ಪತಿಗೆ ಹೊಡೆಯಿತು 1.3 ಕೋಟಿ ಲಾಟರಿ | ಲಾಟರಿ ಹೊಡೆದದ್ದೇ ಹೊಡೆದದ್ದು, ದುಡ್ಡಿನ ಜೊತೆ ಪತ್ನಿ ಪ್ರಿಯಕರನ ಜೊತೆ ಎಸ್ಕೇಪ್!

ಲಾಟರಿ ಟಿಕೆಟ್ ಮೂಲಕ ಹಣ ಸಿಕ್ಕರೆ ನಿಜಕ್ಕೂ ಸ್ವರ್ಗಕ್ಕೆ ಮೂರೇ ಗೇಣು ಎಂದೇ ಹೇಳಬಹುದು. ಆದರೆ ಇದು ಅದೃಷ್ಟವಂತರಿಗೆ ಮಾತ್ರ ಈ ಭಾಗ್ಯ ಸಿಗುತ್ತೆ ಎಂದೇ ಹೇಳಬಹುದು. ನಾವು ಎಷ್ಟೋ ಲಾಟರಿ ಹೊಡೆದ ಕಥೆ ಕೇಳಿದ್ದೀವಿ. ಆದರೆ ನಿಮಗೊಂದು ಇಲ್ಲಿ ನಾವು ಹೇಳ ಹೊರಟಿರೋ ಘಟನೆ ಕೇಳಿದರೆ ಜನ ಹೀಗೆ ಕೂಡಾ ಇರ್ತಾರ ಅಂತ ಅನಿಸದೆ ಇರದು.

 

ಈ ಘಟನೆ ನಡೆದಿರುವುಸು ಥಾಯ್ಲೆಂಡ್ ನಲ್ಲಿ. ಅಲ್ಲಿನ ಮನೀತ್ ಎಂಬಾತನಿಗೆ 1.3 ಕೋಟಿ ರೂಪಾಯಿ ಲಾಟರಿ ಹೊಡೆದಿತ್ತು. ಇದೇ ಖುಷಿಯಲ್ಲಿ ಕುಣಿದು, ನಲಿದಾಡಿದ ಮನೀತ್ ತನ್ನ ಪತ್ನಿಯ ಜೊತೆಗೆ ಈ ವಿಚಾರವನ್ನು ಹಂಚಿಕೊಂಡು ಇನ್ನಷ್ಟು ಸಂಭ್ರಮಿಸಿದ. ಭಾರೀ ಸಂಭ್ರಮದಲ್ಲಿದ್ದ ಆತನಿಗೆ ಒಂದು ಆಘಾತ ಕಾದಿದೆ ಎಂದು ಗೊತ್ತಿರಲಿಲ್ಲ. ಅದು ಆತನ ಪತ್ನಿಯ ರೂಪದಲ್ಲಿ ಇದೆ ಎಂದು ಆತ ಊಹೆ ಮಾಡೋಕೂ ಸಾಧ್ಯವಿರಲಿಲ್ಲ. ಹೇಗೆ ತಾನೇ ತಿಳಿಯಲು ಸಾಧ್ಯ. ಸುಖ-ದುಃಖದಲ್ಲಿ ಜೊತೆಯಾದ ಪತ್ನಿ ಈ ರೀತಿ ಮಾಡುತ್ತಾಳೆ ಅಂತಾ ಯಾರು ತಾನೇ ಊಹಿಸುತ್ತಾರೆ ಹೇಳಿ…

ಏನಾಯಿತು ಅಂದರೆ, ಬಂದ ಬಹುಮಾನದ ಹಣದಲ್ಲಿ ಒಂದಿಷ್ಟನ್ನು ದೇವಸ್ಥಾನಕ್ಕೆ ದೇಣಿಗೆ ನೀಡಿ, ಇನ್ನೊಂದಿಷ್ಟು ಕುಟುಂಬದ ಸದಸ್ಯರಿಗೂ ಹಾಗೂ ಸಂಬಂಧಿಕರಿಗೆ ಹಂಚೋದಾಗಿ ಮನೀತ್ ಪ್ಲಾನ್ ಮಾಡಿದ್ದ. ಹಣ ಹಂಚುವುದಕ್ಕೆ ಒಂದು ಕಾರ್ಯಕರ್ಮವನ್ನು ಏರ್ಪಡಿಸಿದ್ದ. ಕಾರ್ಯಕ್ರಮದ ಒಬ್ಬ ಅಪರಿಚಿತ ವ್ಯಕ್ತಿ, ಮನೀತ್ ಬಳಿ ಬಂದು ಆತನ ಪತ್ನಿ ಅಂಗಕನಾರಾತ್ ಬಗ್ಗೆ ಕೇಳಿದ್ದಾನೆ. ಆಕೆಯ ಸಂಬಂಧಿಕ ನಾನು ಎಂದು ಹೇಳಿದ್ದಾನೆ.

ಆದರೆ ಕಹಾನಿ ಮೆ ಟ್ವಿಸ್ಟ್ ಅನ್ನೋ ಹಾಗೇ, ಕಾರ್ಯಕ್ರಮ ಮುಗಿಯುತ್ತಿದ್ದಂತೆ ಆ ಅಪರಿಚಿತ ವ್ಯಕ್ತಿಯ ಜೊತೆ ಪತ್ನಿ ಹಣದ ಸಮೇತ ಓಡಿ ಹೋಗಿದ್ದಾಳೆ. ಮನೀತ್ ಮತ್ತು ಅಂಗಕನಾರಾತ್ ದಂಪತಿಗೆ ಮೂವರು ಮಕ್ಕಳ ಇದ್ದರು. ಆದರೆ, ಇಬ್ಬರದ್ದು ಅಧಿಕೃತ ಮದುವೆ ಎಂದು ಸಾಬೀತುಪಡಿಸುವ ಯಾವುದೇ ಸಾಕ್ಷಿ ಇಲ್ಲದ ಕಾರಣ ಹಣ ಹಿಂಪಡೆಯುವುದು ಕಷ್ಟಕರವಾಗಿದೆ. ಸದ್ಯ ದೂರು ದಾಖಲಾಗಿದ್ದು, ಅಂಗಕನಾರತ್ ಸಿಕ್ಕ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Leave A Reply

Your email address will not be published.