Good News : ಪ್ರಥಮ ದರ್ಜೆ ಕಾಲೇಜು ಬೋಧಕ ಸಿಬ್ಬಂದಿ ಗಳಿಗೆ ಭರ್ಜರಿ ಸಿಹಿ ಸುದ್ದಿ!!!
ಸರ್ಕಾರ ವಿದ್ಯಾರ್ಥಿಗಳ ಏಳಿಗೆಯ ದೃಷ್ಠಿಯಿಂದ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಈ ನಡುವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ವರ್ಗಕ್ಕೆ ಸಿಹಿ ಸುದ್ದಿ ನೀಡಲು ಮುಂದಾಗಿದೆ.
ಹೌದು!!. ರಾಜ್ಯ ಸರ್ಕಾರ ( Karnataka Government ) ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ( Government First Grade College ) ಬೋಧಕರ ವರ್ಗಾವಣೆಯನ್ನು ( Transfer of Faculty ) ಗಣಕೀಕೃತ ಕೌನ್ಸಿಲಿಂಗ್ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ವರ್ಗಾವಣೆ ನಿರೀಕ್ಷೆಯಲ್ಲಿದ್ದಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೋಧಕರಿಗೆ ಗುಡ್ ನ್ಯೂಸ್ ದೊರೆತಿದೆ.
ಈ ಕುರಿತಂತೆ ಕಾಲೇಜು ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಪ್ರತಿ ವರ್ಷ ಕೌನ್ಸೆಲಿಂಗ್ ಮೂಲಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗಿದೆ . ಆದರೆ, ನಾನಾ ಕಾರಣಗಳಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬೋಧಕರ ವರ್ಗಾವಣೆ ಪ್ರಕ್ರಿಯೆಯನ್ನು ಜಾರಿಗೆ ತರಲು ಸಾಧ್ಯವಾಗಿರಲ್ಲದೆ ಇರುವುದರಿಂದ ಸದ್ಯ ಹಲವಾರು ಮನವಿಗಳು ಸರ್ಕಾರಕ್ಕೆ ತಲುಪಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರಕ್ಕೆ ವರ್ಗಾವಣೆಯ ಕುರಿತು ಮನವಿ ಸಲ್ಲಿಸ ಲಾದ ಹಿನ್ನೆಲೆಯಿಂದ ಆಯುಕ್ತಾಲಯದ ಪ್ರಸ್ತಾವನೆಯಂತೆ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಪಾರದರ್ಶಕವಾಗಿ ನಿಯಮಾನುಸಾರ ಗಣಕೀಕೃತ ಕೌನ್ಸಿಲಿಂಗ್ ಆಧಾರದ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲು ಸರ್ಕಾರ ಅನುಮತಿ ನೀಡಲಾಗಿದೆ .