Nivedita Gowda : ಸೋಲೋ ಟ್ರಿಪ್ ಗೆ ಹೋದ ನಿವಿಯ ಕಾಲೆಳೆದ ನೆಟ್ಟಿಗರು | ಚಂದನ್ ಹಣ ಖರ್ಚು ಮಾಡೋದೇ ನಿನ್ನ ಕೆಲಸ ಎಂದವರಿಗೆ ಗೊಂಬೆ ಕೊಟ್ಟಳು ಖಡಕ್ ಉತ್ತರ!

ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರೋ ನಿವೇದಿತಾ ಗೌಡ ಇದೀಗ ಅದೇ ಸೋಷಿಯಲ್ ಮೀಡಿಯಾದಲ್ಲಿ ಗರಂ ಆಗಿ ನೆಗೆಟಿವ್ ಕಾಮೆಂಟ್ ಮಾಡೋ ನೆಟ್ಟಿಗರಿಗೆ ಟಾಂಗ್ ಕೊಟ್ಟಿದ್ದಾರೆ. ಕ್ಯೂಟ್ ನಿವಿ ಹೇಗೆ ಟಾಂಗ್ ಕೊಟ್ಟಿರ್ಬಹುದು ಅಂತಾ ನೋಡ್ಲೇಬೇಕು ಅಲ್ವಾ!!

ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಬಾಲಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಪತಿ ಚಂದನ್‌ ಶೆಟ್ಟಿಯನ್ನು ಬಿಟ್ಟು ಸೋಲೋ ಟ್ರಿಪ್‌ನ ಎಂಜಾಯ್ ಮಾಡ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋ ಕೂಡ ಹಂಚಿಕೊಂಡಿದ್ದರು. ನಿವಿಯ ಹಾಟ್ ಅಂಡ್ ಕ್ಯೂಟ್ ಫೋಟೋ ನೋಡಿ ನೆಟ್ಟಿಗರು ಕಾಮೆಂಟ್ ನ ಮಳೆ ಸುರಿಸಿದ್ದಾರೆ. ಅದರಲ್ಲಿ ಎಷ್ಟು ಪಾಸಿಟಿವ್ ಕಾಮೆಂಟ್ ಇತ್ತು. ಅಷ್ಟೇ ನೆಗೆಟಿವ್ ಕಾಮೆಂಟ್ ಕೂಡ ಇದೆ. ಮೊದಲೇ ಈ ಹಿಂದಿನ ನೆಗೆಟಿವ್ ಕಾಮೆಂಟ್ ಗಳಿಗೆ ಬೇಸತ್ತಿದ್ದ ನಿವಿ ಈ ಬಾರಿಯ ಕಾಮೆಂಟ್ ಗೆ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ನೆಗೆಟಿವ್ ಕಾಮೆಂಟ್ಗಳಲ್ಲಿ, ಗಂಡ ದುಡಿದ ದುಡ್ಡಿನಲ್ಲಿ ಒಬ್ಬಳೇ ಎಂಜಾಯ್ ಮಾಡುತ್ತಿದ್ದೀಯಾ? ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಈ ಕಾಮೆಂಟ್ ಗೆ ನಿವೇದಿತಾ ಗೌಡ ಗರಂ ಆಗಿ ಖಾರವಾಗಿ ಉತ್ತರ ನೀಡಿದ್ದಾರೆ. ಪ್ರತಿಯೊಬ್ಬರ ಕಾಮೆಂಟ್ ಗಳಿಗೆ ನಾನು ಪ್ರತಿಕ್ರಿಯೆ ಕೊಡಬೇಕು ಎಂದೇನು ಇಲ್ಲ. ಆದರೆ ಜನರಿಗೆ ಬೇಸಿಕ್ ಕಾಮನ್‌ಸೆನ್ಸ್ ಕೂಡ ಇಲ್ಲ ನಾವು ಪ್ರವಾಸದಲ್ಲಿದ್ದಾಗ ಹಣ ಕೊಟ್ಟರೆ ಫೋಟೋ ಕ್ಲಿಕ್ ಮಾಡಲೆಂದು ಯಾರಾದರೂ ಇರುತ್ತಾರೆ. ಮನೆಯಲ್ಲಿ ಕುಳಿತು ಸುಮ್ಮನೆ ಕಾಮೆಂಟ್ ಮಾಡುವ ಬದಲು ನೀವು ಕೂಡ ಬೇರೆ ಬೇರೆ ಪ್ರದೇಶಗಳಿಗೆ ಪ್ರಯಾಣ ಬೆಳೆಸಿ ಆಗ ನಿಮಗೂ ಹೇಗೆ? ಏನು? ಎಂಬ ಬಗ್ಗೆ ಸ್ವಲ್ಪವಾದರೂ ಜ್ಞಾನ ಸಿಗುತ್ತದೆ ಎಂದು ನಿವೇದಿತಾ ಬರೆದುಕೊಂಡಿದ್ದಾರೆ.

ಹಾಗೇ ನಾನು ನನ್ನ ಗಂಡನ ದುಡ್ಡನ್ನು ಖಾಲಿ ಮಾಡಿದ್ದು ಅಥವಾ ಗಂಡನ ಹಣದಲ್ಲಿ ಪ್ರವಾಸ ಮಾಡಿರುವುದು ನೀವು ಕಂಡಿದ್ದೀರಾ!!
ನಾನೂ ಕೂಡ ಸ್ವತಂತ್ರಳು. ನನ್ನ ಕೈಯಲ್ಲಿ ಕೂಡ ಕೆಲಸ ಇದೆ. ನನ್ನ ಅಗತ್ಯಗಳನ್ನು ನಾನೇ ನೋಡಿಕೊಳ್ಳುವ ಶಕ್ತಿ ನನಗಿದೆ. ಒಂದು ವೇಳೆ ಪತಿಯ ಹಣ ಖರ್ಚು ಮಾಡಿದರೆ ನಿಮಗೇನು ಸಮಸ್ಯೆ? ಎಂದು ಹೇಳುವ ಮೂಲಕ ನೆಗೆಟಿವ್ ಕಾಮೆಂಟಿಗರ ಬಾಯಿ ಮುಚ್ಚಿಸಿದ್ದಾರೆ.

ಹಾಗೇ ಪಾಸಿಟಿವ್ ಕಾಮೆಂಟ್ ಬಗ್ಗೆ ಕೂಡ ಬರೆದಿದ್ದಾರೆ. ಎಷ್ಟೇ ನೆಗೆಟಿವ್ ಜನರು ಇದ್ದರೂ ಕೂಡ ನನ್ನ ಪರವಾಗಿ ಮಾತನಾಡುವ ಜನರಿದ್ದಾರೆ. ಅವರಿಗೆ ನನ್ನ ಕಡೆಯಿಂದ ತುಂಬಾ ಥ್ಯಾಂಕ್ಸ್. ಕೆಟ್ಟ ಜನರ ನಡುವೆ ಒಳ್ಳೆಯ ಪ್ರಪಂಚ, ಜನರಿದ್ದಾರೆ ಎಂದು ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/p/ClYU5IEJFA3/?igshid=YmMyMTA2M2Y=

Leave A Reply

Your email address will not be published.