ಮುಖ್ಯವಾದ ಮಾಹಿತಿ | ಆಧಾರ್ ಬಳಕೆಗೆ UIDAI ಹೊಸ ಆದೇಶ | ಹೊಸ ನಿಯಮ!

Share the Article

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(uidai) ಆಧಾರ್‌ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಶಾಸನ ಬದ್ಧ ಪ್ರಾಧಿಕಾರವಾಗಿದೆ.

ಭಾರತದ ನಾಗರಿಕರಿಗೆ ಆಧಾರ್‌ ಎನ್ನುವ ವಿಶೇಷ ಗುರುತಿನ ಸಂಖ್ಯೆ(udi) ನೀಡುವ ಉದ್ದೇಶದಿಂದ ಯುಐಡಿಎಐ ಇದನ್ನು ಸ್ಥಾಪಿಸಿದ್ದು, ಹೀಗಾಗಿ ಯುಐಡಿ ಮೂಲಕ ಅಸಲಿ ಹಾಗೂ ನಕಲಿ ಗುರುತನ್ನು ಸುಲಭವಾಗಿ ಪರಿಶೀಲನೆ ಮಾಡಬಹುದಾಗಿದೆ.

ಆಧಾರ್ 12-ಅಂಕಿಯ ವಿಶಿಷ್ಟ ಸಂಖ್ಯೆಯಾಗಿದ್ದು, ಇದನ್ನು ಗುರುತಿನ ಉದ್ದೇಶಗಳಿಗಾಗಿ ಭಾರತ ಸರ್ಕಾರವು ಹೊರತಂದಿದ್ದು ತಿಳಿದಿರುವ ವಿಚಾರವೇ!!ಆಧಾರ್ ಕಾರ್ಡ್ ಹೊಂದಿರುವವರಿಗೆ ಮುಖ್ಯ ಮಾಹಿತಿ ಇದ್ದು, uidai ನಿಂದ ವಿಶೇಷ ನವೀಕರಣ ಮಾಡಲು ಮುಂದಾಗಿದ್ದು, ಇದು ದೇಶಾದ್ಯಂತ ಆಧಾರ್ ಕಾರ್ಡ್ ಹೊಂದಿರುವವರ ಮೇಲೆ ಪರಿಣಾಮ ಬೀರುವ ಸಾದ್ಯತೆ ದಟ್ಟವಾಗಿದೆ.ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಆಧಾರ್ ಸಂಖ್ಯೆ ವಿಶಿಷ್ಟವಾಗಿದೆ. ಆಧಾರ್ ಕಾರ್ಡ್ ಹೆಸರು, ಶಾಶ್ವತ ವಿಳಾಸ, ಚಿತ್ರ, ಲಿಂಗ, ಬೆರಳಚ್ಚುಗಳು, ಐರಿಸ್ ಮಾಹಿತಿ ಮತ್ತು ಬಯೋಮೆಟ್ರಿಕ್ ಸ್ವರೂಪದಲ್ಲಿ ದಾಖಲಾದ ವ್ಯಕ್ತಿಯ ವಯಸ್ಸನ್ನು ಸಂಗ್ರಹಿಸುತ್ತದೆ.

ನಾಗರಿಕರು ತಮ್ಮ ಇ ಆಧಾರ್ ಅನ್ನು ಸುಲಭವಾದ, ಆನ್‌ಲೈನ್ ಕಾರ್ಯವಿಧಾನದ ಮೂಲಕ ಪಡೆಯಬಹುದಾಗಿದೆ. ಆಧಾರ್ ಕಾರ್ಡ್ ದುರ್ಬಳಕೆ ಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಬದಲಾವಣೆ ಕ್ರಮ ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಯುಐಡಿಎಐ ಹೊಸ ಆದೇಶದಂತೆ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (uidai) ಆಧಾರ್ ತೆಗೆದುಕೊಳ್ಳುವಾಗ ಅದನ್ನು ಪರಿಶೀಲನೆ ನಡೆಸಲು ರಾಜ್ಯ ಸರ್ಕಾರಗಳು ಮತ್ತು ಘಟಕಗಳಿಗೆ ಸೂಚಿಸಿದ್ದು, ಇದರ ಕುರಿತಾದ ಅಧಿಕೃತ ಹೇಳಿಕೆಯನ್ನು ಯುಐಡಿಎಐ ಬಿಡುಗಡೆ ಮಾಡಿದೆ.

ಆಧಾರ್ ದುರ್ಬಳಕೆ ತಡೆಯಲು ಯೋಜನೆ ರೂಪಿಸಲಾಗಿದೆ ಎಂದು ಯುಐಡಿಎಐ ಹೇಳಿದ್ದು, ಆಧಾರ್ ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಸ್ವೀಕರಿಸುವ ಮೊದಲೇ ಆಧಾರ್ ಕಾರ್ಡ್ ಪರಿಶೀಲನೆ ಅತ್ಯಗತ್ಯ ಎನ್ನಲಾಗಿದೆ.ಇದರ ನಡುವೆ ಯುಐಡಿಎಐ ಮಕ್ಕಳ ಬಾಲ ಆಧಾರ್ ಕಾರ್ಡ್ ನವೀಕರಿಸುವಂತೆ ಪೋಷಕರಿಗೆ ಸೂಚನೆಯನ್ನು ಕೂಡ ನೀಡಿದೆ.

ಮಾಹಿತಿ ನೀಡಿದ ಪ್ರಾಧಿಕಾರವು ಆಧಾರ್ ಕಾರ್ಡ್ ಹೊಂದಿರುವವರ ಸಮ್ಮತಿಯ ಬಳಿಕ,ಆಧಾರ್ ಪತ್ರ, ಇ-ಆಧಾರ್, ಆಧಾರ್ ಪಿವಿಸಿ ಕಾರ್ಡ್ ಮತ್ತು ಎಂ-ಆಧಾರ್ ಪರಿಶೀಲನೆ ನಡೆಸಬೇಕು ಎಂದು ಹೇಳಿದೆ ಎನ್ನಲಾಗಿದೆ.ಆಧಾರ್ ಬಳಸುವ ಮೊದಲು ಪರಿಶೀಲನೆಯ ಅವಶ್ಯಕತೆಯನ್ನು ಒತ್ತಿ ಹೇಳಿದ್ದು, ಅಗತ್ಯ ಮಾರ್ಗಸೂಚಿಗಳನ್ನು ನೀಡುವಂತೆ ಯುಐಡಿಎಐ ರಾಜ್ಯ ಸರ್ಕಾರಗಳನ್ನ ಒತ್ತಾಯಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಹಾಗಾಗಿ, ಯುಐಡಿಎಐ ಪರಿಶೀಲನೆಯ ಅಗತ್ಯತೆ ಮತ್ತು ಅನುಸರಿಸಬೇಕಾದ ಪ್ರೋಟೋಕಾಲ್ಗಳ ಮಹತ್ವದ ಮಾಹಿತಿಯನ್ನು ಪುನರುಚ್ಚರಿಸಿದ್ದು, ಈ ಕುರಿತಾದ ಸುತ್ತೋಲೆಯನ್ನು ಸಹ ಹೊರಡಿಸಿದೆ . ಹಾಗಾಗಿ , ಇನ್ನು QR ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ಆಧಾರ್ ಪರಿಶೀಲನೆ ನಡೆಸಬಹುದು.

Leave A Reply