ಜಾಮಾ ಮಸೀದಿ ಪ್ರವೇಶ | ಮಹಿಳೆಯರಿಗೆ ಹೊಸ ರೂಲ್ಸ್ !
ಜಾಮಾ ಮಸೀದಿಯ ಆಡಳಿತ ಮಂಡಳಿ ಹೊಸ ಪ್ರಕಟಣೆ ಒಂದನ್ನು ಮಸೀದಿಯ ದ್ವಾರದ ಬಳಿ ಫಲಕದಲ್ಲಿ ತೂಗು ಹಾಕಲಾಗಿದೆ.
ಸದ್ಯ ಪುರುಷರು ಜೊತೆಗಿಲ್ಲದೇ ಮಹಿಳೆಯರು ಜಾಮಾ ಮಸೀದಿ ಪ್ರವೇಶ ನಿಷೇಧಿಸಲಾಗಿದೆ ಎಂದು ಜಾಮಾ ಮಸೀದಿ ನೋಟಿಸ್ ಹೊರಡಿಸಿದೆ. ಕಳೆದ ಕೆಲದಿನಗಳ ಹಿಂದೆ ಈ ಬಗ್ಗೆ ಜಾಮಾ ಮಸೀದಿಯ ಆಡಳಿತ ಮಂಡಳಿ ಪ್ರಕಟನೆಯನ್ನು ಪ್ರವೇಶ ದ್ವಾರದ ಬಳಿ ಹಾಕಿದೆ.
ಜಾಮಾ ಮಸೀದಿಗೆ ಮಹಿಳೆ ಒಬ್ಬಳೇ ಅಥವಾ ಮಹಿಳೆಯರ ಗುಂಪು ಪುರುಷರಿಲ್ಲದೇ ಬರುವಂತಿಲ್ಲ ಎಂದು ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.
ಆದರೆ ಜಾಮಾ ಮಸೀದಿಯ ಈ ಹೊಸ ಪ್ರಕಟನೆ ಕುರಿತು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ .
ಅದಲ್ಲದೆ ಜಾಮಾ ಮಸೀದಿ ತೆಗೆದುಕೊಂಡಿರುವ ನಿರ್ಧಾರ ಅಸಂವಿಧಾನಿಕ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅಭಿಪ್ರಾಯ ತಿಳಿಸಿದ್ದಾರೆ. ಈ ಹಿಂದೆ ಜಾಮಾ ಮಸೀದಿಗೆ ಮಹಿಳೆಯರಿಗೂ ಪ್ರವೇಶ ನೀಡಲಾಗುತ್ತಿತ್ತು. ಇದೀಗ ಮಸೀದಿ ಪ್ರವೇಶ ನಿಷೇಧಿಸಲು ಮುಂದಾಗಿದೆ ಇದು ಯಾವ ನ್ಯಾಯ ಯಾವ ಕಾನೂನು ಎಂದು ಗುಡುಗಿದ್ದಾರೆ.