Morning Breakfast: ದಿಢೀರನೆ ಮಾಡಬಹುದಾದ ರುಚಿಕರ ಟೊಮ್ಯಾಟೋ ಉಪ್ಪಿಟ್ಟು | ಈ ರೀತಿ ಮಾಡಿ ತಿನ್ನಿರಿ!

ಆಹಾರ ಅಂದಾಗ ನಾವು ಬಗೆ ಬಗೆಯಾಗಿ ನಮಗೆ ಬೇಕಾದ ರೀತಿಯಲ್ಲಿ ತಯಾರಿಸಿಕೊಂಡು ತಿನ್ನಬಹುದು. ಆದರೆ ಬೆಳಗಿನ ತಿಂಡಿ ನಮಗೆ ಬಹಳ ಮುಖ್ಯ. ರಾತ್ರಿಯಿಡಿ ನಿದ್ದೆ ಮಾಡಿ ಬೆಳಗಿನ ತಿಂಡಿ ಒಂದು ಹೊಟ್ಟೆ ತುಂಬಾ ತಿನ್ನುವ ತವಕ ಇರುತ್ತದೆ. ಹಾಗಿದ್ದರೆ ಏನು ಮಾಡಬಹುದು ಎಂಬ ಚಿಂತೆ ಕೆಲವರಲ್ಲಿ.

ಟೊಮೆಟೋ ಉಪ್ಪಿಟ್ಟು ಮಾಡಬಹುದು. ಎಲ್ಲರಿಗೂ ಇಷ್ಟವಾಗುವಂತೆ, ಮನೆಯಲ್ಲಿ ಮಕ್ಕಳು, ವೃದ್ಧರು ಎಲ್ಲರೂ ತಿನ್ನುವಂತೆ ಉಪ್ಪಿಟ್ಟು ಮಾಡಿಕೊಳ್ಳಬಹುದು.

ಇದು ದಕ್ಷಿಣ ಭಾರತದಲ್ಲಿ ಪ್ರಧಾನ ಉಪಹಾರವಾಗಿದೆ. ಟೊಮೇಟೊ ಉಪ್ಪಿಟ್ಟು ತನ್ನದೇ ಆದ ರುಚಿ ಹೊಂದಿದೆ. ಟೊಮ್ಯಾಟೋ ಉಪ್ಪಿಟ್ಟು ನೀವು ಸೂಜಿ ರವೆ ಅಥವಾ ದಪ್ಪ ರವೆಯಿಂದಲೂ ಮಾಡಬಹುದು. ಆದ್ರೆ ಸೂಜಿ ರವೆಯಿಂದ ಮಾಡಿದ್ರೆ ಹೆಚ್ಚು ರುಚಿ ಆಗಿರುತ್ತದೆ.
ಬಾಂಬೆ ರವಾ ಕಡಿಮೆ ಫೈಬರ್ ಅನ್ನು ಹೊಂದಿರುತ್ತದೆ. ಇದನ್ನು ಸಂಸ್ಕರಿಸಿದ ಆಹಾರವೆಂದು ಪರಿಗಣಿಸಲಾಗಿದೆ. ಹಾಗಾಗಿ ಇದನ್ನು ತಪ್ಪಿಸುವವರು ಗೋಧಿ ರವಾ ಮತ್ತು ಬನ್ಸಿ ರವಾ ಬಳಸಬಹುದು. ಟೊಮ್ಯಾಟೋ ಉಪ್ಪಿಟ್ಟು ಮಾಡಲು ಜೊತೆಗೆ ಕ್ಯಾರೆಟ್, ಬಟಾಣಿ ಮತ್ತು ಹಸಿರು ಬೀನ್ಸ್ ನಂತಹ ಮಿಶ್ರ ತರಕಾರಿ ಬಳಕೆ ಮಾಡಬಹುದು.

ಟೊಮ್ಯಾಟೋ ಉಪ್ಪಿಟ್ಟು ರೆಸಿಪಿಗೆ ಬೇಕಾಗುವ ಪದಾರ್ಥಗಳು

  • ಕ್ಯಾರೆಟ್, ಹಸಿರು ಬಟಾಣಿ ನಿಮ್ಮಿಷ್ಟ ದ ತರಕಾರಿಗಳು • ಸಾಸಿವೆ,
    •ಜೀರಿಗೆ,
    •ಸಣ್ಣದಾಗಿ ಕತ್ತರಿಸಿದ ಟೊಮ್ಯಾಟೋ,
    •ತುರಿದ ಶುಂಠಿ,
    •ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ,
  • ರವೆ,
  • ತುಪ್ಪ,
  • ಗೋಡಂಬಿ,
  • ಉದ್ದಿನಬೇಳೆ,
  • ಸಣ್ಣದಾಗಿ ಕೊಚ್ಚಿದ ಈರುಳ್ಳಿ,
  • ಕೊತ್ತಂಬರಿ ಸೊಪ್ಪು,
  • ಕರಿಬೇವು ಬೀನ್ಸ್,

ಟೊಮ್ಯಾಟೋ ಉಪ್ಪಿಟ್ಟು ಮಾಡುವ ವಿಧಾನ:

  • ಕಡಾಯಿ ಅಥವಾ ಪ್ಯಾನ್‌ಗೆ ಅರ್ಧ ಕಪ್ ರವಾ ಸೇರಿಸಿ.
  • ಮಧ್ಯಮ ಉರಿಯಲ್ಲಿ ಆರೊಮ್ಯಾಟಿಕ್ ಆಗುವವರೆಗೆ ಹುರಿಯಿರಿ.
  • ಈರುಳ್ಳಿ, ಟೊಮ್ಯಾಟೋ ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿ.
  • ರವಾವನ್ನು ಒಂದು ಬೌಲ್‌ ಗೆ ತೆಗೆದಿರಿಸಿ.
  • ಒಂದೂವರೆ ಚಮಚ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ.
  • ಸಾಸಿವೆ, ಜೀರಿಗೆ, ಉಪ್ಪು, ಅರಿಶಿನ ಚಮಚ ಚನಾ ದಾಲ್, ಟೀ ಚಮಚ ಉದ್ದಿನ ಬೇಳೆ ಮತ್ತು ಹತ್ತು ಗೋಡಂಬಿ ಸೇರಿಸಿ.
  • ಗೋಲ್ಡನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
  • ಕರಿಬೇವಿನ ಎಲೆ, ಹಸಿರು ಮೆಣಸಿನಕಾಯಿ, ಕತ್ತರಿಸಿದ ಈರುಳ್ಳಿ ಸೇರಿಸಿ. ಹುರಿಯಿರಿ.
  • ನಂತರ ಮುಕ್ಕಾಲು ಕಪ್ ಟೊಮ್ಯಾಟೊ, ಅರಿಶಿನ ಮತ್ತು ಟೀಚಮಚ ಉಪ್ಪು ಸೇರಿಸಿ ಹುರಿಯಿರಿ.
  • ಮೃದುವಾಗುವವರೆಗೆ ಬೇಯಿಸಿ.
  • ನಂತರ ಒಂದೂವರೆ ಕಪ್ ನೀರು ಸೇರಿಸಿ.
  • ಕುದಿಯುವಾಗ ರವೆ ಹಾಕಿ ಚೆನ್ನಾಗಿ ಮಿಶ್ರಣ ಮಾಡುತ್ತಾ ಇರಿ.
  • ನೀರೆಲ್ಲಾ ಆವಿಯಾದ ನಂತರ ಕೊತ್ತಂಬರಿ ಸೊಪ್ಪು ಸೇರಿಸಿ.
  • ಗ್ಯಾಸ್ ಆಫ್ ಮಾಡಿ. ನಂತರ ಉಪ್ಪಿಟ್ಟು ಮೇಲೆ ತುಪ್ಪ ಹಾಕಿ ತಿನ್ನಿರಿ.

ನೋಡಲು ಆಕರ್ಷತವಾಗಿರಲು ಟೊಮ್ಯಾಟೋ ಉಪ್ಪಿಟ್ಟಿಗೆ ಗೋಡಂಬಿ ಸೇರಿಸಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ, ಬಿಸಿ ಇರುವಾಗ ತಿನ್ನಲು ರುಚಿಕರ ಮತ್ತು ಹೊಟ್ಟೆ ತುಂಬಾ ತಿನ್ನಬಹುದು.

Leave A Reply

Your email address will not be published.