PM Jan Dhan Yojana : ಪ್ರತಿ ಖಾತೆದಾರನಿಗೆ ಸಿಗಲಿದೆ ರೂ.10 ಸಾವಿರ | ನೀವೂ ಅರ್ಜಿ ಸಲ್ಲಿಸಿ!
ಸಾಮಾನ್ಯ ವರ್ಗದ ಜನರ ಅಭಿವೃದ್ದಿಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದೂ, ಅವುಗಳಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯು ಪ್ರಮುಖವಾಗಿದೆ. ಈ ಯೋಜನೆಯ ಮೂಲಕ 47 ಕೋಟಿಗೂ ಹೆಚ್ಚು ಖಾತೆಗಳನ್ನ ತೆರೆಯಲಾಗಿದೆ. ಆದರೆ ಈ ಯೋಜನೆಯಿಂದಾಗುವ ಅನೇಕ ಪ್ರಯೋಜನಗಳು ಮಿಲಿಯನ್ ಜನರಿಗೆ ತಿಳಿದಿಲ್ಲ. ಹಲವಾರು ಪ್ರಯೋಜನಗಳಿರುವ ಈ ಯೋಜನೆಯಲ್ಲಿ ಸುಮಾರು 1 ಲಕ್ಷ 30,000 ರೂ.ಗಳವರೆಗೆ ವಿಮೆಯ ಲಭ್ಯವಿದೆ. ಇದೀಗ ಸರ್ಕಾರವು ಜನ್ ಧನ್ ಖಾತೆಗಳನ್ನು ಹೊಂದಿರುವವರಿಗೆ 10,000 ರೂ.ಗಳನ್ನು ನೀಡುತ್ತಿದೆ.
ಖಾತೆದಾರನು ತನ್ನ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸುವ ಅಗತ್ಯವಿಲ್ಲ. ಅಲ್ಲದೇ ಖಾತೆದಾರರಿಗೆ ರುಪೇ ಡೆಬಿಟ್ ಕಾರ್ಡ್ ಒದಗಿಸಲಾಗುತ್ತದೆ. ನೀವು ಬಯಸಿದರೆ ಈ ಖಾತೆಯಲ್ಲಿ 10,000 ರೂ.ಗಳ ಓವರ್ ಡ್ರಾಫ್ಟಾಗಿ ಪಡೆಯಬಹುದು. ಸರ್ಕಾರವು ಜನ್ ಧನ್ ಖಾತೆದಾರರಿಗೆ 1 ಲಕ್ಷ ರೂ.ಗಳ ಅಪಘಾತ ವಿಮಾ ಪಾಲಿಸಿ ಸೇರಿದಂತೆ ಹೆಚ್ಚುವರಿಯಾಗಿ, 30,000 ರೂ.ಗಳ ಜೀವ ವಿಮಾ ಪಾಲಿಸಿಯನ್ನು ನೀಡಲಾಗುತ್ತದೆ.
ಆಕಸ್ಮಿಕ ಸಾವು ಸಂಭವಿಸಿದಲ್ಲಿ ಖಾತೆದಾರರ ಕುಟುಂಬಕ್ಕೆ 1 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ. ಅದೇ ಸಮಯದಲ್ಲಿ ಸಾಮಾನ್ಯ ಸಂದರ್ಭಗಳಲ್ಲಿ ಸಾವು ಸಂಭವಿಸಿದರೆ 30,000 ರೂ.ಗಳ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ. ಈ ರೀತಿಯಾಗಿ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ನೀವು ಈ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆಯಲು ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ನೀವು ಇನ್ನೂ ಜನ್ ಧನ್ ಖಾತೆಯನ್ನ ತೆರೆಯದಿದ್ದರೆ, ಖಾತೆಯನ್ನು ತೆರೆಯಿರಿ. ಇದಕ್ಕಾಗಿ, ನೀವು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಹೊಂದಿರುವುದು ಅಗತ್ಯ. ಈ ಕಾರ್ಯಕ್ರಮಗಳ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ, ತಕ್ಷಣವೇ ತಿಳಿಯಿರಿ ಮತ್ತು 10,000 ರೂ.ಗಳಿಗೆ ಅರ್ಜಿ ಸಲ್ಲಿಸಿ.