Kantara : ಹೊಸ ವರಾಹರೂಪಂ ಹಾಡು ಹೇಗಿದೆ ಗೊತ್ತಾ?

Share the Article

ಭರ್ಜರಿ ಹಿಟ್ ಆಗಿರುವ ‘ಕಾಂತಾರ’ ಚಿತ್ರ ತಂಡಕ್ಕೆ ‘ವರಾಹ ರೂಪಂ..’ ಹಾಡಿನ ವಿಚಾರವಾಗಿ ದೊಡ್ಡ ಸಮಸ್ಯೆಯನ್ನು ಎದುರಿಸಿತ್ತು. ವರಾಹ ರೂಪಂ ಹಾಡಿಗೆ ಕೇರಳ ಕೋರ್ಟ್ ತಡೆಯಾಜ್ಞೆ ನೀಡಿದ ಬೆನ್ನಲ್ಲೆ ಅದನ್ನು ಪ್ರಶ್ನಿಸಿ ‘ಹೊಂಬಾಳೆ ಫಿಲ್ಮ್ಸ್​’ ಕೇರಳ ಹೈಕೋರ್ಟ್​​ಗೆ ಮೇಲ್ಮನವಿ ಸಲ್ಲಿಕೆ ಮಾಡಿತ್ತು. ಆದರೆ, ಇದನ್ನು ಹೈಕೋರ್ಟ್ ರದ್ದು ಮಾಡಿ ಚಿತ್ರ ತಂಡಕ್ಕೆ ನಿರಾಸೆ ಮೂಡಿಸಿದೆ. ಈ ಕಾರಣದಿಂದ ಹಾಡಿನ ಟ್ಯೂನ್ ಬದಲಿಸಲಾಗಿದೆ.

‘ವರಾಹ ರೂಪಂ..’ ಹಾಡನ್ನು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ‘ಹೊಂಬಾಳೆ ಫಿಲ್ಮ್ಸ್​’ ಯೂಟ್ಯೂಬ್ ಚಾನೆಲ್​ಗಳಲ್ಲಿ ಅಪ್​ಲೋಡ್ ಮಾಡಲಾಗಿತ್ತು. ಈಗ ಹಳೆಯ ಹಾಡನ್ನು ‘ಹೊಂಬಾಳೆ ಫಿಲ್ಮ್ಸ್​’ ಯೂಟ್ಯೂಬ್ ಚಾನೆಲ್​ನಿಂದ ಡಿಲೀಟ್ ಮಾಡಲಾಗಿದೆ.

ಸಿನಿಮಾ ರಿಲೀಸ್ ಆದ ಕೆಲ ವಾರಗಳ ನಂತರದಲ್ಲಿ ‘ತೈಕ್ಕುಡಂ ಬ್ರಿಡ್ಜ್​​’ ಕೇಸ್ ದಾಖಲು ಮಾಡಿದ್ದೂ, ಕೋರ್ಟ್​ನಲ್ಲಿ ಕೇಸ್ ಅವರ ಪರವಾಗಿ ಆಗಿದೆ. ಈ ಕಾರಣದಿಂದ ಎಲ್ಲಾ ಪ್ಲಾಟ್​ಫಾರ್ಮ್​​ಗಳಿಂದ ಹಾಡನ್ನು ತೆಗೆಯಲಾಯಿತು. ‘ವರಾಹ ರೂಪಂ..’ ಹಾಡು ‘ಕಾಂತಾರ’ ಕ್ಲೈಮ್ಯಾಕ್ಸ್​ನಲ್ಲಿ ಬರುತ್ತದೆ. ಈ ಹಾಡು ಎಲ್ಲರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಹಾಡನ್ನು ಕೇಳಿ ಎಲ್ಲರೂ ಥ್ರಿಲ್ ಆಗಿದ್ದರು.

ಇದೀಗ ಸಿನಿಮಾವು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದ್ದೂ, ಪ್ರೈಮ್​​ನಲ್ಲಿ ಪ್ರಸಾರ ಕಂಡ ವರ್ಷನ್​​ನಲ್ಲಿ ಹಾಡಿನ ಟೋನ್ ಬದಲಿಸಲಾಗಿದೆ. ವರಾಹ ರೂಪಂ..’ ಹಾಡಿನ ಟೋನ್​ನಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದೆ. ಹೊಸ ಹಾಡನ್ನು ಕೇಳಿ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಈ ಹಾಡನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ಹೊಸ ಹಾಡಿನ ಬಗ್ಗೆ ಅಪಸ್ವರ ತೆಗೆದಿದ್ದಾರೆ.

ಕೋರ್ಟ್​ನಲ್ಲಿ ನಡೆಯುತ್ತಿರುವ ಕೇಸ್ ವಿಚಾರದಲ್ಲಿ ಹೊಂಬಾಳೆ ಫಿಲ್ಮ್ಸ್​ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಹೊಸ ವರ್ಶನ್ ವರಾಹ ರೂಪಂ ಹಾಡು ಇಲ್ಲಿದೆ..

Leave A Reply

Your email address will not be published.