ಬಾಡಿಗೆ ಮನೆ ಪಡೆಯಲು ಜಾರಿಯಾಗಲಿದೆ ಹೊಸ ಮಾರ್ಗಸೂಚಿ!
ಈಗಾಗಲೇ ಮಂಗಳೂರಿನಲ್ಲಿ ನಡೆದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ಶಂಕಿತ ಉಗ್ರ ಶಾರಿಕ್ ಬಗ್ಗೆ ಕೆಲವೊಂದು ಮಾಹಿತಿಗಳು ಮತ್ತು ಸಾಕ್ಷಿಗಳು ದೊರೆತಿದೆ.
ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪ್ರಕಾರ ಮೈಸೂರಿನ ಲೋಕನಾಯಕ ಬಡಾವಣೆಯಲ್ಲಿ ವಾಸವಿದ್ದ ಎಂಬ ಮಾಹಿತಿ ನೀಡಿದ್ದಾರೆ. ಅದಲ್ಲದೆ ಶಂಕಿತ ಉಗ್ರ ಶಾರಿಕ್, ನಕಲಿ ದಾಖಲೆ ನೀಡಿ ಮನೆ ಬಾಡಿಗೆ ಪಡೆದಿದ್ದ ಎಂದು ತಿಳಿದು ಬಂದಿದೆ.
ಈ ಘಟನೆ ಕುರಿತು ಮನೆ ಬಾಡಿಗೆ ನೀಡುವ ಮುನ್ನ ವ್ಯಕ್ತಿಯ ಹಿನ್ನೆಲೆ ತಿಳಿಯಬೇಕು. ಬಾಡಿಗೆದಾರರು ನೀಡುವ ದಾಖಲೆ ಸಂಪೂರ್ಣ ಪರಿಶೀಲಿಸಬೇಕು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ನೀಡಬೇಕು. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶ ನೀಡಿದ್ದಾರೆ.
ಮೈಸೂರಿನಲ್ಲಿ ತಲೆ ಮರೆಸಿಕೊಂಡಿದ್ದ ಶಂಕಿತ ಉಗ್ರ ಶಾರಿಕ್, ನಕಲಿ ದಾಖಲೆ ನೀಡಿ ಮನೆ ಪಡೆದಿದ್ದ ಎಂದು ಹೇಳಿದ ರಮೇಶ್ ಬಾನೋತ್, ನಗರದಲ್ಲಿ ಮನೆ ಬಾಡಿಗೆ ಪಡೆಯುವ ವಿಚಾರವಾಗಿ ಮೈಸೂರು ಪೊಲೀಸರು ಶೀಘ್ರದಲ್ಲೇ ಮಾರ್ಗಸೂಚಿ ಹೊರಡಿಸಲಿದ್ದಾರೆ ಎಂದಿದ್ದಾರೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಹಾಗೂ ಶಂಕಿತ ಉಗ್ರ ಶಾರೀಕ್ ನೆಲೆಸಿದ್ದ ಮೈಸೂರಿನ ಲೋಕನಾಯಕನಗರ ಬಡಾವಣೆಯಲ್ಲಿ ಮೌನ ನೆಲೆಸಿದೆ. ಶಾರೀಕ್ ಇದ್ದ ಮನೆಯಿರುವ ರಸ್ತೆಯಲ್ಲಿಯೂ ಎಲ್ಲ ಮನೆಗಳು ಖಾಲಿಖಾಲಿಯಾಗಿವೆ. ಬಹುತೇಕ ಮನೆಗಳಲ್ಲಿ ಜನರು ಹೆದರಿಕೆಯಿಂದ ಮನೆ ತೊರೆದು ಬೇರೆಡೆಗೆ ಹೋಗಿದ್ದಾರೆ. ಇರುವವರೂ ಮಾತನಾಡಲು, ಶಾರೀಕ್ ಬಗ್ಗೆ ಯಾವುದೇ ಮಾಹಿತಿ ಕೊಡಲು ಹಿಂಜರಿಯುತ್ತಿದ್ದಾರೆ.
ಸದ್ಯ ಈಗಾಗಲೇ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಘಟನೆ ನಡೆದು 6 ದಿನ ಕಳೆದರೂ ಸಹ ಜನರು ಆತಂಕದಲ್ಲಿ ಇದ್ದಾರೆ.