ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಇರೋರು ಈ 4 ತರಕಾರಿಗಳನ್ನು ತಿನ್ನಿ!
ಆರೋಗ್ಯ ಕಾಪಾಡಿಕೊಳ್ಳಲು ಮನುಷ್ಯ ಹರಸಾಹಸ ಪಡುತ್ತಿದ್ದಾನೆ ಅಂದರೆ ತಪ್ಪಾಗಲಾರದು. ಪ್ರಸ್ತುತ ಮನುಷ್ಯ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವುದು ನಮಗೆ ಗೊತ್ತಿರುವ ವಿಚಾರ. ಬಿಡುವಿಲ್ಲದ ಸ್ಪರ್ಧಾತ್ಮಕ ಬದುಕಿನಲ್ಲಿ ಕೆಲವೊಂದು ಸಣ್ಣ ಸಮಸ್ಯೆಗಳು ಹೇಗೆ ಕಾಣಿಸಿಕೊಳ್ಳುತ್ತವೆ ಎಂಬ ಗೊಂದಲ ನಿಮಗೆ ಕಾಡಬಹುದು.
ಹೌದು ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ವಿಪರೀತವಾಗಿಬಿಟ್ಟಿದೆ. ಗ್ಯಾಸ್ಟಿಕ್ ಹಾಗೂ ಆಸಿಡಿಟಿಯಿಂದ ಬೇರೆ ಬೇರೆ ಇತರ ಕಾಯಿಲೆಗಳಿಗೂ ಜನರು ಒಳಗಾಗುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬೇಕೆಂದರೆ ಸೂಕ್ತವಾದ ಆಹಾರ ಸೇವನೆ ಮಾಡಬೇಕು.
ನೀವು ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು ಅಂದರೆ ಹೊಟ್ಟೆಯಲ್ಲಿ ಗ್ಯಾಸ್ ಉಂಟು ಮಾಡದಂತಹ ನಾಲ್ಕು ತರಕಾರಿಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ ಅಷ್ಟೇ.
ಗ್ಯಾಸ್ ಉಂಟು ಮಾಡದಂತಹ ತರಕಾರಿಗಳು :
- ಎಲೆಕೋಸು ಅಸಿಡಿಟಿಗೆ ರಾಮಬಾಣವಿದ್ದಂತೆ. ಎಲೆಕೋಸನ್ನು ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಸೇವಿಸಬಹುದು. ಈ ತರಕಾರಿಯಲ್ಲಿರುವ ಪೋಷಕಾಂಶಗಳು ಉದರ ಬಾಧೆಗೆ ಪರಿಹಾರ ನೀಡುತ್ತವೆ. ಉತ್ಪತ್ತಿಯಾಗುವುದಿಲ್ಲ. ಎಲೆಕೋಸು ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿ ಆಗುವುದಿಲ್ಲ.
- ಬೆಳ್ಳುಳ್ಳಿ, ಗ್ಯಾಸ್ಟಿಕ್ ಮತ್ತು ಅಸಿಡಿಟಿಗೆ ವಿರುದ್ಧವಾಗಿದೆ. ಬೆಳಗ್ಗೆ ಉಗುರು ಬೆಚ್ಚಗಿನ ನೀರಿನೊಂದಿಗೆ ಎರಡು ಎಸಳು ಬೆಳ್ಳುಳ್ಳಿಯನ್ನು ಸೇವಿಸಿ. ಈ ಮನೆಮದ್ದು ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಗ್ಯಾಸ್‌ನಿಂದ ಪರಿಹಾರ ನೀಡುತ್ತದೆ ಮತ್ತು ಅಜೀರ್ಣವೂ ದೂರವಾಗುತ್ತದೆ. ದಿನವಿಡೀ ಉಲ್ಲಾಸದಿಂದ ಕಳೆಯಬಹುದಾಗಿದೆ.
- ಆರೋಗ್ಯ ತಜ್ಞರ ಪ್ರಕಾರ ಗ್ಯಾಸ್ ಮತ್ತು ಆಸಿಡಿಟಿ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ ಪೋಷಕಾಂಶಗಳಿಂದ ತುಂಬಿರುವ ಗ್ಯಾಸ್ ಅಲ್ಲದ ತರಕಾರಿಗಳನ್ನೇ ಸೇವಿಸಿ. ಹೌದು ಹಸಿರು ಬೀನ್ಸ್ ಕೂಡ ಇವುಗಳಲ್ಲೊಂದು. ಇದರ ಪಲ್ಯ, ಸಾಂಬಾರ್, ಕರಿ ಮಾಡಿ ಸೇವಿಸಬಹುದು. ಆದ್ರೆ ಜೊತೆಗೆ ಆಲೂಗಡ್ಡೆಯನ್ನು ಸೇರಿಸಬೇಡಿ.
- ಹೀರೇಕಾಯಿ ಮತ್ತು ಸೋರೆಕಾಯಿ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಹ ತರಕಾರಿಗಳು. ಈ ಎರಡೂ ತರಕಾರಿಗಳಲ್ಲಿ ನೀರಿನ ಅಂಶ ಹೇರಳವಾಗಿ ಕಂಡುಬರುತ್ತದೆ. ಈ ಕಾರಣದಿಂದಾಗಿ ಅವುಗಳನ್ನು ಸೇವಿಸುವುದರಿಂದ ಹೊಟ್ಟೆಯ ಅಸ್ವಸ್ಥತೆಗೆ ಪರಿಹಾರ ಸಿಗುತ್ತದೆ. ಗ್ಯಾಸ್-ಆಸಿಡಿಟಿ ಜೊತೆಗೆ ಅಜೀರ್ಣ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ತೀರಾ ಗ್ಯಾಸ್ಟಿಕ್ ಮತ್ತು ಅಸಿಡಿಟಿ ಸಮಸ್ಯೆ ಇದ್ದವರು ಈ ಮೇಲಿನ ತರಕಾರಿಗಳನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ.