ಎರಡನೇ ಮದುವೆ | ಫೋನ್ ನಲ್ಲೇ ಹೆಂಡತಿಗೆ ತಲಾಖ್ ತಲಾಖ್ ತಲಾಖ್ ಎಂದ ಪತಿರಾಯ!
ಮದುವೆ ಅಂದರೆ ಎರಡು ಕುಟುಂಬಗಳು ಸಂಬಂಧ ಬೆಸೆಯುವುದು ಮಾತ್ರವಲ್ಲದೆ. ಗಂಡು ಹೆಣ್ಣು ಇಬ್ಬರೂ ಯಾವುದೇ ಮುಚ್ಚು ಮರೆ ಇಲ್ಲದೆ ಜೀವನ ನಡೆಸಿಕೊಂಡು ಹೋಗಬೇಕು. ಅಲ್ಲದೆ ಸಾವಿರಾರು ಕನಸು ಹೊತ್ತು ಹೆಣ್ಣು ತನ್ನ ಹೆತ್ತವರನ್ನು ಬಿಟ್ಟು ಗಂಡನ ಜೊತೆಗೆ ಹೋಗುತ್ತಾಳೆ. ಆದರೆ ಇಲ್ಲೊಬ್ಬ ತನ್ನ ಹೆಂಡತಿಗೆ ಎಕಯೇಕಿ ತಲಾಖ್ ನೀಡಿದ್ದಾನೆ.
ಬಿಹಾರದ ರೋಹ್ರಾಸ್ ಜಿಲ್ಲೆಯಲ್ಲಿ ಪತಿರಾಯನೊಬ್ಬ ಫೋನ್ ಮೂಲಕ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ತರನ್ನುಮ್ ಎನ್ನುವ ಮಹಿಳೆಗೆ ಶೋಯಬ್ ಎನ್ನುವಾತ ತ್ರಿವಳಿ ತಲಾಖ್ ನೀಡಿದ್ದಾನೆ. ಈ ವಿಷಯದಲ್ಲಿ ನ್ಯಾಯ ಕೋರಿ ಅವರು ರೋಹ್ಲಾಸ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕುಗಳ ರಕ್ಷಣೆ ಕಾಯ್ದೆಯಡಿ ತ್ರಿವಳಿ ತಲಾಖ್ ನೀಡಿದ ಆರೋಪ ಸಾಬೀತಾದರೆ ಆರೋಪಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
ತರನ್ನುಮ್ ಅವರ ಹೇಳಿಕೆ ಪ್ರಕಾರ ‘ನನ್ನ ಪತಿ ರಾಂಚಿಯಲ್ಲಿ ನೆಲೆಸಿದ್ದು ಈಗ ಬೇರೆ ಹುಡುಗಿಯನ್ನು ಮದುವೆಯಾಗಿದ್ದಾರೆ. ಈ ವಿಷಯ ನನಗೆ ತಿಳಿದಿರಲಿಲ್ಲ. ಕೆಲವು ಸಂಬಂಧಿಕರು ಶೋಯಬ್ ಇದ್ದ ರೋಹ್ಲಾಸ್ ಜಿಲ್ಲೆಯ ಡೆ ಪಟ್ಟಣದ ನೀಲ್ ಕೋಠಿ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅವರು ತನ್ನ ಕೃತ್ಯವನ್ನು ಏಕೆ ವಿರೋಧಿಸಿಲ್ಲ ಎಂದು ಕೇಳಿದ ಶೂಯಬ್ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾರೆ.
ಅದಲ್ಲದೆ ನನ್ನ ಪತಿ ಶೋಯಬ್‌ನನ್ನು ನಾನು ವಿಚಾರಿಸಿದಾಗ ನನ್ನನ್ನು ನಿಂದಿಸಿ ಮೂರು ಬಾರಿ ತಲಾಖ್ ಹೇಳಿದರು. ಅವರು ನನ್ನನ್ನು ರೋಕ್ತಾಸ್‌ನಲ್ಲಿರುವ ಅವರ ಮನೆಯಿಂದ ಹೊರಹೋಗುವಂತೆ ಹೇಲಿ ಫೋನ್ ಕಟ್ ಮಾಡಿದ್ದಾರೆ’ ಎಂದು ತರನ್ನುಮ್ ಮಾಹಿತಿ ನೀಡಿದರು.
ಈಗಾಗಲೇ ‘ನಾನು ಮೇ 30, 2014 ರಂದು ಶೋಯಾಬ್ ಅವರನ್ನು ವಿವಾಹವಾಗಿದ್ದೆ. ನಂತರ ನನ್ನನ್ನು ರಾಂಚಿಯ ತಮ್ಮನ ಮನೆಗೆ ಕರೆದೊಯ್ದರು. ಆದರೆ ನನ್ನೊಂದಿಗೆ ಅವರ ವರ್ತನೆ ತೀರಾ ಕೆಟ್ಟದಾಗಿತ್ತು. ಅವರು ಹುಡುಗಿಯರನ್ನು ಮನೆಯೊಳಗೆ ಕರೆದುಕೊಂಡು ಹೋಗಿ ನನಗೆ ಗಂಟೆಗಟ್ಟಲೆ ಇರುವಂತೆ ಒತ್ತಾಯಿಸುತ್ತಿದ್ದರು. ನಾನು 10 ದಿನಗಳ ಕಾಲ ಅಲ್ಲಿಯೇ ಇದ್ದೆ. ಅದಾದ ಮೇಲೆ ಅವರು ರೋಹ್ರಾಸ್‌ಗೆ ಹಿಂತಿರುಗಿದರು. ನಾನು ಶೋಯಬ್‌ನ ತಾಯಿಗೆ ಅವನ ಅನೈತಿಕ ಚಟುವಟಿಕೆಗಳ ಬಗ್ಗೆ ತಿಳಿಸಿದಾಗ, ಅವರಿಗೆ ಅದು ತಿಳಿದಿತ್ತು ಎಂದಿದ್ದಾರೆ. ಆದರೆ ನಾನೇ ಶೋಯಬ್‌ನನ್ನು ಸರಿದಾರಿಗೆ ತರಬೇಕು ಎಂದು ನಿರೀಕ್ಷಿಸಿದ್ದರು’ ಎಂದು ತರನ್ನುಮ್ ತಮ್ಮ ದುಃಖವನ್ನು ತೋಡಿಕೊಂಡರು.
ಇನ್ನು ‘ಮದುವೆಯ ಆರಂಭಿಕ ಹಂತದಲ್ಲಿ ಶೋಯಬ್ ಹಣಕ್ಕೆ ಕೂಡ ಬೇಡಿಕೆ ಇಟ್ಟಿದ್ದು, ನನ್ನ ತಂದೆ-ತಾಯಿ ಹೇಗೋ ಹಣ ಹೊಂದಿಸಿ ನೀಡಿದ್ದಾರೆ. ದಿನದಿಂದ ದಿನಕ್ಕೆ ಆತನ ಬೇಡಿಕೆ ಹೆಚ್ಚಾದಂತೆ ನನ್ನ ತಂದೆ-ತಾಯಿ ಹಣ ನೀಡಲು ನಿರಾಕರಿಸಿದ್ದಾರೆ. ಈಗ, ನನಗೆ ಐದು ವರ್ಷದ ಮಗಳಿದ್ದಾಳೆ. ನಮ್ಮ ಭವಿಷ್ಯ ಕತ್ತಲೆಯಲ್ಲಿದೆ’ ಎಂದು ತರನ್ನುಮ್ ಮಾಹಿತಿ ನೀಡಿದ್ದಾರೆ.
ರೋಕ್ತಾಸ್‌ನ ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಲಕ್ಷ್ಮೀ ಪಟೇಲ್ ‘ನಾವು ಅರ್ಜಿಯನ್ನು ಸ್ವೀಕರಿಸಿದ್ದು ಎಫ್‌ಐಆರ್ ದಾಖಲಿಸಿದ್ದೇವೆ. ಪ್ರಸ್ತುತ ತನಿಖೆ ನಡೆಯುತ್ತಿದೆ. ಜೊತೆಗೆ ಆರೋಪಿಯನ್ನು ಬಂಧಿಸುವ ಪ್ರಯತ್ನಗಳು ಕೂಡ ನಡೆಯುತ್ತಿವೆ’ ಎಂದರು.
ಒಟ್ಟಿನಲ್ಲಿ ಹೆಣ್ಣಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವಿಚಾರಣೆ ನಡೆಸುತ್ತಿದೆ.