ಮತ್ತೆ ಸ್ಯಾಂಡಲ್ ವುಡ್ ಗೆ ಬಂದ ಬೇಬಿ ಡಾಲ್ | ಸನ್ನಿ ಲಿಯೋನ್ ಹಾಟ್ ಮೈಮಾಟಕ್ಕೆ ಫ್ಯಾನ್ಸ್ ಫಿದಾ ಆಗೋದು ಪಕ್ಕಾ!

ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಜನರ ಮನ ಗೆದ್ದ ರಿಯಲ್ ಸ್ಟಾರ್ ಉಪೇಂದ್ರ ಅವರು ಇದೀಗ ತಮ್ಮ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಹೆಸರು ‘ಯುಐ’ ಎಂದಾಗಿದ್ದು, ಈ ಸಿನಿಮಾಗೆ ಜನರ ಮನದಲ್ಲಿ ಮನೆ ಮಾಡಿರುವ ಸನ್ನಿ ಲಿಯೋನ್ ಎಂಟ್ರಿ ಕೊಟ್ಟಿದ್ದಾರೆ.

 

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಮಾಡುತ್ತಿರುವ ‘ಯುಐ’ ಸಿನಿಮಾಗೆ ಇದೀಗ ಕ್ಯೂಟ್ ಅಂಡ್ ಹಾಟ್ ಆಗಿರೋ ನಟಿ ಸನ್ನಿ ಲಿಯೋನ್ ಪಾದಾರ್ಪಣೆ ಮಾಡಿದ್ದಾರೆ.

ನಟ ಉಪೇಂದ್ರ ಅವರು ‘ಯುಐ’ ಸಿನಿಮಾಗಾಗಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆ ತಂದಿದ್ದಾರೆ. ಇನ್ನೂ ಉಪೇಂದ್ರ ಅವರ ಸಿನಿಮಾ ಅಂದ್ರೆ ಕೇಳಲೇಬೇಕಿಲ್ಲ. ಯಾವುದೇ ಸಿನಿಮಾ ಆಗಿರಲಿ ವಿಭಿನ್ನವಾಗಿರುತ್ತದೆ. ಹಾಗೇ ಹಾಟ್ ಆಗಿರೋ ನಟಿಯರನ್ನೇ ಒಳಗೊಂಡಿರುತ್ತದೆ.

ಹಾಗೇ ಇದೀಗ ಬಾಲಿವುಡ್ ನಟಿ, ಬೇಬಿ ಡಾಲ್ ಸನ್ನಿ ಲಿಯೋನ್ ಈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ.‌ ಇದೀಗ ಕೆ.ಪಿ ಶ್ರೀಕಾಂತ್ ನಿರ್ಮಾಣದ ‘ಯುಐ’ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಅದರಲ್ಲಿ ಉಪ್ಪಿ, ಸನ್ನಿ ಲಿಯೋನ್ ಪಾತ್ರದ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ಇನ್ನು ಸನ್ನಿ ಲಿಯೋನ್ ರೋಲ್ ಹೇಗಿರುತ್ತೆ ? ಎಂಬ ಕುತೂಹಲ ಹೆಚ್ಚಾಗಿದ್ದು, ಸಿನಿಮಾ ಬಿಡುಗಡೆಯ ತನಕ ಕಾದು ನೋಡಬೇಕಿದೆ.

Leave A Reply

Your email address will not be published.