ಫೇಸ್‌ಬುಕ್ ನೋಟಿಫಿಕೇಶನ್‌ಗಳನ್ನು ಆಫ್ ಮಾಡುವುದು ಹೇಗೆ?

ಫೇಸ್‌ಬುಕ್ ನೋಟಿಫಿಕೇಶನ್‌ಗಳ ವಿಷಯವನ್ನೇ ತೆಗೆದುಕೊಂಡರೆ ಇದು ನಿಮ್ಮ ಸಂವಾದಕ್ಕೆ ಸಹಕಾರಿಯಾಗಿದ್ದರೂ ಅಧಿಸೂಚನೆಗಳು ಒಮ್ಮೆಮ್ಮೆ ಏಕಾಏಕಿಯಾಗಿ ಬಂದಾಗ ಕಿರಿಕಿರಿ ಎಂದೇ ಅನಿಸಿಬಿಡುತ್ತದೆ. ಹೀಗಾದಾಗ ಈ ನೋಟಿಫಿಕೇಶನ್‌ಗಳನ್ನು ಆಫ್ ಮಾಡಲೇಬೇಕಾದ ಅನಿವಾರ್ಯತೆ ಬಂದೊದಗುತ್ತದೆ. ಹಾಗಿದ್ದರೆ ಅದನ್ನು ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ

ಫೇಸ್‌ಬುಕ್ ನೋಟಿಫಿಕೇಶನ್‌ಗಳನ್ನು (ಅಧಿಸೂಚನೆಗಳು) ನಿರ್ವಹಿಸಬೇಕು ಇಲ್ಲದಿದ್ದರೆ ಆಫ್ ಮಾಡುವುದು ಅನಿವಾರ್ಯವಾಗಿರುತ್ತದೆ. ನೋಟಿಫಿಕೇಶನ್‌ಗಳು ನಮಗೆ ಸಹಕಾರಿಯಾಗಿದ್ದರೂ ಒಂದಾ ಅದನ್ನು ನಿರ್ವಹಿಸುವ ಜಾಣತನ ನಮ್ಮಲ್ಲಿರಬೇಕು ತೀರಾ ಅನಿವಾರ್ಯ ಎಂದಾದಲ್ಲಿ ಅದನ್ನು ಆಫ್ ಮಾಡದೆ ಬೇರೆ ದಾರಿ ಇರುವುದಿಲ್ಲ

ಡೆಸ್ಕ್‌ಟಾಪ್‌ನಲ್ಲಿ ನೋಟಿಫಿಕೇಶನ್ ಆಫ್ ಮಾಡುವುದು

ನಿಮ್ಮ ಡೆಸ್ಕ್‌ಟಾಪ್‌ನಲ್ಲಿಯೇ ಫೇಸ್‌ಬುಕ್ ನೋಟಿಫಿಕೇಶನ್‌ಗಳನ್ನು ಆಫ್ ಮಾಡಲು ಸೆಟ್ಟಿಂಗ್ಸ್ ಹಾಗೂ ಪ್ರೈವಸಿ > ಸೆಟ್ಟಿಂಗ್ಸ್ ನೋಟಿಫಿಕೇಶನ್ಸ್ ಇಲ್ಲಿಗೆ ಹೋಗಿ. ನಿಮಗೆ ಸೂಚನೆ ನೀಡುವ ಕೆಲಸವನ್ನು ನೋಟಿಫಿಕೇಶನ್ ಮಾಡುತ್ತದೆ. ನೋಟಿಫಿಕೇಶನ್ ಸ್ವೀಕರಿಸುವ ಬಗೆಯನ್ನು ನೀವು ಆರಿಸಬಹುದು. ಇಲ್ಲದಿದ್ದರೆ ನೀವು ಸಂಪೂರ್ಣವಾಗಿ ಇದನ್ನು ಆಫ್ ಮಾಡಬಹುದು. ಅಪ್ಲಿಕೇಶನ್‌ನಲ್ಲಿ ಕೆಳಭಾಗದಲ್ಲಿ ಮೆನು ಬಟನ್ ಸ್ಪರ್ಶಿಸಿ ಹಾಗೂ ಹಾಗೂ ಸೆಟ್ಟಿಂಗ್ಸ್ > ನೋಟಿಫಿಕೇಶನ್ಸ್ > ನೋಟಿಫಿಕೇಶನ್ ಸೆಟ್ಟಿಂಗ್ಸ್ ಇಲ್ಲಿಗೆ ಹೋಗಿ. ನೀವಿಲ್ಲಿ ನೋಟಿಫಿಕೇಶನ್ ಆನ್ ಅಥವಾ ಆಫ್ ಮಾಡಬಹುದು.

ಸೆಟ್ಟಿಂಗ್‌ಗಳ ಮೆನುವಿನಲ್ಲಿ ನೀವು ಈ ಕ್ರಿಯೆಗಳನ್ನು ನಡೆಸಬಹುದಾಗಿದೆ. ಪುಟದ ಬಲ ಮೇಲ್ಭಾಗದಲ್ಲಿ ನಿಮ್ಮ ಪ್ರೊಫೈಲ್ ಕ್ಲಿಕ್ ಮಾಡಿ ಹಾಗೂ ಮೆನುವಿನಲ್ಲಿ ಇದು ಗೋಚರಿಸುತ್ತದೆ ಸೆಟ್ಟಿಂಗ್ಸ್ ಹಾಗೂ ಗೌಪ್ಯತೆ > ಸೆಟ್ಟಿಂಗ್ಸ್ > ನೋಟಿಫಿಕೇಶನ್ಸ್‌ಗೆ ಹೋಗಿ.

ಫೇಸ್‌ಬುಕ್ ನಿಮಗೆ ನೀಡಬಹುದಾದ ಎಲ್ಲಾ ಅಧಿಸೂಚನೆಗಳ ವ್ಯಾಪಕವಾದ ಪಟ್ಟಿಯನ್ನು ಇಲ್ಲಿ ನಿಮಗೆ ಪ್ರಸ್ತುತಪಡಿಸಲಾಗುತ್ತದೆ. ನಿಮಗೆ ಬೇಕಿದ್ದರೆ ನೋಟಿಫಿಕೇಶನ್ ನಿರ್ವಹಿಸುವ ಹಾಗೂ ಆಫ್ ಮಾಡುವ ಮತ್ತು ಪ್ರತಿ ಅಧಿಸೂಚನೆ ಪ್ರಕಾರಕ್ಕೆ ಅಧಿಸೂಚನೆ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡುವ ಸಂದರ್ಭವಾಗಿದೆ.

ಯಾವ ವಿಭಾಗದಲ್ಲಿ ಆಫ್ ಮಾಡಬಹುದು ?

ನೀವು ಪುಶ್ ಅಧಿಸೂಚನೆ (ಫೇಸ್‌ಬುಕ್ ಪುಟದಲ್ಲಿ ಕಾಣಿಸಿಕೊಳ್ಳುವ), ಇಮೇಲ್, ಎಸ್‌ಎಂಎಸ್ ಅಥವಾ ಈ ಮೂರರಲ್ಲಿ ಯಾವುದೇ ಸಂಯೋಜನೆಯ ನಡುವೆ ಆಯ್ಕೆ ಮಾಡಬಹುದು. ಫೇಸ್‌ಬುಕ್ ಅಧಿಸೂಚನೆಗಳನ್ನು ಸಂಪೂರ್ಣವಾಗಿ ಆಫ್ ಮಾಡಲು, ಎಲ್ಲಾ ಆಯ್ಕೆಗಳನ್ನು ಟಾಗಲ್ ಆಫ್ ಮಾಡಿ. ರಿಮೈಂಡರ್‌ಗಳಂತಹ ಕೆಲವು ಸಂದರ್ಭಗಳಲ್ಲಿ, ಫೇಸ್‌ಬುಕ್ ಅಧಿಸೂಚನೆಗಳನ್ನು ಆಫ್ ಮಾಡಲು ಪ್ರತ್ಯೇಕ ಟಾಗಲ್ ಇರುತ್ತದೆ. ಸುರಕ್ಷಿತ ಭಾಗದಲ್ಲಿರಲು ಎಲ್ಲವನ್ನೂ ಆಫ್ ಮಾಡಿ.

Leave A Reply

Your email address will not be published.