ಮದುವೆಯಾಗಲು ಹೆಣ್ಣು ಸಿಗ್ತಿಲ್ಲ, ವಧು ಹುಡುಕಿ ಕೊಡಿ – ಪೊಲೀಸರಿಗೇ ಪತ್ರ ಬರೆದ ರೈತ

ಇಂದಿನ ಕಾಲದಲ್ಲಿ ಲವ್ ಮಾಡಿ ಮದುವೆಯಾಗುವವರೆ ಹೆಚ್ಚು.. ಅದರಲ್ಲೂ ಕೂಡ ಹುಡುಗಿಯರಿಗೆ ಪ್ರೇಮ ಪತ್ರ ಬರೆಯುವುದು ಸಾಮಾನ್ಯ.. ಆದರೆ, ವಧು ಸಿಗದೇ ಬೇಸತ್ತ ಮಹಾಶಯರೊಬ್ಬರು ಮಾಡಿರುವ ಕೆಲಸ ಕೇಳಿದರೆ ನೀವು ಅಚ್ಚರಿಯಾಗುವುದು ಪಕ್ಕಾ!!! ಅಷ್ಟಕ್ಕೂ ಏನು ವಿಚಾರ ಅಂತ ಯೋಚಿಸುತ್ತಿದ್ದೀರಾ?? ಅಸಲಿ ಕಹಾನಿ ಹೇಳ್ತೀವಿ ಕೇಳಿ!!

 

ಮೊದಲೆಲ್ಲ ವಧು ಸಿಗದಿದ್ದರೆ ದೇವರ ಮೊರೆ ಹೋಗುವ ಪರಿಪಾಠವಿತ್ತು. ಆದ್ರೆ ಈಗ ಕಾಲ ಬದಲಾಗಿದೆ ಸ್ವಾಮಿ!!. ತನಗೇ ಅನುರೂಪವಾದ ವಧುವಿಗಾಗಿ ಪೋಲಿಸ್ ಮೆಟ್ಟಿಲೇರುವ ಹೊಸ ಟ್ರೆಂಡ್ ಶುರುವಾಗಿದೆ.

ಹೌದು! ಈ ರೀತಿಯ ಪ್ರಕರಣವೊಂದು ಮುನ್ನಲೆಗೆ ಬಂದಿದ್ದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿರುವ ರೈತರೊಬ್ಬರು ವಧುವನ್ನು ಶೋಧಿಸುವ ಕಾರ್ಯಕ್ಕೆ ಸಾಥ್ ನೀಡಲು ಪೊಲೀಸರ ಮೊರೆ ಹೊಕ್ಕ ಘಟನೆ ವರದಿಯಾಗಿದೆ.


ಶಿವಮೊಗ್ಗ ಜಿಲ್ಲೆಯ ಭದ್ರವತಿಯ ನಿವಾಸಿಯಾಗಿರುವ ಪ್ರವೀಣ್, ಸಾಫ್ಟ್ವೇರ್ ಕಂಪನಿಯಲ್ಲಿ ಈ ಹಿಂದೆ ಕೆಲಸ ನಿರ್ವಹಿಸಿದ್ದು, ಪ್ರಸ್ತುತ ತಮ್ಮ ಸ್ವಂತ ಜಮೀನುನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಇವರಿಗೆ ಬಾಳ ಸಂಗಾತಿ ಸಿಗದೇ ಇರುವುದರಿಂದ ಹೆಣ್ಣು ಹುಡುಕಿ ಕೊಡಲು ನೆರವಾಗುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.


ಪ್ರವೀಣ್ ತಂದೆ ರಿಟೈಡ್ ಡೆಪ್ಯೂಟಿ ಡೈರೆಕ್ಟರ್ (ತೋಟಗಾರಿಕಾ ಇಲಾಖೆ) ಈ ಮೊದಲೇ ನಿಧನರಾಗಿದ್ದಾರೆ. ಸದ್ಯ ತಾಯಿ ಜೊತೆಗೆ ಅಣ್ಣ ಜೊತೆಗಿದ್ದು, ಅಣ್ಣ ಮದ್ವೆಯಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಈ ಪತ್ರವನ್ನು ಶಿವಮೊಗ್ಗ ಪೊಲೀಸ್ ಸೂಪರಿಡೆಂಟ್ ಕಚೇರಿಯಲ್ಲಿ ಸದ್ಯ ಪತ್ರ ತಲುಪಿದೆ.

ಶಿವಮೊಗ್ಗ ಪೊಲೀಸ್ ಸೂಪರಿಡೆಂಟ್‍ಗೆ ಪ್ರವೀಣ್ ಅವರಿಗೆ ಪತ್ರ ಬರೆದಿರುವ ಮಹಾಶಯ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಸೇರಿ ವಿಳಾಸ ಜೊತೆಗೆ ಮದುವೆಯಾಗಲು ಹುಡುಗಿ ಹುಡುಕಿಕೊಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾನೆ.

ಇಷ್ಟೇ ಅಲ್ಲದೆ, ಆನ್‍ಲೈನ್ ಮ್ಯಾರೇಜ್ ವೆಬ್‍ಸೈಟ್‍ಗಳಲ್ಲಿಯು ಕೂಡ ಸೂಕ್ತ ವಧು ಸಿಗದೇ ಇರುವುದರಿಂದ, ನಿಮ್ಮ ಅಧೀನದಲ್ಲಿ ಯಾರಾದರೂ ಒಂದು ವಧು ಕಂಡು ಬಂದರೆ ನನಗೆ ತಿಳಿಸಿ, ಮದುವೆ ಮಾಡಿಕೊಳ್ಳಲು ಸಹಾಯ ಮಾಡಿ ಎಂದು ನೊಂದ ರೈತ ವರನೊಬ್ಬ ಮನವಿ ಮಾಡಿ ತನ್ನ ಅಳಲು ತೋಡಿಕೊಂಡಿದ್ದಾರೆ .


ಹುಡುಗಿಯರಿಗೆ ಪ್ರೇಮ ಪತ್ರ ಬರೆಯುವುದು ಸಾಮಾನ್ಯ.. ಆದರೆ, ಇಲ್ಲೊಬ್ಬರು ತನ್ನ ವಧು ಅನ್ವೇಷಣಾ ಕಾರ್ಯಕ್ಕೆ ಪೋಲೀಸರ ಮನವಿ ಮಾಡಿರುವುದು ವಿಶೇಷ!! ಇನ್ನು ಪೋಲಿಸ್ ಪಡೆ ವಧು ಹುಡುಕಿಕೊಡುವ ಕೆಲಸಕ್ಕೆ ಸಾಥ್ ನೀಡುತ್ತಾರಾ?? ಎಂದು ಕಾದು ನೋಡಬೇಕಾಗಿದೆ

Leave A Reply

Your email address will not be published.