ಕಾಂತಾರ ನಟಿ ಸಪ್ತಮಿಗೌಡ ಮಾಲಿವುಡ್ ಹೀರೋ ಫಹಾದ್ ಫಾಸೀಲ್ ಜೊತೆ | ಏನು ವಿಷ್ಯ ಗೊತ್ತಾ?

Share the Article

ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಅವರು ಮಾಲಿವುಡ್ ನಟ ಫಹಾದ್ ಫಾಸಿಲ್ ಅವರನ್ನು ಭೇಟಿಯಾಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನೂ ಈ ಫೋಟೋದಲ್ಲಿ ಮಾಲಿವುಡ್ ನಟನ ಜೊತೆಗೆ ಲೀಲಾ ಪೋಸ್ ಕೊಟ್ಟಿದ್ದಾರೆ.

ನಟ ಫಹಾದ್ ಫಾಸಿಲ್ ಅವರ ಜೊತೆಗಿನ ಫೋಟೋವನ್ನು ನಟಿ ಸಪ್ತಮಿ ಗೌಡ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಪೋಸ್ಟ್ ಜೊತೆಗೆ ಕೆಲವು ಸಾಲುಗಳನ್ನು ಕೂಡ ಬರೆದಿದ್ದಾರೆ.

ಪೋಸ್ಟ್ ನಲ್ಲಿ ಬರೆದ ಸಾಲುಗಳು ಏನೆಂದರೆ, ಫಹಾದ್ ಫಾಸಿಲ್ ಅಷ್ಟೆ. ಅಷ್ಟೇ ಅಲ್ಲದೆ ಸರ್ ಅವರಿಂದ ಒಂದು ಒಳ್ಳೆಯ ವಿಚಾರವನ್ನು ತಿಳಿದುಕೊಂಡೆ. ಅದೇನೆಂದರೆ, ಮೊದಲ ಸಿನಿಮಾ ಬಳಿಕ ನೀವು ಬ್ರೇಕ್ ತೆಗೆದುಕೊಂಡ ನಂತರ ನಿಮ್ಮಲ್ಲಿ ಏನು ಬದಲಾಯಿತು ಎಂದು ಕೇಳಿದಾಗ ಸರ್ ಪ್ರೀತಿ. ಎಲ್ಲದಕ್ಕೂ ಪ್ರೀತಿ ಎಂದು ಹೇಳಿದರು.

ಇನ್ನೂ, ನಟಿಯ ಈ ಫೋಟೋವನ್ನು ನೋಡಿದ ನೆಟ್ಟಿಗರು ಕಾಮೆಂಟ್ ನ ಮಳೆ ಸುರಿಸಿದ್ದಾರೆ. ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ಸಾಕಷ್ಟು ಜನರು ಕಾಮೆಂಟ್ ಕೂಡ ಮಾಡಿದ್ದಾರೆ. ಅದರಲ್ಲೂ, ಹಲವರು ಸಪ್ತಮಿ ಫಹಾದ್ ಅವರ ಜೊತೆ ಪುಷ್ಪಾ 2 ಸಿನಿಮಾದಲ್ಲಿ ನಟಿಸುತ್ತಾರಾ ಎಂದು ಕುತೂಹಲದಿಂದ ಕಾಮೆಂಟ್ ಮಾಡಿದ್ದಾರೆ. ಇನ್ನೂ ಈ ಫೋಟೋ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ.

https://www.instagram.com/p/ClU829OqBRu/?igshid=YmMyMTA2M2Y=

ಸದ್ಯ ನಟಿ ಸಪ್ತಮಿ ಗೌಡ ಅವರು ಕಾಂತಾರ ಸಿನಿಮಾ ಮುಗಿಸಿ ಹೊಸ ಸ್ಕ್ರಿಪ್ಟ್ ಕೇಳುತ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ಸಿನಿಮಾ ಅನೌನ್ಸ್ ಆಗಿಲ್ಲ. ಇನ್ನೂ ನಟ ಫಹಾದ್ ಅವರು ಪುಷ್ಪಾ, ವಿಕ್ರಮ್​ ಸೇರಿದಂತೆ ಹಲವು ಸಿನಿಮಾಗಳಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ನಟ ಪುಷ್ಪಾ 2 ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ.

Leave A Reply

Your email address will not be published.