Bank holidays in December : ಬ್ಯಾಂಕ್ ಗ್ರಾಹಕರೇ ಗಮನಿಸಿ | ಡಿಸೆಂಬರ್ ತಿಂಗಳ ಬ್ಯಾಂಕ್ ರಜೆ ಪಟ್ಟಿ ಬಿಡುಗಡೆ |

ಇಂದಿನ ಡಿಜಿಟಲ್ ಯುಗದಲ್ಲಿ ಮನೆಯಲ್ಲೇ ಕುಳಿತು ಎಲ್ಲ ಬ್ಯಾಂಕ್ ವ್ಯವಹಾರಗಳನ್ನು ಮಾಡಲು ಹೆಚ್ಚಿನ ಬ್ಯಾಂಕ್ಗಳು ಅನುವು ಮಾಡಿಕೊಟ್ಟಿದೆ. ಈಗ ಮುಂಚಿನಂತೆ ಗಂಟೆಗಟ್ಟಲೆ ಬ್ಯಾಂಕ್ ನಲ್ಲಿ ಕ್ಯೂ ನಿಂತು ಹಣ ಪಡೆಯಬೇಕಾಗಿಲ್ಲ ಆದರೂ ಕೂಡಾ ಕೆಲವೊಮ್ಮೆ ಬ್ಯಾಂಕ್ ಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾದಾಗ ರಜೆಯ ಬಗ್ಗೆ ಮಾಹಿತಿ ತಿಳಿಯದೆ ಭೇಟಿ ಕೊಟ್ಟರೆ ಕಾಲಹರಣ ಆಗುವ ಜೊತೆಗೆ ಅಂದು ಕೊಂಡ ಕೆಲಸ ಕೂಡ ಆಗುವುದಿಲ್ಲ. ಹೀಗಿದ್ದಾಗ ಬ್ಯಾಂಕ್ ರಜೆಯ ಬಗ್ಗೆ ತಿಳಿದಿದ್ದರೆ ಒಳ್ಳೆಯದು.

 

ಬ್ಯಾಂಕ್ ರಜೆಯ ಕುರಿತಾಗಿ, ಆರ್ ಬಿಐ ಪ್ರತಿ ತಿಂಗಳು ರಜಾಪಟ್ಟಿ ಬಿಡುಗಡೆ ಮಾಡಲಿದ್ದು, ಅದರ ಅನ್ವಯ, ಡಿಸೆಂಬರ್ ತಿಂಗಳ ರಜಾ ಪಟ್ಟಿಯಲ್ಲಿ, ಒಟ್ಟು 13 ದಿನಗಳ ಕಾಲ ಬ್ಯಾಂಕ್ ರಜೆ ಇರುತ್ತದೆ.ಈ ವರ್ಷದ ಕೊನೆಯ ತಿಂಗಳಿಗೆ ಪಾದಾರ್ಪಣೆ ಮಾಡಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಪ್ರತಿ ತಿಂಗಳು ಪ್ರಾರಂಭವಾಗುವ ಮುನ್ನ ಬ್ಯಾಂಕ್ ಗಳ ರಜಾ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬಿಡುಗಡೆ ಮಾಡಲಿದ್ದು, ಅದರ ಅನುಸಾರ ಡಿಸೆಂಬರ್ ತಿಂಗಳ ಹಾಲಿ ಡೇ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು, ಒಟ್ಟು 13 ದಿನಗಳ ಕಾಲ ಬ್ಯಾಂಕ್ ಕಾರ್ಯನಿರ್ವಹಿಸೋದಿಲ್ಲ.

ಆರ್ ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯವಾಗುವುದಿಲ್ಲ. ಪ್ರತಿ ಊರಿನ ಪ್ರಾದೇಶಿಕ ಆಚರಣೆ ಹಾಗೂ ಹಬ್ಬಗಳಿಗೆ ಅನುಸಾರ ವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯ ವಾಗುತ್ತದೆ. ಇನ್ನು ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿದ್ದು, ಹೀಗಾಗಿ ಡಿಸೆಂಬರ್ ತಿಂಗಳಲ್ಲಿ ಬ್ಯಾಂಕಿಗೆ ಭೇಟಿ ನೀಡುವ ಮುನ್ನ ರಜೆಯ ಬಗ್ಗೆ ತಿಳಿದಿದ್ದರೆ ಉತ್ತಮ.

ಬ್ಯಾಂಕ್ (Bank) ರಜೆಗಳನ್ನು (Holidays) ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದ್ದು, ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು. ಆರ್ ಬಿಐ (RBI) ರಜಾಪಟ್ಟಿಯಲ್ಲಿರುವ ರಜೆಗಳು ಸಾರ್ವಜನಿಕ ವಲಯ (Public sector), ಖಾಸಗಿ ವಲಯ (Private sector), ವಿದೇಶಿ ಬ್ಯಾಂಕುಗಳು (Foreign banks), ಕೋಆಪರೇಟಿವ್ ಬ್ಯಾಂಕುಗಳು (Co-operative banks) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ (Regonal banks) ಅನ್ವಯವಾಗಲಿದೆ.

ಈ ವರ್ಷದ ಕೊನೆಯ ತಿಂಗಳಾಗಿರುವ ಕಾರಣ ಬ್ಯಾಂಕಿನಲ್ಲಿ ಏನಾದರೂ ಅನಿವಾರ್ಯ ಹಾಗೂ ಅತಿ ಶೀಘ್ರದಲ್ಲಿ ಮಾಡಬೇಕಾದ ಕೆಲವೊಂದು ಕೆಲಸಗಳಿದ್ದರೆ, ಡಿಸೆಂಬರ್ ನಲ್ಲಿ ಬ್ಯಾಂಕ್ ಗಳಿಗೆ ಯಾವೆಲ್ಲ ದಿನ ರಜೆಯಿದೆ ಎಂಬುದನ್ನು ಮೊದಲೇ ಗಮನಿಸಿ ಆ ಬಳಿಕ ಭೇಟಿ ನೀಡಿದರೆ, ಶ್ರಮ ಮತ್ತು ಸಮಯ ಎರಡು ಉಳಿಯುತ್ತದೆ.

ಡಿಸೆಂಬರ್ ತಿಂಗಳ ರಜಾಪಟ್ಟಿ ಹೀಗಿದೆ:

ಡಿಸೆಂಬರ್ 3: ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಫೀಸ್ಟ್ (ಗೋವಾದಲ್ಲಿ ಬ್ಯಾಂಕುಗಳಿಗೆ ರಜೆ)

ಡಿಸೆಂಬರ್ 4: ಭಾನುವಾರ

ಡಿಸೆಂಬರ್ 10: ಎರಡನೇ ಶನಿವಾರ

ಡಿಸೆಂಬರ್ 11: ಭಾನುವಾರ

ಡಿಸೆಂಬರ್ 12: ಪಾ-ತೊಗ್ಯಾನ್ ನೆಂಗ್ಮಿಂಜ ಸಂಗ್ಮ

ಡಿಸೆಂಬರ್ 18: ಭಾನುವಾರ

ಡಿಸೆಂಬರ್ 19: ಗೋವಾ ವಿಮೋಚನಾ ದಿನ (ಗೋವಾದಲ್ಲಿ ಮಾತ್ರ ಬ್ಯಾಂಕುಗಳಿಗೆ ರಜೆ)

ಡಿಸೆಂಬರ್ 24: ಕ್ರಿಸ್ಮಸ್ ಈವ್ ಮತ್ತು ನಾಲ್ಕನೇ ಶನಿವಾರ (ದೇಶಾದ್ಯಂತ ಬ್ಯಾಂಕುಗಳಿಗೆ ರಜೆ)

ಡಿಸೆಂಬರ್ 25: ಭಾನುವಾರ, ಕ್ರಿಸ್ಮಸ್ ಡಿಸೆಂಬರ್ 26: ಕ್ರಿಸ್ಮಸ್ ಸಂಭ್ರಮಾಚರಣೆ (ಲೊಸೂಂಗ್/ನಮ್ಸೂಂಗ್)

ಡಿಸೆಂಬರ್ 29: ಗುರು ಗೋವಿಂದ್ ಸಿಂಗ್ ಸಿಂಗ್ ಜಿ ಅವರ ಜನ್ಮದಿನ (ಚಂಡೀಗಢದಲ್ಲಿ ಬ್ಯಾಂಕುಗಳಿಗೆ ರಜೆ)

ಡಿಸೆಂಬರ್ 30: ಯು ಕಿಯಾಂಗ್ ನಂಗ್ಬಾ (ಮೇಘಾಲಯದಲ್ಲಿ ಮಾತ್ರ ಬ್ಯಾಂಕುಗಳು ಮುಚ್ಚಿರುತ್ತವೆ)

ಡಿಸೆಂಬರ್ 31: ಹೊಸ ವರ್ಷದ ಹಿಂದಿನ ದಿನವಾದ ಕಾರಣ (ಮಿಜೋರಾಂನಲ್ಲಿ ಬ್ಯಾಂಕುಗಳಿಗೆ ರಜೆ)

ಡಿಸೆಂಬರ್ ತಿಂಗಳಿನಲ್ಲಿ ಇಷ್ಟು ರಜೆಗಳಿದ್ದು, ಬ್ಯಾಂಕುಗಳಿಗೆ ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ (Online transaction) ಹಾಗೂ ಎಟಿಎಂ ವ್ಯವಹಾರಗಳಿಗೆ (ATM transaction) ಯಾವುದೇ ಸಮಸ್ಯೆ ತಲೆದೋರದು . ಆದರೆ, (Bank) ಬ್ಯಾಂಕ್ ಗಳಿಗೆ ಭೇಟಿ ನೀಡ ಬೇಕಾದ ಅನಿವಾರ್ಯತೆ ಇದ್ದರೆ ರಜೆ ದಿನ ಹೊರತು ಪಡಿಸಿ ಇನ್ನುಳಿದ ದಿನಗಳಲ್ಲಿ ಮಾಡಿಕೊಳ್ಳಬಹುದು.

Leave A Reply

Your email address will not be published.