Delhi Murder Case : ಶ್ರದ್ಧಾ ಕೊಲೆ ಪ್ರಕರಣ : ಅಫ್ತಾಬ್‌ ಮನೆಗೆ ಕರೆದುಕೊಂಡು ಬರುತ್ತಿದ್ದ ಹೊಸ ಗೆಳತಿ ಯಾರು ಗೊತ್ತೇ? | ಪೀಸ್‌ ಪೀಸ್‌ ಆರೋಪಿಯ ಇನ್ನೊಂದು ಕರಾಳ ಮುಖ ಅನಾವರಣ

ಈಗಾಗಲೇ ಇಡೀ ದೇಶವೇ ಬೆಚ್ಚಿ ಬಿದ್ದ ಫಟನೆಯಾದ ಶ್ರದ್ಧಾ ವಾಲ್ಕರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್‌ ಅಮಿನ್‌ ಪೂನಾವಾಲನನ್ನು ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು.

 

ಹೌದು ಮುಂಬೈ ಮೂಲದ ಯುವತಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ ಕೋರ್ಟ್ ಮುಂದೆ ಮೊದಲ ಬಾರಿ ತಪ್ಪು ಒಪ್ಪಿಕೊಂಡಿರುತ್ತಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅದಲ್ಲದೆ ಪೊಲೀಸ್ ಕಸ್ಟಡಿಯಲ್ಲಿ ವಿಸ್ತರಣೆ ವೇಳೆ ಹತ್ಯೆ ಮಾಡಿರುವುದಾಗಿ ಕೋರ್ಟ್ ನಲ್ಲಿ ಹೇಳಿಕೆ ದಾಖಲಿಸಿದ್ದಾನೆ.

ಅದಲ್ಲದೆ ಲಿಂವಿಂಗ್ ರಿಲೇಶನ್‍ಶಿಪ್‍ನಲ್ಲಿದ್ದ ಗೆಳತಿ ಶ್ರದ್ಧಾ ವಾಕರ್‍ನನ್ನ ಕೊಂದು 35 ತುಂಡುಗಳಾಗಿ ಕತ್ತರಿಸಿ, ಬಿಸಾಡಿದ್ದ ಅಫ್ತಾಬ್ ಅಮೀನ್ ಪೂನಾವಾಲಾನ ಮತ್ತೊಂದು ಕರಾಳಮುಖ ಪೊಲೀಸ್ ತನಿಖೆ ವೇಳೆ ಬಯಲಾಗಿದೆ.

ಅಫ್ತಾಬ್ ಅಮೀನ್ ಪೂನಾವಾಲ ಪೊಲೀಸ್ ಕಸ್ಟಡಿ ಅವಧಿ ಮುಗಿದಿದೆ. ಹೀಗಾಗಿ 13 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಆತನ ಸುಳ್ಳು ಪತ್ತೆಗೆ ಮಂಪರು ಪರೀಕ್ಷೆ ಮಾಡಿಸೋದು ಬಾಕಿಯಿದೆ. ಅದಕ್ಕೂ ಮುನ್ನ ಪಾಲಿಗ್ರಾಫ್ ಪರೀಕ್ಷೆ ಮಾಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತನ್ನ ಗೆಳತಿಯನ್ನ ಕ್ರೂರವಾಗಿ ಕೊಂದು ಬಳಿಕ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಹೊಸ ಫ್ರಿಡ್ಜ್‍ನಲ್ಲಿಟ್ಟಿದ್ದರೂ ತನ್ನ ರೂಮಿಗೆ ಕರೆದುಕೊಂಡು ಮತ್ತೊಬ್ಬ ಗೆಳತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಜೊತೆಗೆ ಒಬ್ಬ ವೈದ್ಯೆ ಜೊತೆಗೂ ಡೇಟಿಂಗ್ ನಡೆಸುತ್ತಿದ್ದ ಎನ್ನುವ ಸತ್ಯ ಬೆಳಕಿಗೆ ಬಂದಿದೆ. ಸದ್ಯ ಆಕೆ ಮನೋವೈದ್ಯರಾಗಿದ್ದು, ಡೇಟಿಂಗ್ ಆ್ಯಪ್‍ನಲ್ಲಿ ಅಫ್ತಾಬ್‍ಗೆ ಪರಿಚಯವಾಗಿದ್ದರು ಎಂದು ಪೊಲೀಸರ ಮಾಹಿತಿಯಲ್ಲಿ ತಿಳಿದು ಬಂದಿದೆ.

ಪೊಲೀಸರು ಶನಿವಾರ ವೈದ್ಯೆಯನ್ನೂ ವಿಚಾರಣೆ ನಡೆಸಲು ಪೊಲೀಸ್ ಕಸ್ಟಡಿಗೆ ಕರೆಸಿಕೊಳ್ಳಲಾಗಿದೆ.

ಈಗಾಗಲೇ ಶ್ರದ್ಧಾ ಮೊದಲಬಾರಿಗೆ ಭೇಟಿ ಮಾಡಿದ `ಬಂಬಲ್’ ಎಂಬ ಡೇಟಿಂಗ್ ಆ್ಯಪ್ ಮೂಲಕವೇ ಈಕೆಯನ್ನು ಅಫ್ತಾಬ್ ಮೊದಲಿಗೆ ಪರಿಚಯ ಮಾಡಿಕೊಂಡಿದ್ದ. ಅಲ್ಲದೇ ಈ ಆ್ಯಪ್ ಮೂಲಕ ಮತ್ತಷ್ಟು ಮಹಿಳೆಯರ ಜೊತೆಗೂ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ.

ಸದ್ಯ ಅಫ್ತಾಬ್ ನಿಗೆ `ಬಂಬಲ್’ ಆಪ್ ಮೂಲಕ ಪರಿಚಯ ಆದ ಇನ್ನುಳಿದ ಮಹಿಳೆಯರನ್ನು ಸಹ ಪೊಲೀಸರು ತನಿಖೆ ಮಾಡಲು ಆರಂಭಿಸಿದ್ದಾರೆ.

Leave A Reply

Your email address will not be published.