ರಶ್ಮಿಕಾ ಮಂದಣ್ಣ ಕಳಪೆ ನಟಿ ಹಾಗೂ ಮಹಾ ಸುಂದರಿಯೇನಲ್ಲಾ – ಈ ಮಾತು ಹೇಳಿದ್ದು ಇವರೇ ನೋಡಿ!!!
ಸಾಕಷ್ಟು ಸಿನಿಮಾಗಳ ಮೂಲಕ ಜನಪ್ರೀಯತೆ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಟ್ರೋಲ್ ಗಳಿಗೆ ಒಳಗಾಗುತ್ತಿದ್ದಾರೆ,ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಈ ಬಗ್ಗೆ ಗಮನಿಸಿದ ಸಾಹಿತಿ ಗುರುರಾಜ ಕೊಡ್ಕಣಿ ಅವರು ತಮ್ಮ ಕೆಲವೊಂದು ಮಾತುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರರಂಗದ ಎಲ್ಲಾ ನಟಿಯರಿಗೆ ರಶ್ಮಿಕಾಳನ್ನು ಹೋಲಿಸಿ ಈಕೆಗಿಂತ ಬೇರೆ ನಟಿಯರೇ ವಾಸಿ. ರಶ್ಮಿಕಾ ಮಂದಣ್ಣ ಕಳಪೆ ನಟಿ ಮತ್ತು ಆಕೆಗಿರುವ ಹೆಸರಿಗೆ ಹೇಳಿಕೊಳ್ಳುವಷ್ಟು ಮಹಾ ಸುಂದರಿಯೇನಲ್ಲಾ!!ಆದರೆ ಆಕೆಯ ಹುಟ್ಟುಹಬ್ಬದ ದಿನದಂದು ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದಾಗ ನನಗೆ ರಕ್ಷಿತ್ ಮನಸ್ಥಿತಿಯ ಬಗ್ಗೆ ಸಣ್ಣ ಅನುಮಾನ ಮೂಡಿತು.ಯಾಕಂದ್ರೆ ಈ ಹಿಂದೆ ಆತ ಪೋಸ್ಟ್ ಹಾಕಿದ್ದಾಗ ನೆಟ್ಟಿಗರಿಂದ ಅವರ ಪ್ರೇಮದ ಪ್ರಶಂಸೆಯ ಜೊತೆಗೆ ರಶ್ಮಿಕಾಗೆ ಮಂಗಳಾರತಿ ಆಗಿತ್ತು. ಆದರೂ ಈ ಬಾರಿಯೂ ಪೋಸ್ಟ್ ಮಾಡಿದ್ದರಿಂದ ಈತನಿಗೆ ಇದರಲ್ಲೊಂದು ಸಣ್ಣ ವಿಕೃತಾನಂದ ಇರಬಹುದಾ? ಎಂದೆನಿಸಿತ್ತು.
ಇದೀಗ ರಶ್ಮಿಕಾ ಮಂದಣ್ಣ ಹಲವಾರು ಜನರಿಂದ ಕೇಳಿಸಿಕೊಂಡ ಟೀಕೆಗಳು ಕಡಿಮೆಯೇನೂ ಇಲ್ಲ. ಹಾಗೇ ಒಂದು ಟ್ರೋಲ್ ಪೇಜಿನವರು ಆಕೆಯ ಬಾಲ್ಯದ ಚಿತ್ರವನ್ನಿಟ್ಟು ,’ಈಕೆ ಮುಂದೊಂದು ದಿನ —— ಆಗುತ್ತಾಳೆಂದು ಯಾರಿಗೆ ಗೊತ್ತಿತ್ತು’ ಎಂಬ ಅತಿವಿಕಾರದ ಪೋಸ್ಟ್ ಹಾಕಿದ್ದುಂಟು, ಈ ಪೋಸ್ಟ್ ನಿಂದ ಆಕೆ ಮನನೊಂದು ಪ್ರತಿಕ್ರಿಯೆ ನೀಡಿದ್ದೆಲ್ಲವೂ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಆದರೂ ಈ ಎಲ್ಲಾ ಹೀನಾತಿಹೀನ ವರ್ತನೆಗಳ ನಂತರವೂ, ಟೀಕೆ,ತುಳಿತಗಳ ನಂತರವೂ ಆಕೆ ಬೆಳೆದು ನಿಂತಿರುವುದು ನನಗೆ ಒಂದು ಬಾರಿ ಅಚ್ಚರಿ, ಮೆಚ್ಚುಗೆಗಳ ಮಿಶ್ರಭಾವ ಉಂಟಾಗಿರುವುದು ಸಹ ಸುಳ್ಳಲ್ಲ.
ಮೆಚ್ಚುಗೆ ಉಂಟಾಯಿತೆಂದು ಆಕೆ ಮಾಡಿದ್ದೆಲ್ಲವೂ ಸರಿ ಎಂಬುದು ನನ್ನ ಮಾತಿನ ಅರ್ಥವಲ್ಲ. ಹಾಗೇ ಈ ಬಾರಿಯ ಆಕೆಯ ವರ್ತನೆಗೆ ನನ್ನ ವಿರೋಧವಿದೆ. ಯಾಕೆಂದರೆ, ವೃತ್ತಿ ಬದುಕಿನುದ್ದಕ್ಕೂ ವ್ಯಂಗ್ಯ ವಿಕಾರಗಳನ್ನೇ ಎದುರಿಸುತ್ತ ಬಂದ ಆಕೆಗೆ ತನ್ನನ್ನು ಮೊದಲ ಬಾರಿಗೆ ಜನರಿಗೆ,ಚಿತ್ರರಂಗಕ್ಕೆ ಪರಿಚಯಿಸಿದ ನಿರ್ಮಾಪಕರ ಬಗ್ಗೆ ವ್ಯಂಗ್ಯ ಬೇಡವಿತ್ತು. ಈಕೆಗಿಂತ ಅನಿಲ್ ಕಪೂರ್ ರಂತಹ ನಟರೇ ವಾಸಿ ತಮ್ಮ ಮೊದಲ ಸಿನಿಮಾವನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಆದರೆ ರಶ್ಮಿಕಾ ತನ್ನ ಮೊದಲ ಸಿನಿಮಾದ ನಿರ್ಮಾಪಕರ ಹೆಸರು ಹೇಳುವಾಗ ಸುಮ್ಮನೇ ಕೈಬೆರಳೆತ್ತಿ ” This Production House ” ಎಂದದ್ದು ನೋಡುಗರೆಲ್ಲರಲ್ಲೂ ಅದು ಆಕೆಯ ಅಹಮಿಕೆಯ ಭಾವವಾಗಿ ಗೋಚರಿಸುತ್ತದೆ. ಅಹಂ, ಇದೇ ಈಕೆಯ ಈಗಿನ ಪರೀಸ್ಥಿತಿಗೆ ಕಾರಣವೇ ಹೊರತು ಮತ್ತೇನಲ್ಲ. ಆಕೆಯ ಅನಗತ್ಯದ ವರ್ತನೆಯಿಂದ ಗಾಜಿನ ಮನೆಯನ್ನು ಸೃಷ್ಟಿಸಿಕೊಂಡಿದ್ದಲ್ಲದೇ ಕಲ್ಲನ್ನೂ ಸಹ ಎತ್ತೆಸೆದಳು. ಜೊತೆಗೆ ಒಂದಷ್ಟು ಕಲ್ಲುಗಳು ಆಕೆಯತ್ತ ತೂರಿ ಬರುವಾಗ ‘ಅಯ್ಯಯ್ಯೊ ಬಿಟ್ಬಿಡಿ ಪಾಪದ ಹುಡುಗಿ’ ಎನ್ನುವುದರಲ್ಲಿ ಅರ್ಥವೇನೂ ಇಲ್ಲ ಎಂದು ರಶ್ಮಿಕಾ ಮಂದಣ್ಣ ತಾನೇ ತೋಡಿಕೊಂಡ ಹೊಂಡಕ್ಕೆ ತಾನೇ ಬಿದ್ದಳು ಎಂದು ಗುರುರಾಜ ಕೊಡ್ಕಣಿ ಅವರು ಹೇಳಿದರು.