ಹೆಣ್ಮಕ್ಕಳೇ, ದಿನವೂ ನೀವು ಲಿಪ್ ಸ್ಟಿಕ್ ಬಳಸ್ತೀರಾ ? ಏನಾಗುತ್ತೆ ಆರೋಗ್ಯಕ್ಕೆ ?

ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಲು ಹಲವಾರು ಕಾರಣಗಳಿವೆ. ಅಂದರೆ ಡಿಯೋಡರೆಂಟ್‌ಗಳು, ಏರ್ ಫ್ರೆಶ್‌ನರ್‌ಗಳು, ಉಗುರು ಬಣ್ಣ, ಇಂಧನಗಳು ಮತ್ತು ವಾಹನ ಉತ್ಪನ್ನಗಳಲ್ಲಿ ಬಳಸಲಾಗುವ ಕೃತಕ ಪರಿಮಳಕಾರಗಳು, ದಿನವೂ ಲಿಪ್‌ಸ್ಟಿಕ್ ಹಚ್ಚೋದು ಕೂಡ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಇಂತಹ ರಾಸಯನಿಕಗಳು ನಿಮ್ಮ ದೇಹದ ಮೇಲೆ ನಿಧಾನವಾಗಿ ಕಾಲಕ್ರಮೇಣ ಮಾರಕವಾಗುತ್ತಾ ಹೋಗುತ್ತದೆ ಎಂದು ತಿಳಿದು ಬಂದಿದೆ.

ಹೌದು ಮಹಿಳೆಯರು ಮೇಕಪ್‌ಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಅದರಲ್ಲೂ ಲಿಪ್‌ಸ್ಟಿಕ್ ಎಂದರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ, ಆಸೆ. ಉಡುಗೆ, ಸಂದರ್ಭ, ಮನಸ್ಥಿತಿ ಮತ್ತು ಶೈಲಿಗೆ ಅನುಗುಣವಾಗಿ ಲಿಪ್‌ಸ್ಟಿಕ್ ಆಯ್ಕೆ ಮಾಡುತ್ತಾರೆ. ಲಿಪ್‌ಸ್ಟಿಕ್ ಹಚ್ಚುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಈ ಮೂಲಕ ನೀವು ತಿಳಿದುಕೊಳ್ಳಿ.

ಲೈಟ್ ಲಿಪ್‌ಸ್ಟಿಕ್ ಯಾವುದೇ ಸಂದರ್ಭದಲ್ಲಿ ನಿಮ್ಮ ಸಂಪೂರ್ಣ ನೋಟವನ್ನು ಬದಲಾಯಿಸಬಹುದು. ಪರ್ಫ್ಯೂಮ್ ಬಳಸುವುದು ದೇಹಕ್ಕೆ ಹೇಗೆ ಹಾನಿ ಮಾಡುತ್ತದೆಯೋ ಹಾಗೆ ಲಿಪ್‌ಸ್ಟಿಕ್ ದೇಹಕ್ಕೆ ಅಡ್ಡಪರಿಣಾಮಗಳು ಬಹಳ ಅಪಾಯಕಾರಿ. ಏಕೆಂದರೆ ಲಿಪ್‌ಸ್ಟಿಕ್ ಅನ್ನು ತುಂಟಿಗೆ ಹಚ್ಚುವುದರಿಂದ ಹಾಗೂ ಆಹಾರ ಸೇವಿಸುವುದರಿಂದ ಅದು ನೇರವಾಗಿ ದೇಹದೊಳಗೆ ನೇರವಾಗಿ ಹೋಗುತ್ತದೆ. ಈ ಕಾರಣದಿಂದಾಗಿ ಅದರಲ್ಲಿನ ಹಾನಿಕಾರಕ ರಾಸಾಯನಿಕಗಳು ನೇರವಾಗಿ ಜೀರ್ಣಾಂಗ ವ್ಯವಸ್ಥೆಯನ್ನು ತಲುಪಬಹುದು.

ಲಿಪ್ಸ್ಟಿಕ್ ಖರೀದಿಸುವಾಗ ಈ ಅಂಶಗಳನ್ನು ಪರಿಶೀಲಿಸಿ:

  • ಮ್ಯಾಂಗನೀಸ್
  • ಕ್ಯಾಡ್ಮಿಯಂ
  • ಕ್ರೋಮಿಯಂ ಮತ್ತು
  • ಅಲ್ಯೂಮಿನಿಯಂ ದೇಹದಲ್ಲಿ ಸೇರಿಕೊಂಡರೆ, ಅವು ಬಹಳಷ್ಟು ಹಾನಿಯನ್ನುಂಟುಮಾಡುತ್ತವೆ. ಲಿಪ್‌ಸ್ಟಿಕ್ ಹಾಕಿಕೊಂಡು ಆಹಾರ ಸೇವಿಸುವಾಗ ಈ ಎಲ್ಲಾ ಅಂಶಗಳು ದೇಹಕ್ಕೆ ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಲಿಪ್‌ಸ್ಟಿಕ್ ಅನ್ನು ಖರೀದಿಸುವಾಗ, ಅದರಲ್ಲಿ ಈ ಮೇಲಿನ ಉತ್ಪನ್ನಗಳನ್ನು ಹೊಂದಿರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಿ.

ಲಿಪ್‌ಸ್ಟಿಕ್ ಬಳಸುವಾಗ ಈ ಸಲಹೆಗಳನ್ನು ಅನುಸರಿಸಿ

  • ಉತ್ತಮ ಬ್ರಾಂಡ್‌ನ ಲಿಪ್‌ಸ್ಟಿಕ್ ಅನ್ನು ಮಾತ್ರ ಖರೀದಿಸಿ. ಅಲ್ಲದೆ ಅದರಲ್ಲಿ ಬಳಸಲಾದ ಪದಾರ್ಥಗಳನ್ನು ಪರೀಕ್ಷಿಸುವುದು ಮರೆಯಬೇಡಿ.
  • ಲಿಪ್‌ಸ್ಟಿಕ್‌ಗಳು ಉಂಟುಮಾಡುವ ಪಿಗ್ಮೆಂಟೇಶನ್ ಅನ್ನು ತೆಗೆದುಹಾಕಲು ಸಕ್ಕರೆ ಮತ್ತು ಜೇನುತುಪ್ಪದೊಂದಿಗೆ ನಿಮ್ಮ ತುಟಿಗಳನ್ನು ಸ್ಕ್ರಬ್ ಮಾಡಿ.
  • ಕಪ್ಪು ಬಣ್ಣದ ಅಥವಾ ಗಾಢ ಬಣ್ಣದ ಲಿಪ್‌ಸ್ಟಿಕ್ ಅನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಏಕೆಂದರೆ ಇದರಲ್ಲಿ ಭಾರೀ ಲೋಹಗಳು ಗಾಢ ಬಣ್ಣಗಳಲ್ಲಿ ಹೆಚ್ಚಾಗಿರುತ್ತದೆ.
  • ಲಿಪ್‌ಸ್ಟಿಕ್ ಹಚ್ಚುವ ಮೊದಲು ತುಟಿಗಳ ಮೇಲೆ ತುಪ್ಪ ಅಥವಾ ಪೆಟ್ರೋಲಿಯಂ ಜೆಲ್ಲಿಯ ಬೇಸ್ ಅನ್ನು ಅನ್ವಯಿಸಿ. ಇದು ಲಿಪ್‌ಸ್ಟಿಕ್‌ನಿಂದ ಉಂಟಾಗುವ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ.
  • ಸ್ಥಳೀಯ ಬ್ರ‍್ಯಾಂಡ್‌ಗಳು ಅಗ್ಗವಾಗಿರಬಹುದು. ಆದರೆ ಅವು ನಿಮ್ಮ ತುಟಿಗಳಿಗೆ ಹಾನಿಯುಂಟುಮಾಡಬಹುದು.

ಲಿಪ್‌ಸ್ಟಿಕ್ ಹಚ್ಚುವುದರಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳು :

  • ಗರ್ಭಿಣಿಯರುಎಲ್ಲಾ ಸಮಯದಲ್ಲಿ ಲಿಪ್‌ಸ್ಟಿಕ್ ಹಚ್ಚುವುದು ಒಳ್ಳೆಯದಲ್ಲ. ಸಾಂದರ್ಭಿಕವಾಗಿ ಲಿಪ್‌ಸ್ಟಿಕ್ ಹಚ್ಚುವುದು ಮತ್ತು ಅಗ್ಗದ ಬ್ರಾಂಡ್‌ಗಳನ್ನು ಖರೀದಿಸದಿರಿ. ನಿಮಗೆ ಇಷ್ಟವಾಗುವಂತಹ ಗಿಡಮೂಲಿಕೆಗಳ ಲಿಪ್‌ಸ್ಟಿಕ್ ಅನ್ನು ಬಳಸಬಹುದು.
  • ಬಹುತೇಕ ಲಿಪ್‌ಸ್ಟಿಕ್‌ಗಳಲ್ಲಿ ಸೀಸ ಅಥವಾ ಲೆಡ್ ಅನ್ನು ಬಳಸಲಾಗುತ್ತದೆ. ಸೀಸವು ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಇದು ಅಧಿಕ ರಕ್ತದೊತ್ತಡ(High Blood Pressure) ಮತ್ತು ಹೃದಯದ ಸಮಸ್ಯೆಗಳನ್ನು(Heart Problems) ಉಂಟುಮಾಡಬಹುದು.
  • ಲಿಪ್‌ಸ್ಟಿಕ್ ಗಳಲ್ಲಿ ದೇಹಕ್ಕೆ ಹಾನಿ ಮಾಡುವ ಹಲವು ರೀತಿಯ ಪ್ರಿಸರ್ವೇಟಿವ್‌ಗಳನ್ನ ಬಳಸುತ್ತಾರೆ. ಅವುಗಳ ಪ್ರಮಾಣವು ಅಧಿಕವಾಗಿದ್ದರೆ ಕಾಲಕ್ರಮೇಣ ಕ್ಯಾನ್ಸರ್ ಅಪಾಯವನ್ನು ತಂದೊಡ್ಡಬಹುದು. ಅಲ್ಲದೆ ಪ್ಯಾರಾಬೆನ್ ಅಂತಹ ಸಂರಕ್ಷ ಇದರಲ್ಲಿದ್ದು, ಇದು ಕ್ಯಾನ್ಸರ್ ಗೆ ಕಾರಣವಾಗಿದೆ. ಇದರಿಂದಾಗಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
  • ವಾಸ್ತವವಾಗಿ, ಬಿಸ್ಮತ್ ಆಕ್ಸಿಕ್ಲೋರೈಡ್ ಅನ್ನು ಲಿಪ್‌ಸ್ಟಿಕ್‌ನಲ್ಲಿ ಸಂರಕ್ಷಕವಾಗಿ ಬಳಸಲಾಗುತ್ತದೆ. ಇದರಿಂದ ಕ್ಯಾನ್ಸರ್ ಬರುವ ಅಪಾಯವೂ ಇದ್ದು, ದೇಹಕ್ಕೆ ಕಾಯಿಲೆ ಬರಬಹುದು. ಹಲವರಿಗೆ ಇದರ ಅಲರ್ಜಿಯೂ ಇರುತ್ತದೆ.

ಆರೋಗ್ಯ ದೃಷ್ಟಿಯಿಂದ ಪ್ರಸ್ತುತ ಮಹಿಳೆಯರು ಡಿಯೋಡರೆಂಟ್‌ಗಳು, ಏರ್ ಫ್ರೆಶ್‌ನರ್‌ಗಳು, ಉಗುರು ಬಣ್ಣ, ಇಂಧನಗಳು ಮತ್ತು ವಾಹನ ಉತ್ಪನ್ನಗಳಲ್ಲಿ ಬಳಸಲಾಗುವ ಕೃತಕ ಪರಿಮಳಕಾರಗಳು ಮತ್ತು ಲಿಪ್‌ಸ್ಟಿಕ್ ಇವುಗಳಿಂದ ಜಾಗೃತರಾಗಿರಿ.

Leave A Reply

Your email address will not be published.