Trai New Guideline : ಟಿವಿ ಚಾನೆಲ್ ಗಳ ದರ ಮಿತಿ ಪರಿಷ್ಖರಣೆ | ಹೊಸ ದರ ಜಾರಿ
ಇದೀಗ ಜನರು ಪ್ರತೀದಿನ ವೀಕ್ಷಿಸುವ ನೆಚ್ಚಿನ ಟಿವಿ ಚಾನೆಲ್‌ಗಳ ಬೆಲೆ ಏರಿಕೆಯಾಗಿದೆ. ಇನ್ನೂ ಆ ಬೆಲೆ ಎಷ್ಟಕ್ಕೆ ಏರಿಕೆ ಕಂಡಿದೆ ಎಂಬುದರ ಮಾಹಿತಿ ಇಲ್ಲಿದೆ.
ಟಿವಿ ಚಾನೆಲ್‌ಗಳ ದರಕ್ಕೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಭಾರತೀಯ ದೂರಸಂಪರ್ಕ ಪ್ರಾಧಿಕಾರ(TRAI) ತಿದ್ದುಪಡಿ ಮಾಡಿ ‘ನ್ಯೂ ಟಾರಿಫ್ ಆರ್ಡರ್ 2.0(NTO) ಅನ್ನು ಪ್ರಕಟಿಸಿದೆ. ಇದರ ಪ್ರಕಾರ ಟಿವಿ ಚಾನೆಲ್‌ಗಳ ದರ ಮಿತಿ ಈ ಹಿಂದೆ ಇದ್ದ 12 ರೂಪಾಯಿಗೆ ಬದಲಾಗಿ 19 ರೂಪಾಯಿಗೆ ನಿಗದಿಪಡಿಸಿದೆ.
ಹಾಗೇ ಈ ಬದಲಾದ ನಿಯಮ 2023 ಫೆಬ್ರವರಿ 1ರಿಂದ ಜಾರಿಗೆ ಬರಲಿದೆ. ಇನ್ನೂ ಈ ಪರಿಷ್ಕೃತ ನಿಯಮದಿಂದ ಕೇಬಲ್, ಡಿಟಿಎಚ್ ಸೇರಿದಂತೆ ಇತರ ಮೂಲಗಳಿಂದ ದೊರೆಯುವ ಟಿವಿ ಚಾನೆಲ್‌ಗಳ ದರ ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
‘ನ್ಯೂ ಟಾರಿಫ್ ಆರ್ಡರ್ 2.0’ ಬಗ್ಗೆ 2020ರ ಜನವರಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಆ ವೇಳೆ ಚಾನೆಲ್ ಗಳಿಗೆ 12 ರೂ. ದರ ನಿಗದಿಪಡಿಸುವ ಬಗ್ಗೆ ಚರ್ಚೆಯಾಗಿತ್ತು. ಆದರೆ ಇದಕ್ಕೆ ಪ್ರಸಾರಕರಿಂದ ಮತ್ತು ಆಪರೇಟರ್‌ಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಆನಂತರ ಇದೀಗ ಟ್ರಾಯ್ ನಿಯಮಗಳನ್ನು ಅಂತಿಮಗೊಳಿಸಿದೆ. ಹಾಗೂ ಇದೀಗ ಟ್ರಾಯ್ ಮಾಡಿರುವ ತಿದ್ದುಪಡಿಯನ್ನು ಭಾರತೀಯ ಪ್ರಸಾರಕರ ಹಾಗೂ ಡಿಜಿಟಲ್ ಫೌಂಡೇಷನ್ (IBDF) ಅಧ್ಯಕ್ಷತೆ ಮಾಧವನ್ ಅವರು ಇದು ಉದ್ಯಮ ಮತ್ತು ನಿಯಂತ್ರಕರ ನಡುವಿನ ರಚನಾತ್ಮಕ ಸಂಭಾಷಣೆಯ ಫಲಿತಾಂಶವಾಗಿದೆ ಎಂದು ಹೇಳಿದರು.
ಇನ್ನೂ ನಿರ್ದಿಷ್ಟ ಪ್ರಸಾರಕರ ಸಮೂಹದಲ್ಲಿ ಬರುವ ಟಿವಿ ಚಾನೆಲ್‌ಗಳು ನೀಡುವ ರಿಯಾಯಿತಿಗೆ ಶೇಕಡಾ 45ರ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಟ್ರಾಯ್ ತಿಳಿಸಿದೆ. ಇದರಿಂದಾಗಿ ಸ್ಟ್ಯಾಂಡ್ ಅಲೋನ್ ಚಾನೆಲ್‌ಗಳಿಗೆ ದರ ನಿಗದಿಪಡಿಸುವ ಅವಕಾಶ ಕೂಡ ದೊರೆಯಲಿದೆಯಂತೆ. ಹಾಗೇ ಪ್ರಸಾರಕರು ತಮ್ಮ ಚಾನೆಲ್‌ಗಳ ದರ ಹಾಗೂ ಅದರಲ್ಲಿನ ಚಾನೆಲ್‌ಗಳ ವಿವರವನ್ನು ಡಿಸೆಂಬರ್ 16ರ ಒಳಗೆ ಟ್ರಾಯ್‌ಗೆ ಸಲ್ಲಿಸಬೇಕಿದೆ.
ಅದರ ಜೊತೆಗೆ ಡಿಟಿಎಚ್ ಹಾಗೂ ಮಲ್ಟಿ ಸಿಸ್ಟಂ ಆಪರೇಟರ್‌ಗಳು ತಿದ್ದುಪಡಿ ಮಾಡಿರುವ ವಿತರಕರ ಚಿಲ್ಲರೆ ಬೆಲೆಯ ವಿವರಗಳನ್ನು ಜನವರಿ 1ರ ಒಳಗೆ ಸಲ್ಲಿಸಬೇಕೆಂದು ತಿಳಿಸಿದೆ. 2023ರ ಫೆಬ್ರವರಿ 1ರಿಂದ ಎಲ್ಲಾ ವಿತರಕರು ಸೇರಿದಂತೆ ಟಿವಿ ಚಾನೆಲ್‌ಗಳು ಕೂಡ ಪರಿಷ್ಕೃತ ನಿಯಮಗಳಿಗೆ ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಟ್ರಾಯ್ ತಿಳಿಸಿದೆ.