WhatsApp Status : ವಾಟ್ಸಪ್ ನಲ್ಲಿ ಬರಲಿದೆ ಅಚ್ಚರಿಯ ಫೀಚರ್ಸ್ | ಇನ್ನು ಮುಂದೆ ಸ್ಟೇಟಸ್ ನಲ್ಲಿ ವಾಯ್ಸ್ ಮೆಸೇಜ್ ಕಳಿಸಿ! ಹೀಗೆ!!!
ವಿಶ್ವದಲ್ಲಿಂದು ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್ ಆಗಿ ಬೆಳೆದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ (Messaging Platform) ವಾಟ್ಸಪ್ (WhatsApp) ಸಂದೇಶ ರವಾನೆ ಮಾಡಲು ಅತಿ ಹೆಚ್ಚು ಬಳಕೆಯಾಗುವ ಪ್ಲಾಟ್ ಫಾರಂ ಆಗಿದ್ದು, ಇತ್ತೀಚಿನ ದಿನಗಳಲಿ ಭಾರೀ ಜನಪ್ರಿಯವಾಗಿದೆ.
ದಿನಕ್ಕೊಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುವ ವಾಟ್ಸ್ಆ್ಯಪ್ ಇದೀಗ ಬಹುನಿರೀಕ್ಷಿತ ಕಮ್ಯೂನಿಟಿ ಫೀಚರ್ಸ್ ಅನ್ನು (WhatsApp Community) ಪರಿಚಯಿಸಿದ ಬೆನ್ನಲ್ಲೇ ಮತ್ತೊಂದು ವೈಶಿಷ್ಟ್ಯವನ್ನು ಪರಿಚಯ ಮಾಡಿದೆ .
ಇತ್ತೀಚಿಗಷ್ಟೇ ಅನೇಕ ವೈಶಿಷ್ಟ್ಯಗಳನ್ನು ಪರಿಚಯಿಸಿರುವ ವಾಟ್ಸಾಪ್ ಇದೀಗ ಮತ್ತೊಂದು ಹೊಸ ಫೀಚರ್ ಪರಿಚಯಿಸಿದೆ. ಈವರೆಗೆ ವಾಟ್ಸಾಪ್ ಸ್ಟೇಟಸ್ನಲ್ಲಿ ವಿಡಿಯೋ, ಫೋಟೋ, ಲಿಂಕ್ ಮತ್ತು ಬರಹಗಳನ್ನು ಮಾತ್ರ ಹಂಚಿಕೊಳ್ಳಬಹುದಾಗಿತ್ತು. ಆದರೆ ಇನ್ನೂ ಮುಂದೆ, ವಾಯ್ಸ್ ನೋಟ್ ಎಂಬ ಹೊಸ ಫೀಚರ್ ಮೂಲಕ ಬಳಕೆದಾರರು ಸ್ಟೇಟಸ್ನಲ್ಲಿ ವಾಯ್ಸ್ ನೋಟ್ ಅಥವಾ ವಾಯ್ಸ್ ಕ್ಲಿಪ್ಗಳನ್ನು ಶೇರ್ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಇಂದು ವಿಶ್ವದಲ್ಲಿ ಈ ಅಪ್ಲಿಕೇಶನ್ ಬಳಸುವವರ ಸಂಖ್ಯೆ 2 ಬಿಲಿಯನ್ ಬಳಕೆದಾರರನ್ನು ಹೊಂದಿರುವ ಈ ಅಪ್ಲಿಕೇಷನ್ 2022 ರಲ್ಲಿ ಸಾಕಷ್ಟು ಹೊಸ ಪ್ರಯೋಗಗಳನ್ನು ಮಾಡಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ವಾಟ್ಸ್‌ಆಯಪ್ ಅಪ್ಲಿಕೇಷನ್ ಬಳಸುತ್ತಿದ್ದು, ಇತ್ತೀಚೆಗಂತೂ ವಾರಕ್ಕೆ ಒಂದು ಹೊಸ ಫೀಚರ್ಗಳನ್ನು ಘೋಷಣೆ ಮಾಡುವ ವಾಟ್ಸ್ಆಯಪ್ನಲ್ಲಿ ಇನ್ನಷ್ಟು ಅನೇಕ ಅಪ್ಡೇಟ್ಗಳು ಬರಲಿಕ್ಕಿದ್ದು ಉಳಿದ ಫೀಚರ್ ಗಳು ಪರೀಕ್ಷಾ ಹಂತದಲ್ಲಿವೆ ಎನ್ನಲಾಗುತ್ತಿದೆ
ಹೆಚ್ಚಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ನೂತನ ಆಯ್ಕೆಗಳನ್ನು ಪರಿಚಯಿಸುತ್ತಿದ್ದ ವಾಟ್ಸ್‌ಆಯಪ್ (WhatsApp) ಈಗೀಗ ವೆಬ್ ಬಳಕೆದಾರರಿಗೆ ಪ್ರಯೋಜನ ನೀಡುವ ಫೀಚರ್ ನೀಡುತ್ತಿದೆ. ವಾಯ್ಸ್ ನೋಟ್ ಅನ್ನು ಸ್ಟೇಟಸ್ನಲ್ಲಿ ಹಂಚಿಕೊಳ್ಳಬಹುದಾದ ಆಯ್ಕೆ ಮೊದಲಿಗೆ ಐಒಎಸ್ ಬಳಕೆದಾರರಿಗೆ ದೊರೆಯಲಿದ್ದು, ಇಲ್ಲಿವರೆಗೆ ಕೇವಲ ಸ್ಟೇಟಸ್ನಲ್ಲಿ ವಿಡಿಯೋ, ಫೋಟೋ, ಲಿಂಕ್ ಮತ್ತು ಬರಹಗಳನ್ನು ಮಾತ್ರ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
ಇನ್ನೂ ವಾಯ್ಸ್ ನೋಟ್ ಎಂಬ ಹೊಸ ಫೀಚರ್ ಬಂದರೆ ಬಳಕೆದಾರರು ಸ್ಟೇಟಸ್ನಲ್ಲಿ ವಾಯ್ಸ್ ನೋಟ್ ಅಥವಾ ವಾಯ್ಸ್ ಕ್ಲಿಪ್ಗಳನ್ನು ಶೇರ್ ಮಾಡಬಹುದಾಗಿದ್ದು, 30 ಸೆಕೆಂಡ್ಗಳ ಕಾಲ ಇರಲಿದೆ ಎನ್ನಲಾಗಿದೆ. ಇದಕ್ಕಾಗಿ ಬರಹಗಳನ್ನು ಹಂಚಿಕೊಳ್ಳಬಹುದಾದ ಜಾಗದಲ್ಲಿ ಮೈಕ್ರೊ ಫೋನ್ ಆಯ್ಕೆಯನ್ನು ಕೂಡ ನೀಡಲಾಗಿದ್ದು, ಇಲ್ಲಿ ಮೈಕ್ರೊ ಫೋನ್ ಮೇಲೆ ಕ್ಲಿಕ್ ಮಾಡುವ ಮೂಲಕ ವಾಯ್ಸ್ ಸ್ಟೇಟಸ್ ಶೇರ್ ಮಾಡಬಹುದಾಗಿದೆ.
ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಆಗಿದ್ದು, ಸದ್ಯಕ್ಕೆ ಈ ಆಯ್ಕೆಯು ಕೇವಲ ಐಒಎಸ್ ಬೇಟಾ ಬಳಕೆದಾರರಿಗೆ ಲಭ್ಯವಾಗಲಿದೆ. ಇಷ್ಟೇ ಅಲ್ಲದೆ, ವಾಟ್ಸ್‌ಆಯಪ್ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಮಿಸ್ಡ್ ಕಾಲ್ ಅಲರ್ಟ್’ ಎಂಬ ಹೊಸ ಫೀಚರ್ ನೀಡಲು ಅಣಿಯಾಗಿದೆ ಎಂಬ ಮಾಹಿತಿ ನೀಡಿದ್ದು, ಈ ಆಯ್ಕೆಯ ಮೂಲಕ ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ‘ಡೋಂಟ್ ಡಿಸ್ಟರ್ಬ್ ಮೋಡ್’ನಲ್ಲಿ ಇದ್ದರೆ, ಆ ಸಂದರ್ಭದಲ್ಲಿ ಯಾರಾದರು ನಿಮ್ಮ ವಾಟ್ಸ್ಆಯಪ್ಗೆ ಕರೆ ಮಾಡಿದರೆ ಇದು ನೆರವಾಗಲಿದೆ.
ನಿಮ್ಮ ಅರಿವಿಗೆ ಬಾರದೆ ಯಾವುದಾದ್ರೂ ಕರೆ ಬಂದಿದ್ದರೆ ಅದರ ಮಾಹಿತಿ ಕೂಡ ಲಭ್ಯವಾಗಲಿದೆ. ವಾಟ್ಸ್‌ಆಯಪ್ ಇದೀಗ ಈ ಫೀಚರ್ಸ್ ಹೊರತರಲು ಪೂರ್ವ ತಯಾರಿ ಸಿದ್ಧವಾಗಿದೆ ಎನ್ನಲಾಗಿದ್ದು, ಹಾಗೆಯೇ ಇತ್ತೀಚಿನ ಬೀಟಾ ಆವೃತ್ತಿ 2.22.24.7 ಯಲ್ಲಿ ಈ ಫೀಚರ್ಸ್ ದೊರೆಯಲಿದೆ. ಈಗಾಗಲೇ, ಕೆಲವು ಬೀಟಾ ವಾಟ್ಸ್‌ಆಯಪ್ ಬಳಕೆದಾರರಿಗೆ ಈ ಫೀಚರ್ಸ್ ಅನ್ನು ಪರಿಚಯಿಸಲಾಗಿದೆ ಎನ್ನಲಾಗುತ್ತಿದೆ.
ಡೆಸ್ಕ್ಟಾಪ್ನಲ್ಲಿ ವಾಟ್ಸ್‌ಆಯಪ್ ಬಳಸುವವರಿಗೆ ಸದ್ಯದಲ್ಲೇ ಸ್ಕ್ರೀನ್ ಲಾಕ್ ಎಂಬ ಹೊಸ ಫೀಚರ್ ಕೂಡ ದೊರೆಯಲಿದೆ ಎನ್ನಲಾಗುತ್ತಿದೆ. ವಾಟ್ಸ್‌ಆಯಪ್ ಹಿಂದಿನಿಂದಲೂ ಬಳಕೆದಾರರ ಪ್ರೈವಸಿ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಇದೀಗ ಭದ್ರತೆಯನ್ನು ಮತ್ತಷ್ಟು ಸುಭದ್ರ ಗೊಳಿಸುವ ಸಲುವಾಗಿ. ಮತ್ತೊಂದು ಮಹತ್ತರ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.
ಸಾಮಾನ್ಯವಾಗಿ ಮೊಬೈಲ್ ಗಳಲ್ಲಿ ಬಳಸುವ ಸ್ಕ್ರೀನ್ ಲಾಕ್ ನಂತೆ , ವಾಟ್ಸ್‌ಆಯಪ್ ವೆಬ್ನಲ್ಲಿ ಬರುವ ಸ್ಕ್ರೀನ್ ಲಾಕ್ ಎಂಬ ಹೊಸ ಫೀಚರ್ನಲ್ಲಿ ವಾಟ್ಸ್‌ಆಯಪ್ ತೆರೆದ ಕೂಡಲೇ ಪ್ರತಿ ಬಾರಿ ಬಳಕೆದಾರರು ಪಾಸ್‌ವರ್ಡ್ ಬಳಸಬೇಕಾಗುತ್ತದೆ. ಬಳಕೆದಾರರು ತಮ್ಮ ಡೆಸ್ಕ್ಟಾಪ್ನಲ್ಲಿ ವಾಟ್ಸ್‌ಆಯಪ್ ಬಳಸದೇ ಇದ್ದಾಗ ಬೇರೆಯವರು ಅನಧಿಕೃತವಾಗಿ ಉಪಯೋಗಿಸದಂತೆ ನೆರವಾಗುವ ನಿಟ್ಟಿನಲ್ಲಿ ಈ ಫೀಚರ್ ತರಲು ಮುಂದಾಗಿದೆ ಎನ್ನಲಾಗಿದ್ದು, ಆದರೆ ಇದು ಕಡ್ಡಾಯವಲ್ಲ ಎಂಬುದನ್ನೂ ಕೂಡ ಗಮನಿಸಬೇಕು. ಬಳಕೆದಾರರು ಈ ಸ್ಕ್ರೀನ್ ಲಾಕ್ ಫೀಚರ್ ಅನ್ನು ಬೇಕಾದಾಗ ಮಾತ್ರ ಬಳಕೆ ಮಾಡಬಹುದಾಗಿದೆ..