ಇನ್ನು ಮುಂದೆ ಐಫೋನ್ ನಲ್ಲೂ ಬರುತ್ತೆ ಚಾರ್ಜರ್ – ಸರಕಾರ ನಿರ್ಧಾರ!!

ಆ್ಯಪಲ್‌ ಮೊಬೈಲ್‌ಗಳು ನವೀನ ವೈಶಿಷ್ಟ್ಯದ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟು ತಮ್ಮದೇ ಬ್ರಾಂಡ್ ನಿರ್ಮಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿರುವುದಲ್ಲದೆ, ಅದರ ಬೆಲೆ ದುಬಾರಿಯಾದರೂ ಕೂಡ ಆ್ಯಪಲ್ ಕಂಪನಿಯ ಮೊಬೈಲ್ ಕೊಳ್ಳುವ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಆದರೆ, ಈ ನಡುವೆ ಆ್ಯಪಲ್ ಕಂಪೆನಿಗೆ ಸಂಕಷ್ಟವೊಂದು ಎದುರಾಗಿದೆ.

ವರ್ಷದಿಂದ ವರ್ಷ ಮಾರುಕಟ್ಟೆಯಲ್ಲಿ ನವೀನ ಮಾದರಿಯ ಸ್ಮಾರ್ಟ್​ಫೋನ್​ ಅನ್ನು ಆ್ಯಪಲ್ ಕಂಪೆನಿ ಬಿಡುಗಡೆ ಮಾಡುತ್ತಿರುವ ಆ್ಯಪಲ್ ಕಂಪನಿ ಆರ್ಥಿಕ ಸಮಸ್ಯೆಯಲ್ಲಿರುವುದರಿಂದ, ಆ್ಯಪಲ್​ ತನ್ನ 12 ಸೀರಿಸ್​ ರಿಲೀಸ್ ಬಳಿಕ, ಆ್ಯಪಲ್ ಐಫೋನ್​ಗಳಲ್ಲಿ ಚಾರ್ಜರ್ ಅನ್ನು ನೀಡುವುದನ್ನು ನಿಲ್ಲಿಸಿದೆ. ಆದರೆ, ಐಫೋನ್ ಜೊತೆಗೆ ಚಾರ್ಜರ್ ಅನ್ನು ಕೂಡ ನೀಡಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ.

ಅಂತರಾಷ್ಟ್ರೀಯ ಟೆಕ್ ಕಂಪನಿ ಆ್ಯಪಲ್ (Apple)ಇದೀಗ ಸಂಕಷ್ಟದಲ್ಲಿದ್ದು, ಹೊಸ ಐಫೋನ್ (IPhone) ಖರೀದಿಸುವ ಗ್ರಾಹಕರಿಗೆ ಫೋನ್ ಜೊತೆಗೆ ಚಾರ್ಜರ್ (Charger) ನೀಡದೆ ಇರುವ ಹಿನ್ನೆಲೆ ಐಫೋನ್ ಗ್ರಾಹಕರ ಟೀಕೆಗೆ ಗುರಿಯಾಗಿದೆ. ಆ್ಯಪಲ್ ಕಂಪನಿಯು ಇತ್ತೀಚೆಗೆ ಐಫೋನ್‌ಗಳ ಜೊತೆಗೆ ಐಫೋನ್ ಚಾರ್ಜರ್‌ಗಳನ್ನು ನೀಡುವುದನ್ನು ಸ್ಥಗಿತಗೊಳಿಸಿದ್ದು, ಹೀಗಾಗಿ, ಬ್ರೆಜಿಲ್‌ನ ವಿವಿಧ ಮಾರುಕಟ್ಟೆಗಳಿಂದ ಬ್ರೆಜಿಲ್​ನ ಕೆಲ ಅಧಿಕಾರಿಗಳು ನೂರಾರು ಐಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.


ಚಾರ್ಜರ್ ಇಲ್ಲದೆ ಐಫೋನ್‌ಗಳನ್ನು ಮಾರಾಟ ಮಾಡಬಾರದು ಎಂಬ ಇತ್ತೀಚಿನ ಆದೇಶವನ್ನು ಕಂಪನಿಗಳು ಪಾಲಿಸಬೇಕು ಎಂದು ಬ್ರೆಜಿಲ್ ಸ್ಪಷ್ಟಪಡಿಸಿದ್ದು, ಇದರ ಭಾಗವಾಗಿ ಆ್ಯಪಲ್ ಕಂಪನಿಯ ಮೇಲೆ ಸರ್ಕಾರ ಕ್ರಮ ಕೈಗೊಂಡಿದೆ. ಈ ರೈಡ್ ಗೆ ‘ಆಪರೇಷನ್ ಡಿಸ್ಚಾರ್ಜ್’ (Operation Discharge) ಎಂದು ಹೆಸರಿಡಲಾಗಿದ್ದು, ಐಫೋನ್​ ಚಾರ್ಜರ್ (Iphone Charger)​ ನೀಡದಿರುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಸುದ್ದಿ ಕೂಡ ಹಬ್ಬಿದೆ. ಇದರ ಜೊತೆಗೆ ಐಫೋನ್ ಮಾರಾಟ ಮಾಡುವುದನ್ನು ನಿಷೇಧಿಸಿದೆ ಎಂದು ಕೆಲವರದಿಗಳು ಹೇಳಿವೆ.

ಹೀಗಾಗಿ, ಆ್ಯಪಲ್ ಕಂಪನಿ ಐಫೋನ್‌ಗಳ ಮಾರಾಟಕ್ಕೆ ಅನುಮತಿ ನೀಡುವಂತೆ ಅಲ್ಲಿನ ಸರ್ಕಾರಕ್ಕೆ ಮನವಿ ಸಲ್ಲಿಸಿದೆ ಎನ್ನಲಾಗಿದ್ದು, ಈ ಘಟನೆಯ ಕುರಿತು ನ್ಯಾಯಾಲಯದ ತೀರ್ಪು ನೀಡುವವರೆಗೆ ಐಫೋನ್‌ಗಳ ಮಾರಾಟಕ್ಕೆ ಅವಕಾಶ ನೀಡುವಂತೆ ಆಪಲ್ ಕೇಳಿದೆ ಎಂದು 9To5Mac ವರದಿ ಬಹಿರಂಗಪಡಿಸಿದೆ.

ಬ್ರೆಜಿಲ್ ಸೆಪ್ಟೆಂಬರ್‌ನಲ್ಲಿಯೂ ಆ್ಯಪಲ್ ವಿರುದ್ಧ ಕ್ರಮ ಕೈಗೊಂಡಿತ್ತು. ಐಫೋನ್ ಜೊತೆಗೆ ಚಾರ್ಜರ್ ಅನ್ನು ಮಾರಾಟ ಮಾಡದಿದ್ದಕ್ಕಾಗಿ ತಯಾರಕರಿಗೆ ಸುಮಾರು 2.5 ಮಿಲಿಯನ್ ಅಂದರೆ 25 ಲಕ್ಷ ದಂಡ ವಿಧಿಸಲಾಗಿತ್ತು. ಇದರ ಜೊತೆಗೆ, ಬ್ರೆಜಿಲ್‌ನಲ್ಲಿ ಐಫೋನ್‌ಗಳ ಮಾರಾಟದ ಮೇಲೆ ನಿಷೇಧವನ್ನು ಸಹ ವಿಧಿಸಲಾಗಿದೆ. ಈ ಬಳಿಕ ಮತ್ತೆ ಆ್ಯಪಲ್ ಕಂಪನಿ ಐಫೋನ್‌ಗಳನ್ನು ಮಾರಾಟ ಮಾಡಲು ಅನುಮತಿ ಪಡೆದಿದೆ.

ಮತ್ತೊಂದೆಡೆ, ಸಾಲಗಾರರು, ಗ್ರಾಹಕರು ಮತ್ತು ತೆರಿಗೆದಾರರ ಸಂಘಗಳು ಬ್ರೆಜಿಲ್‌ನ ಸಾವೊ ಪಾಲೊ ಸ್ಟೇಟ್ ಕೋರ್ಟ್‌ನಲ್ಲಿ ಆ್ಯಪಲ್ ವಿರುದ್ಧ ದೂರಿನ ಅರ್ಜಿಯನ್ನು ಸಲ್ಲಿಸಿದ್ದಾರೆ . ವಿಚಾರಣಾ ನ್ಯಾಯಾಲಯವು ಆ್ಯಪಲ್ ವಿರುದ್ಧ ತೀರ್ಪು ನೀಡಿದೆ. ಆ್ಯಪಲ್ ಕಂಪನಿಯು ತನ್ನ ಪ್ರೀಮಿಯಂ ಸಾಧನಗಳನ್ನು ಚಾರ್ಜರ್ ಇಲ್ಲದೆ ಮಾರಾಟ ಮಾಡುವ ಮೂಲಕ ಗ್ರಾಹಕರ ಬೇಡಿಕೆ ನೀಡುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿವೆ.

ಇಷ್ಟೇ ಅಲ್ಲದೆ, ಬ್ರೆಜಿಲ್ ಈ ಹಿಂದೆಯೂ ಆ್ಯಪಲ್ ಕಂಪನಿಯ ವಿರುದ್ಧ ಕ್ರಮ ಕೈಗೊಂಡಿದ್ದು, ಐಫೋನ್‌ಗಳಿಗೆ ಚಾರ್ಜರ್‌ಗಳನ್ನು ನೀಡದಿದ್ದಕ್ಕಾಗಿ ಸರ್ಕಾರ ಎರಡು ಬಾರಿ ದಂಡವನ್ನು ವಿಧಿಸಿದೆ ಎನ್ನಲಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ, ಕೆಲವೊಂದು ಮಾರುಕಟ್ಟೆಗಳಲ್ಲಿ ಐಫೋನ್‌ಗಳು ತಮ್ಮ ಮೊಬೈಲ್​ ಚಾರ್ಜರ್‌ಗಳನ್ನು ನೀಡದಕ್ಕಾಗಿ ಆಪಲ್‌ಗೆ ಬ್ರೆಜಿಲ್ 100 ಮಿಲಿಯನ್ ಅಂದರೆ ಸುಮಾರು ರೂ. 150 ಕೋಟಿ ದಂಡ ವಿಧಿಸಿದೆ. ಈ ಘಟನೆಯನ್ನು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ಆ್ಯಪಲ್ ಘೋಷಿಸಿದೆ.

ಚಾರ್ಜರ್ ಖರೀದಿಸಲು ಜನರು ಹೆಚ್ಚುವರಿ ವೆಚ್ಚ ಭರಿಸಬೇಕಾಗಿದ್ದು, ಇದಲ್ಲದೆ, ಆ್ಯಪಲ್ ಫೋನ್‌ನ ಬ್ಯಾಟರಿಯನ್ನು ಚಾರ್ಜ್ ಮಾಡಲು ಚಾರ್ಜರ್ ಒಂದು ಪ್ರಮುಖ ಪರಿಕರವಾಗಿದ್ದು, ಚಾರ್ಜರ್ ಇಲ್ಲದೇ ಇದ್ದರೆ ಫೋನ್ ಸರಿಯಾಗಿ ಕಾರ್ಯನಿರ್ವಹಣೆ ಮಾಡಲು ಸಾಧ್ಯವಿಲ್ಲ. ಇದೀಗ ನ್ಯಾಯಾಲಯದ ತೀರ್ಪಿನ ಪ್ರಕಾರ, ಆ್ಯಪಲ್ ಇನ್ನು ಮುಂದೆ ತನ್ನ ಬ್ರಾಂಡ್ ಅನ್ನು ಮಾರಾಟ ಮಾಡುವಾಗ ಚಾರ್ಜರ್ ಅನ್ನು ನೀಡಬೇಕೆಂದು ಹೇಳಲಾಗಿದೆ.

Leave A Reply

Your email address will not be published.