗೆ ಪ್ರಮುಖ ಕಾರಣ.

ಹೆಚ್ಚು ಒತ್ತಡ; ಒತ್ತಡ ಹೊಂದಿದರೆ ಮೊಡವೆ ಸಮಸ್ಯೆ ಕಾಡುತ್ತದೆ. ಇದು ದೇಹದಲ್ಲಿ ಅನೇಕ ಬದಲಾವಣೆ ಜೊತೆಗೆ ಮೊಡವೆ ಸಮಸ್ಯೆ ಉಂಟಾಗುತ್ತದೆ.

ಮೊಡವೆಗೆ ಸಂಬಂಧಿಸಿದ ಕೆಲವು ಸತ್ಯ ಮತ್ತು ಮಿಥ್ಯಗಳು ಹೀಗಿವೆ ; ಟೂತ್ ಪೇಸ್ಟ್ ನಲ್ಲಿರುವ ಬಲವಾದ ಪದಾರ್ಥಗಳು ಕಪ್ಪು ಕಲೆ, ಕಿರಿಕಿರಿ ಮತ್ತು ಕೆಂಪು ಬಣ್ಣದ ದದ್ದು ಉಂಟು ಮಾಡುತ್ತದೆ. ಮೊಡವೆಗಳ ಮೇಲೆ ಅನ್ವಯಿಸಬಾರದು ಅಂತಾರೆ.

ಮೊಡವೆ ಕೇವಲ ಹದಿಹರೆಯದ ಸಮಸ್ಯೆಯೇ? ಮೊಡವೆ ಯಾವ ವಯಸ್ಸಿನಲ್ಲಿ ಬೇಕಾದ್ರೂ ಬರಬಹುದು. ಹದಿಹರೆಯದಲ್ಲಿ ಮಾತ್ರ ಮೊಡವೆ ಸಮಸ್ಯೆ ಕಾಡುತ್ತೆ ಎಂಬುದು ತಪ್ಪು ಕಲ್ಪನೆ. ಮೊಡವೆ ಋತುಚಕ್ರದ ಅವಧಿ, ಗರ್ಭಾವಸ್ಥೆ ಮತ್ತು ಹಾರ್ಮೋನ್ ಬದಲಾವಣೆ ವೇಳೆಯೂ ಆಗುತ್ತವೆ.

ಪದೇ ಪದೇ ಮುಖ ತೊಳೆಯುವುದರಿಂದ ಮೊಡವೆ ಸಮಸ್ಯೆ ವಾಸಿಯಾಗುತ್ತದೆ? ಮೊಡವೆ ಸಮಸ್ಯೆ ಇರುವವರು ದಿನಕ್ಕೆ 2 ಕ್ಕಿಂತ ಹೆಚ್ಚು ಬಾರಿ ಫೇಸ್ ವಾಶ್ ಬಳಸಬಾರದು. ಚರ್ಮ ಎಣ್ಣೆಯುಕ್ತವಾಗಿದ್ದರೆ ಮತ್ತು ಚರ್ಮದ ಮೇಲೆ ಬ್ಲ್ಯಾಕ್ ಹೆಡ್ಸ್, ವೈಟ್‌ಹೆಡ್‌ಗಳ ಸಮಸ್ಯೆ ಇದ್ದರೆ ಫೇಸ್ ವಾಶ್ ಬಳಕೆ ತಪ್ಪಿಸಿ.

Leave A Reply

Your email address will not be published.