Delhi Murder Case : ಪಾಲಿಗ್ರಾಫ್ ಪರೀಕ್ಷೆ ಸಂದರ್ಭ ಆರೋಪಿ ಅಫ್ತಾಬ್ ಗೆ ಕೇಳಿದ ಪ್ರಶ್ನೆಗಳಿವು | ಅಫ್ತಾಬ್ ನೀಡಿದ ಉತ್ತರವೇನು?

ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಭೀಕರ ಕೃತ್ಯದ ರೂವಾರಿ ಎಂದೇ ಪರಿಗಣಿಸಲ್ಪಟ್ಟಿರುವ ಮುಖ್ಯ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾಗೆ ಶುಕ್ರವಾರ ಎರಡನೇ ದಿನದ ಫಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲಾಗಿದೆ.ದಿನಕ್ಕೊಂದು ಹೊಸ ಕಥೆ ಹೆಣೆದು ಖಾಕಿ ಪಡೆಯನ್ನೇ ನಡುಕ ಹುಟ್ಟಿಸಿ ದಿಕ್ಕು ತಪ್ಪಿಸುವ ಸಲುವಾಗಿ ಕೊಲೆ ಪ್ರಕರಣದ ಕುರಿತಾಗಿ ಏನೇನೋ ಸಬೂಬು ನೀಡುತ್ತಿದ್ದ ಆರೋಪಿಯನ್ನು ಫಾಲಿಗ್ರಾಫ್ ಪರೀಕ್ಷೆ ಒಳಪಡಿಸಲಾಗಿದೆ.

ಫಾಲಿಗ್ರಾಫ್ ಪರೀಕ್ಷೆಗೆ ಸಾಕೇತ್ ಜಿಲ್ಲಾ ನ್ಯಾಯಲಯ ಅನುಮತಿ ನೀಡಿದ ಬಳಿಕ ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿದ್ದು,. ಪರೀಕ್ಷೆ ತೀವ್ರವಾಗುತ್ತಿದ್ದಂತೆ ಕೆಮ್ಮು ಆರಂಭಿಸಿದ ಅಫ್ತಾಬ್ ನಾಡಿ ಮಿಡಿತ, ಹೃದಯ ಬಡಿತ, ಮಾನಸಿಕ ಒತ್ತಡ ಸರಿಯಾಗಿ ದಾಖಲಾಗಿಲ್ಲ ಎನ್ನಲಾಗುತ್ತಿದೆ.

ಸುಮಾರು ಮೂರು ಗಂಟೆಗಳ ಕಾಲ ನಡೆದ ಪರೀಕ್ಷೆಯಲ್ಲಿ ಹಲವು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ, ಇನ್ನು ಕೆಲವು ಪ್ರಶ್ನೆಗಳಿಗೆ ಏನು ಉತ್ತರಿಸಿದೆ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ. ಅಫ್ತಾಬ್ ಪ್ರಕರಣದಿಂದ ನುಣುಚಿಕೊಳ್ಳುವ ಸಲುವಾಗಿ ಉದ್ದೇಶಪೂರ್ವಕ ವಾಗಿ ಅನಾರೋಗ್ಯಕ್ಕೆ ತುತ್ತಾದಂತೆ ನಟಿಸುತ್ತಿದ್ದು ಹಾಗಾಗಿ, ಪರೀಕ್ಷೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಮುಂದಿನ ಪರೀಕ್ಷೆಯಲ್ಲಿ ಅಫ್ತಾಬ್ ಪೊಲೀಸರನ್ನು ಯಾಮರಿಸುವ ಪ್ರಯತ್ನ ನಡೆಸಿದರೆ, ನಾರ್ಕೊ ವಿಶ್ಲೇಷಣೆ ಪರೀಕ್ಷೆ ನಡೆಸುವ ಸಾಧ್ಯತೆ ದಟ್ಟವಾಗಿದೆ.

ಶುಕ್ರವಾರ ನಡೆದ ಫಾಲಿಗ್ರಾಫ್ ಪರೀಕ್ಷೆಯಲ್ಲಿ ಪೊಲೀಸರು ಪ್ರಶ್ನೆಗಳ ಸುರಿಮಳೆ ಗೈದಿದ್ದು, ಅದರಲ್ಲಿ ಕೂಡ ಶ್ರದ್ಧಾಳನ್ನು ಕೊಂದಿದ್ದು ಏಕೆ??? ಈ ಕೊಲೆ ನಡೆಸಲು ಯಾವ ಸಾಧನ ಬಳಕೆ ಮಾಡಿದ್ದು ಜೊತೆಗೆ ಶ್ರದ್ಧಾ ದೇಹವನ್ನು ಕತ್ತರಿಸಿದ್ದು ಹೇಗೆ?? ಹೀಗೆ ಭೀಕರ ಕೃತ್ಯ ಎಸಗಿದಾಗ ತಪ್ಪಿತಸ್ಥ ಭಾವನೆ ಇರಲಿಲ್ಲವೇ?? ಕತ್ತರಿಸಿದ ದೇಹದ ಭಾಗಗಳನ್ನು ಯಾವೆಲ್ಲ ಕಡೆಗಳಲ್ಲಿ ಎಸೆದಿದ್ದೀರಿ? ಶ್ರದ್ಧಾ ವಾಕರ್ ಹತ್ಯೆ ಮಾಡಿದ ಬಳಿಕ ನೀವು ಏನೆಲ್ಲಾ ಮಾಡಿದ್ದೀರಾ?? ಶ್ರದ್ದಾ ಳನ್ನು ಕೊಲ್ಲುವ ಏಕೈಕ ಉದ್ದೇಶದಿಂದ ದೆಹಲಿಗೆ ಕರೆತಂದದ್ದಾ? ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನಲಾಗಿದೆ.

ಅಷ್ಟಕ್ಕೂ ಈ ಪಾಲಿಗ್ರಾಫ್ ಪರೀಕ್ಷೆ ಎಂದರೇನು

ಒಂದು ನಿರ್ದಿಷ್ಟ ಘಟನೆಯ ಬಗ್ಗೆ ಅಭ್ಯರ್ಥಿಯನ್ನು ಕೇಳಿದಾಗ, ಆ ವ್ಯಕ್ತಿಯು ಸತ್ಯ ಹೇಳುತ್ತಾ ಇದ್ದನಾ ?? ಅಥವಾ ಸುಳ್ಳು ಹೇಳುತ್ತಿದ್ದಾನಾ ಎಂದು ಪರೀಕ್ಷಿಸಿ ಪತ್ತೆ ಹಚ್ಚಲು ಅನುಮತಿಸುವ ದತ್ತಾಂಶವನ್ನು ಪರದೆಯು ಪ್ರದರ್ಶಿಸುತ್ತದೆ.ಈ ಪ್ರಕ್ರಿಯೆಗೆ ಪಾಲಿಗ್ರಾಫ್‌ ಪರೀಕ್ಷೆ ಎಂದು ಕರೆಯಲಾಗುತ್ತದೆ.

ಈ ಪರೀಕ್ಷೆ ಮಾನವನ ದೇಹದ ಮೇಲೆ ಸೆನ್ಸಾರ್‌ಗಳನ್ನು ಸ್ಥಾಪಿಸಿ, ಅದರ ಸಹಾಯದಿಂದ, ಪ್ರಶ್ನೆಯನ್ನು ಕೇಳಿದ ಸಮಯದಲ್ಲಿ ದೇಹದಲ್ಲಿ ಸಂಭವಿಸುವ ಜೈವಿಕ ಭೌತಿಕ ಬದಲಾವಣೆಗಳನ್ನು ಪತ್ತೆಹಚ್ಚಲು ನೆರವಾಗುತ್ತವೆ.

Leave A Reply

Your email address will not be published.