ಬರೋಬ್ಬರಿ 60 ಲಕ್ಷ ಮೌಲ್ಯದ 581 ಕೆಜಿ ಗಾಂಜಾವನ್ನು ತಿಂದು ತೇಗಿದ ಇಲಿಗಳು!!! ಕೋರ್ಟ್ ಏನು ಹೇಳಿತು ನೋಡಿ!
ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದನ್ನು ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ದೇಶದಲ್ಲಿ ಮಾದಕ ವ್ಯಸನದ (Drug Addiction) ವಿರುದ್ಧ ಅಭಿಯಾನ ಹೆಚ್ಚಾಗಿ ನಡೆಯುತ್ತಿದ್ದು, ಹಲವು ಕಡೆ ಮಾದಕ ಸಾಗಣೆ ಹಾಗೂ ಸೇವನೆ ವಿರುದ್ಧ ಕಟ್ಟನಿಟ್ಟಿನ ಕ್ರಮ ಕೂಡ ಕೈಗೊಳ್ಳಲಾಗಿದೆ. ಆದರೆ, ಮನುಷ್ಯರು ಡ್ರಗ್ಸ್ ಮಾಫಿಯಾ ಮಾಡುತ್ತಿದ್ದರೆ ನಾವೆಲ್ಲ ನಂಬುವುದು ಸಹಜ ಹಾಗೆಂದು ಮೋದಕ ಪ್ರಿಯನ ವಾಹನವಾದ ಇಲಿ ಕೂಡ ಗಾಂಜಾ ಸೇವನೆ ಮಾಡಿ ಪೊಲೀಸರ ಅತಿಥಿಯಾಗಿದ್ದಾರಂತೆ?? ಹೀಗೂ ಉಂಟೇ?? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಅರೇ ಇದೇನಿದು ಕಹಾನಿ ಎಂದು ಅಚ್ಚರಿಯಾಗಿದ್ದಿರಾ?ನಾವು ಹೇಳ್ತೀವಿ ಕೇಳಿ!! ಅಸಲಿ ವಿಚಾರವನ್ನಾ!!ಉತ್ತರ ಪ್ರದೇಶದ (Uttar Pradesh) ಮಥುರಾ ಪೊಲೀಸರು (Mathura Police) ಕೋರ್ಟ್‌ಗೆ ನೀಡಿರುವ ವರದಿಯೇ ವಿಭಿನ್ನವಾಗಿದೆ.ಪೊಲೀಸರು ಸೀಜ್ ಮಾಡಿಟ್ಟುಕೊಂಡಿದ್ದ 500 ಕೆಜಿಗೂ ಹೆಚ್ಚು ಗಾಂಜಾವನ್ನು ಇಲಿಗಳು ತಿಂದು ಹಾಕಿವೆ ಎಂದು ವಿಶೇಷ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಕಾಯ್ದೆ (Narcotic Drugs and Psychotropic Substances Act) (ಎನ್‌ಡಿಪಿಎಸ್) (1985) ಕೋರ್ಟ್‌ಗೆ ಉತ್ತರ ಪ್ರದೇಶದ ಮಥುರಾ ಪೊಲೀಸರು ವರದಿ ನೀಡಿದ್ದಾರೆ.
ಶೇರ್‌ಗಢ್ ಹಾಗ ಹೆದ್ದಾರಿ ಪೊಲೀಸ್ ಠಾಣೆಗಳ ಗೋಡೌನ್‌ಗಳಲ್ಲಿ ನಾವು ಸೀಜ್ ಮಾಡಿ ಶೇಖರಿಸಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಗಾಂಜಾವನ್ನು ಸೇವಿಸಿವೆ ಎಂದು ಖಾಕಿ ಪಡೆ ಹೇಳಿಕೊಂಡಿದೆ. ಪ್ರಕರಣವೊಂದರಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಎನ್‌ಡಿಪಿಎಸ್ ಹಸ್ತಾಂತರ ಮಾಡಿ ಎಂದು ಕೋರ್ಟ್ ಹೇಳಿದ ಬಳಿಕ ಮಥುರಾ ಪೊಲೀಸರು ಈ ರೀತಿ ವರದಿ ನೀಡಿದ್ದಾರೆ.
ಪೊಲೀಸರ ಈ ವರದಿ ನೋಡಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಇಲಿಗಳ ಕಾಟವನ್ನು ನಿಯಂತ್ರಿಸಿ ಎಂದು ಮಥುರಾದ ಎಸ್‌ಎಸ್‌ಪಿ ಅಭಿಷೇಕ್ ಯಾದವ್ ಅವರಿಗೆ ಆದೇಶ ನೀಡಿದ್ದಾರೆ. ಅಷ್ಟೇ ಅಲ್ಲ ಕಣ್ರೀ.. ಇಷ್ಟಕ್ಕೇ ಸುಮ್ಮನಾಗದ ನ್ಯಾಯಾಧಿಶರು ಪೊಲೀಸರು ಹೇಳಿದಂತೆ 60 ಲಕ್ಷ ರೂ. ಮೌಲ್ಯದ 581 ಕೆಜಿ ಗಾಂಜಾವನ್ನು ನಿಜಕ್ಕೂ ಇಲಿಗಳು ತಿಂದು ತೇಗಿ ವೆ ಎಂಬುದನ್ನೂ ರುಜುವಾತು ಮಾಡಲು ಕಟ್ಟಪ್ಪಣೆ ಮಾಡಿದ್ದಾರೆ.
ಇನ್ನು, ಸಾರ್ವಜನಿಕ ಗೋಡೌನ್‌ಗಳಲ್ಲಿ ಸ್ಟೋರ್ ಮಾಡಲಾದ ಗಾಂಜಾವನ್ನು ಹರಾಜು ಹಾಕಲು ಅಥವಾ ವಿಲೇವಾರಿ ಮಾಡಲು ಐದು – ಪಾಯಿಂಟ್ ನಿರ್ದೇಶನಗಳನ್ನು ಕೋರ್ಟ್ ನೀಡಿದ್ದು, ಕೋರ್ಟ್ ಆದೇಶದಂತೆ ಕಾಲಮಿತಿಯಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಮಥುರಾದ ಎಸ್‌ಎಸ್‌ಪಿ ಮಾತಾಂಡ್ ಪಿ. ಸಿಂಗ್ ಭರವಸೆಯನ್ನು ಸಹ ನೀಡಿದ್ದಾರೆ. ಈ ಪ್ರಕರಣದ ಕುರಿತಾಗಿ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರಣ್ವೀರ್ ಸಿಂಗ್, ‘’ಶೇರ್‌ಗಢ ಹಾಗೂ ಹೆದ್ದಾರಿ ಪೊಲೀಸ್ ಠಾಣೆಗಳು ಗೋಡೌನ್‌ಗಳಲ್ಲಿ ಶೇಖರಿಸಿಟ್ಟಿದ್ದ 581 ಕೆಜಿ ಗಾಂಜಾವನ್ನು ಇಲಿಗಳು ತಿಂದು ಹಾಕಿವೆ ಎಂದು ಹೇಳಿಕೊಂಡಿದ್ದು, ಆ ಪ್ರದೇಶಗಳಲ್ಲಿ ಸಂಗ್ರಹಿಸಿದ ವಸ್ತುಗಳನ್ನು ರಕ್ಷಣೆ ಕೂಡ ಕಷ್ಟ ಸಾಧ್ಯ ಎಂದು ಬಿಟ್ಟಿದ್ದಾರೆ ಪೊಲೀಸರು.
ಪೊಲೀಸರ ಹೇಳಿಕೆ ಸಂಬಂಧ ಸಾಕ್ಷ್ಯ ನೀಡಲು ಕೋರ್ಟ್ ಆದೇಶ ನೀಡಿದ್ದು, ಹಾಗೂ, ನವೆಂಬರ್ 26 ರಂದು ಇದರ ಕುರಿತು ಮುಂದಿನ ವಿಚಾರಣೆ ನಡೆಯಲಿದೆ ಎನ್ನಲಾಗಿದೆ.ಇನ್ನು, ಕೋರ್ಟ್‌ಗೆ ಸ್ಪಷ್ಟನೆ ನೀಡಿದ ಮಥುರಾ ಪೊಲೀಸರು, ಗಾತ್ರದಲ್ಲಿ ಚಿಕ್ಕದಾಗಿದ್ದರೂ ಇಲಿಗಳಿಗೆ ಕೀರ್ತಿ ದೊಡ್ಡದು ಎಂಬಂತೆ ಪೊಲೀಸರ ಭಯವೇ ಇಲ್ಲದೆ, ಸ್ಟೇಷನ್ ಹೌಸ್ ಅಧಿಕಾರಿಗಳು ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡಲು ತಜ್ಞರಾಗಲು ಸಾಧ್ಯವಿಲ್ಲ ಎಂದೂ ಕೋರ್ಟ್‌ಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಏನೇ ಆಗಲಿ.. ಇಲಿಗಳಿಗೂ ಕೂಡ ಆಹಾರ ಸಿಗದೇ ಗಾಂಜಾ ರುಚಿ ನೋಡುವ ಮನಸ್ಸಾಗಿರಬಹುದೇನೋ!! ಆದರೆ, ಬೆಕ್ಕಿಗೆ ಆಟ ಇಲಿಗೆ ಪ್ರಾಣಸಂಕಟ ಎನ್ನುವ ಹಾಗೇ ಇಲಿಯ ಕಾಟದಿಂದ ಪೋಲೀಸರು ಮಾತ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.