ಕಾಂತಾರ ತುಳು ಟ್ರೈಲರ್ ರಿಲೀಸ್! ಜನರ ರೆಸ್ಪಾನ್ಸ್ ಅದ್ಭುತ!

ಕರಾವಳಿಯ ಜನ ಕೌತುಕದಿಂದ ಎದುರು ನೋಡುತ್ತಿದ್ದ ದಿನ ಸನ್ನಿಹಿತ ವಾಗಿದ್ದು, ತುಳುನಾಡಿನ ಜನರಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದೆ. ಹೌದು!!..ಬಹುನಿರೀಕ್ಷಿತ ಕಾಂತಾರ ಸಿನಿಮಾ ತುಳು ಟ್ರೈಲರ್ ಬಿಡುಗಡೆಯಾಗಿದ್ದು, ಶೇರ್ ಆಗಿ ಕೇವಲ ಒಂದೇ ಗಂಟೆಗೆ ಲಕ್ಷಗಟ್ಟಲೆ ವೀಕ್ಷಣೆಯ ಜೊತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

ಕಾಂತಾರ ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರ ದೇಶದಲ್ಲಿ ಸಹ ಕರಾವಳಿಯ ಕಲೆಯನ್ನು ಬಿಂಬಿಸಿ , ದೈವಿಕ ಶಕ್ತಿ, ಆಚರಣೆಯ ಬಗ್ಗೆ ನಂಬಿಕೆಯನ್ನು ಎಲ್ಲೆಡೆ ಪಸರಿಸಿದೆ. ಎಲ್ಲ ಚಿತ್ರಮಂದಿರಗಳಲ್ಲಿ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಮಾಯಿ ಮಾಡಿದ್ದು, ಅಲ್ಲದೆ, 50 ದಿನ ಪೂರೈಸಿರುವ ಕಾಂತಾರ ಸಿನಿಮಾ ಒಟ್ಟು 400 ಕೋಟಿ ಕಲೆಕ್ಷನ್​ ಮಾಡಿ, ನವೆಂಬರ್​ 24 ರಿಂದ ಪ್ರೈಮ್​ನಲ್ಲಿ ಕೂಡ ಅಭಿಮಾನಿಗಳಿಗೆ ಸಿನಿಮಾ ನೋಡಲು ಅವಕಾಶ ಕಲ್ಪಿಸಲಾಗಿದೆ.

ಟ್ರೈಲರ್ ರಿಲೀಸ್ ಆಗಿ ಒಂದು ಗಂಟೆಯೊಳಗೆ ಅರ್ಧ ಲಕ್ಷಕ್ಕೂ ಹೆಚ್ಚು ವ್ಯೂಸ್ ಪಡೆದಿರುವುದು ವಿಶೇಷ. ಅದರಲ್ಲೂ ಕೂಡ ವಿಡಿಯೋಗೆ 8 ಸಾವಿರಕ್ಕೂ ಹೆಚ್ಚು ಲೈಕ್ಸ್ ಕೂಡಾ ಬಂದಿದೆ.

ಈ ನಡುವೆ, ಹೊಂಬಾಳೆ ಫಿಲ್ಮ್ಸ್ ಕಾಂತಾರ ತುಳು ವರ್ಷನ್ ಟ್ರೈಲರ್ (Kantara Tulu Trailer) ಬಿಡುಗಡೆ ಮಾಡಿದೆ. ಬಹುನಿರೀಕ್ಷಿತ ಟ್ರೈಲರ್​ ಅನ್ನು ಹೊಂಬಾಳೆ ಫಿಲ್ಮ್ಸ್ (Hombale Films) ತಮ್ಮ ಯೂಟ್ಯೂಬ್ ಚಾನೆಲ್​​ನಲ್ಲಿ ಬಿಡುಗಡೆ ಮಾಡಿದ್ದು, ಟ್ರೈಲರ್ ಬಿಡುಗಡೆ ಯಾಗುತ್ತಿದ್ದಂತೆ ಒಳ್ಳೆಯ ಫೀಡ್ ಬ್ಯಾಕ್ ಕೂಡ ದೊರೆಯುತ್ತಿದೆ.

ರಿಷಬ್ ಶೆಟ್ಟಿ (Rishab Shetty) ಬರೆದು, ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ಈಗಾಗಲೇ ಹಿಂದಿ, ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದು ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಸಿನಿಮಾ ನಿರ್ಮಾಣ ಆಗಿ ಎಲ್ಲೆಡೆ ಕಾಂತಾರ ಹವಾ ಜೋರಾಗೆ ನಡೆಯುತ್ತಿದೆ.ತುಳುನಾಡಿನ ಕಥೆಯನ್ನೇ ಒಳಗೊಂಡಿದ್ದರೂ ತುಳು ಭಾಷೆಯಲ್ಲಿ ಸಿನಿಮಾ ಟ್ರೈಲರ್ ತಡವಾಗಿ ರಿಲೀಸ್ ಆಗಿದ್ದರು ಕೂಡ ಈ ಬಗ್ಗೆ ಸಿನಿಪ್ರೇಕ್ಷರು ಭಾರೀ ನಿರೀಕ್ಷೆಗೆ ಸಾಥ್ ನೀಡಿ. ಮನರಂಜನೆಯ ರಸದೌತಣವ ಉಣ ಬಡಿಸಲು ಕಾಂತಾರ ತುಳು ವರ್ಷನ್ ನಲ್ಲಿ ಸದ್ಯದಲ್ಲೇ ಬರಲಿದ್ದು, ವಿಶೇಷವಾಗಿ ಕರಾವಳಿ ಮಂದಿಯ ಬಹುದಿನದ ನಿರೀಕ್ಷೆಯ ಜೊತೆಗೆ ಭಾರೀ ಕುತೂಹಲ ಮೂಡಿಸಿದ್ದ ತುಳು ವರ್ಷನ್ ಬಿಡುಗಡೆಯಾಗಲಿದೆ.

ಇದೀಗ ಟ್ರೈಲರ್ ರಿಲೀಸ್ ಆಗಿದ್ದು ಭರ್ಜರಿಯಾಗಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಟ್ರೈಲರ್ ಶೇರ್ ಮಾಡಿದ ಹೊಂಬಾಳೆ ಫಿಲ್ಮ್ಸ್ ಸಿನಿಮಾ ಬಗ್ಗೆ ಬರೆದುಕೊಂಡಿದ್ದು, ಹೊಂಬಾಳೆ ಫಿಲ್ಮ್ಸ್ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕಾಂತಾರದ ಅಧಿಕೃತ ತುಳು ಟ್ರೈಲರ್ ಅನ್ನು ಪ್ರಸ್ತುತಪಡಿಸಲಾಗಿದೆ.

ರಿಷಬ್ ಶೆಟ್ಟಿ ಬರೆದು ನಿರ್ದೇಶನ, ವಿಜಯ್ ಕಿರಗಂದೂರು ನಿರ್ಮಾಣ ಮತ್ತು ಬಿ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ತುಳು ನಾಡಿನ ದಂತಕಥೆಯನ್ನು ನಮ್ಮ ತುಳುಭಾಷೆಯಲ್ಲಿಯೇ ನೋಡುವ ಸುಸಮಯ ಬಂದಿದೆ (ತುಳುವನಾಡ ದಂತಕಥೆನ್ ನಮ್ಮ ತುಳು ಭಾಷೆಡೇ ತೂಪುನ ಪೊರ್ತು ಬೈದ್ಂಡ್) ಎಂದು ಬರೆಯಲಾಗಿದೆ.

ಕಾಂತಾರ ತುಳು ಸಿನಿಮಾ ಡಿಸೆಂಬರ್ 2, 2022ರಂದು ಭಾರತದಲ್ಲಿ ಹಾಗೂ ನವೆಂಬರ್ 25ರಂದು ವಿದೇಶಗಳಲ್ಲಿ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಕಾಂತಾರ ತುಳು ಟ್ರೈಲರ್​​ನಲ್ಲಿ ರಿಷಬ್ ಶೆಟ್ಟಿ ಅವರ ಡೈಲಾಗ್ ಕೇಳಲು ಸಿನಿ ಪ್ರೇಕ್ಷರು ಕಾತುರದಿಂದ ಎದುರು ನೋಡುತ್ತಿದ್ದಾರೆ.

ರಿಷಬ್ ಶೆಟ್ಟಿಯವರು ತಮ್ಮ ಸಹಜ ನಟನೆ ಮೂಲಕ ಮಿಂಚಿದ್ದರೆ, ನಟ ಕಿಶೋರ್, ಅಚ್ಯುತ್ ಕುಮಾರ್ ಸೇರಿದಂತೆ ಕನ್ನಡದ ನಟರ ಡೈಲಾಗ್ ಕೂಡ ಸ್ವಲ್ಪ ವಿಶೇಷವಾಗಿದ್ದು, ಮನರಂಜನೆ ನೀಡುವುದರಲ್ಲಿ ಸಂಶಯವಿಲ್ಲ. ಟ್ರೈಲರ್ ಯಾವುದೇ ದೋಷವಿಲ್ಲದೆ ಸುಂದರವಾಗಿಯೇ ಮೂಡಿ ಬಂದಿದೆ.

ಈಗಾಗಲೇ ಕಾಂತಾರ ಒಟಿಟಿಯಲ್ಲಿ ಜನರು ಬದಲಾದ ಮ್ಯೂಸಿಕ್ ಕೇಳಿ ವರಾಹ ರೂಪಂ ಹಾಡನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈಗ ತುಳು ಟ್ರೈಲರ್​​ನಲ್ಲಿಯೂ ಮ್ಯೂಸಿಕ್, ಬಿಜಿಎಂಗಳಲ್ಲಿ ಬದಲಾವಣೆ ಮಾಡಲಾಗಿದೆ.

ತುಳು ನಾಡಿನ ಸಿನಿಮಾ ಕುರಿತ ಕಥೆಯಾಗಿರುವುದ ರಿಂದ ಅದಕ್ಕೆ ತಕ್ಕಂತೆ ಮ್ಯೂಸಿಕ್ ಸ್ವಲ್ಪ ಬದಲಾವಣೆ ಮಾಡಿದ್ದರೂ ಈ ಬದಲಾವಣೆ ಪ್ರೇಕ್ಷಕರಿಗೆ ಇಷ್ಟವಾಗುವುದು ಪಕ್ಕಾ ಎನ್ನಲಾಗುತ್ತಿದೆ. ಟ್ರೈಲರ್ ನೋಡಿ ನೇಪಾಳದಿಂದಲೂ ಜನರು ಕಾಮೆಂಟ್ ಮಾಡುತ್ತಿರುವುದು ವಿಶೇಷ. ಟ್ರೈಲರ್ ಮೆಚ್ಚಿಕೊಂಡ ಜನರು ಸಿನಿಮಾ ಈಗ ತಾಯಿ ಮಡಿಲು ಸೇರಿಕೊಂಡ ಹಾಗಿದೆ ಎಂದು ವ್ಯಾಖ್ಯಾನ ಕೂಡ ಮಾಡುತ್ತಿದ್ದಾರೆ. .

Leave A Reply

Your email address will not be published.