ಶಾಕಿಂಗ್ ನ್ಯೂಸ್ : ಮದ್ಯಪ್ರಿಯರೇ ಗಮನಿಸಿ : ಡಿಸೆಂಬರ್ ನಿಂದ ದುಬಾರಿಯಾಗಲಿದೆ ಮದ್ಯ

ಕೇರಳದಲ್ಲಿ ಇನ್ನೂ ಮದ್ಯ ಪ್ರಿಯರಿಗೆ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ದಟ್ಟವಾಗಿದೆ. ಮದ್ಯ ಮಾರಾಟದ ಮೇಲಿನ ಆದಾಯ ತೆರಿಗೆಯನ್ನು ರದ್ದುಗೊಂಡ ಹಿನ್ನಲೆ ನಷ್ಟವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಮಾರಾಟ ತೆರಿಗೆಯನ್ನು ಶೇ. 4ರಷ್ಟು ಹೆಚ್ಚಿಸಲು ಸಂಪುಟ ಸಭೆ ಅನುಮತಿ ಸೂಚಿಸಿದೆ. ಹಾಗಾಗಿ, ಮದ್ಯದ ಬೆಲೆ ಏರಿಕೆ ಕಂಡು ಬರುವ ಲಕ್ಷಣಗಳು ಗೋಚರಿಸುತ್ತಿವೆ.

 

ದೇಶದಲ್ಲಿ ಮದ್ಯ ಮಾರಾಟದ ಮೇಲೆ ಹೆಚ್ಚಿನ ತೆರಿಗೆ ಹೇರುವ ರಾಜ್ಯಗಳಲ್ಲಿ ಕೇರಳ ಕೂಡ ಒಂದಾಗಿದ್ದು, ಸದ್ಯ ಕೇರಳದಲ್ಲಿ ವಿದೇಶಿ ಮದ್ಯದ ಮೇಲಿನ ಮಾರಾಟ ತೆರಿಗೆ ಶೇ. 247ರಷ್ಟಿದೆ ಎನ್ನಲಾಗಿದೆ. ದರ ಹೆಚ್ಚಳದೊಂದಿಗೆ ಇದು ಶೇ. 251ಕ್ಕೆ ಏರಿಕೆಯಾಗಲಿದೆ. 1 ಸಾವಿರ ರೂ. ಮೌಲ್ಯದ ಮದ್ಯಕ್ಕೆ 2,510 ರೂ. ಮಾರಾಟ ತೆರಿಗೆ ವಸೂಲಿ ಮಾಡಲಾಗುತ್ತದೆ. ಇದರ ಜೊತೆಗೆ ಸಾಮಾನ್ಯ ಮಾರುಕಟ್ಟೆ ಬೆಲೆಯಲ್ಲಿ ಶೇ. 2 ದರ ಹೆಚ್ಚಳ ಪರಿಣಾಮ ಬೀರಲಿದೆ.

ರಾಜ್ಯದಲ್ಲಿ ಉತ್ಪಾದನೆಯಾಗುವ ಮದ್ಯದ ಮೇಲೆ ಶೇ. 5 ಆದಾಯ ತೆರಿಗೆ ವಿಧಿಸಲಾಗುತ್ತದೆ. ಇದನ್ನು ರದ್ದು ಮಾಡುವ ನಿಟ್ಟಿನಲ್ಲಿ ಮದ್ಯ ತಯಾರಿಕಾ ಕಂಪನಿಗಳು ಸರಕಾರದ ಮೇಲೆ ಒತ್ತಡ ಹೇರಿದ್ದು, ವಿತರಣೆ ನಿಲ್ಲಿಸುವ ಮೂಲಕ ಬೆದರಿಕೆ ಕೂಡ ಮಾಡಲಾಗಿತ್ತು. ಹೀಗಾಗಿ, ಕೇರಳ ರಾಜ್ಯದಲ್ಲಿ ಅಗ್ಗದ ಮದ್ಯ ಲಭಿಸುತ್ತಿರಲಿಲ್ಲ ಎನ್ನಲಾಗಿದೆ.

ಡಿಸೆಂಬರ್‌ 5ರಿಂದ ಆರಂಭವಾಗಲಿರುವ ಕೇರಳ ವಿಧಾನಸಭೆ ಅಧಿವೇಶನದಲ್ಲಿ ಮದ್ಯ ಮಾರಾಟದ ಮೇಲಿನ ತೆರಿಗೆಯನ್ನು ಹೆಚ್ಚಿಸಲು ಮಸೂದೆಯನ್ನು ಮಂಡಿಸಲಾಗಲಿದ್ದು, ಮದ್ಯ ಮಾರಾಟ ತೆರಿಗೆ ಹೆಚ್ಚಿಸಲು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ನಿಯಮದಲ್ಲಿ ತಿದ್ದುಪಡಿ ತರಲಾಗುತ್ತದೆ.ಪ್ರಸ್ತುತ, ಕೇರಳದಲ್ಲಿ ಮದ್ಯದ ಬೆಲೆ ಏರಿಕೆಯಾಗಲಿದೆ.

ಮದ್ಯ ಮಾರಾಟದ ಮೇಲಿನ ಆದಾಯ ತೆರಿಗೆಯನ್ನು ರದ್ದುಗೊಳಿಸಲಾಗಿದ್ದು, ಇದರಿಂದ ಉಂಟಾಗುವ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಮಾರಾಟ ತೆರಿಗೆಯನ್ನು ಶೇ. 4ರಷ್ಟು ಹೆಚ್ಚಿಸಲು ಸಂಪುಟ ಸಭೆ ಕರೆದು ಅನುಮತಿ ಸೂಚಿಸಿದೆ ಎನ್ನಲಾಗಿದೆ.

ಹಾಗಾಗಿ, ಮದ್ಯದ ಮೇಲಿನ ಆದಾಯ ತೆರಿಗೆಯನ್ನು ರದ್ದುಗೊಳಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದ್ದು,. ಇದರಿಂದ ಸರಕಾರಕ್ಕೆ 150 ಕೋಟಿ ರೂ. ಆದಾಯಕ್ಕೆ ಹೊಡೆತ ಬೀಳಲಿದೆ. ಈ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಮದ್ಯದ ಬೆಲೆ 10 ರಿಂದ 15 ರೂ.ವರೆಗೆ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂಬ ಕುರಿತು ಬೆವ್ಕೋ ಅಧಿಕಾರಿಗಳು ಮಾಹಿತಿ ನೀಡಿದೆ ಎನ್ನಲಾಗುತ್ತಿದೆ

Leave A Reply

Your email address will not be published.