ಎಚ್ಚರ ಗಂಡಸರೇ | ಊಟದಲ್ಲಿ ಇರುವೆ ಇದೆ ಎಂದ ಗಂಡನನ್ನೇ ಕೊಂದ ಹೆಂಡತಿ!

ಗಂಡ ಹೆಂಡತಿ ಅಂದರೆ ಕೋಪ ತಾಪ ಸಿಟ್ಟು ಜಗಳ ಇದ್ದೇ ಇರುತ್ತೆ. ಈ ಜಗಳಗಳೆಲ್ಲ ಆ ಕ್ಷಣಕ್ಕೆ ಎನ್ನುವ ಹಾಗೇ ಇದ್ದರೆ ಚೆಂದ. ಅದನ್ನೇ ಮುಂದುವರಿಸಿದರೆ ಕಷ್ಟಸಾಧ್ಯ. ಈ ಮಾತು ನಾವು ಯಾಕೆ ಹೇಳ್ತಿದ್ದೀವಿ ಅಂದರೆ ಇಲ್ಲೊಬ್ಬಾಕೆ ಹೆಂಡತಿ ಕ್ಷುಲ್ಲಕ ವಿಷಯಕ್ಕೆ ಗಂಡನನ್ನೇ ಕೊಲೆ ಮಾಡಿದ ಘಟನೆ ನಡೆದಿದೆ.

 

ಒಡಿಶಾದ ಸುಂದರ್‌ಗಢ ಜಿಲ್ಲೆಯಲ್ಲಿ ಊಟ ಮಾಡುವಾಗ ಅನ್ನದಲ್ಲಿ ಇರುವೆಗಳು ಇರುವೆ ಇದೆ ಎಂದು ಪತಿ ಹೇಳಿದಕ್ಕೆ ಹೆಂಡತಿ ತನ್ನ ಪತಿಗೆ ಸ್ಕಾರ್ಫ್‌ನಿಂದ ಕತ್ತು ಹಿಸುಕಿ ಕೊಂದೇ ಬಿಟ್ಟಿದ್ದಾಳೆ. ಈಗ ಈ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿದೆ.

ಮಾವ ಶಶಿ ಭೂಷಣ್ ಬಾಗ್ ಅವರ ಹೇಳಿಕೆ ಪ್ರಕಾರ ಮೃತ ಹೇಮಂತ ಬಾಗ್ ತನ್ನ ಪತ್ನಿ ಸರಿತಾ ಮತ್ತು ಪುತ್ರಿ ಹೇಮಲತಾ ಮತ್ತು ಪುತ್ರ ಸೌಮ್ಯ ಜತೆ ವಾಸವಾಗಿದ್ದ.

ಪೊಲೀಸ್ ವರದಿ ಪ್ರಕಾರ ಹೇಮಂತ ಬಾಗ್ ಊಟಕ್ಕೆ ಕುಳಿತುಕೊಂಡಿದ್ದ, ಈ ವೇಳೇ ಸರಿತಾ ಅನ್ನ ಬಡಿಸುವಾಗ ಅನ್ನದಲ್ಲಿ ಇರುವೆಗಳನ್ನು ಕಂಡು ವಿವರಣೆ ಕೇಳಿದಾಗ ಇಬ್ಬರ ನಡುವೆ ಜಗಳವಾಗಿದೆ ಮತ್ತು ಕೋಪದ ಭರದಲ್ಲಿ ಅವಳು ಗಂಡನ ಕತ್ತು ಹಿಸುಕಿ ಕೊಂದಿದ್ದಾಳೆ ಎನ್ನಲಾಗಿದೆ.

ಏನೇ ಆಗಲಿ ಇಂತಹ ಸಣ್ಣ ಪುಟ್ಟ ವಿಷಯಕ್ಕೆ ಕೊಲೆ ಮಾಡುವ ಹಂತಕ್ಕೆ ವಿಷಯ ಹೋದದ್ದು ನೋಡಿದರೆ ಆಘಾತ ಆಗೋದಂತೂ ಖಂಡಿತ.

Leave A Reply

Your email address will not be published.