ವಿಮಾನಯಾನ ಸಂಸ್ಥೆಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್ | ಇನ್ಮುಂದೆ ಸಿಗಲಿದೆ ವೈಫೈ ಸೌಲಭ್ಯ
ವಿಮಾನಯಾನ ಸಂಸ್ಥೆ ಪ್ರಯಾಣಿಕರ ಪ್ರಯಾಣ ಸುಖಕರ ಆಗುವ ನಿಟ್ಟಿನಲ್ಲಿ ಹೊಸ-ಹೊಸ ಯೋಜನೆಗಳನ್ನು ರೂಪಿಸುತ್ತಲೇ ಬಂದಿದೆ. ಅದರಂತೆ ಇದೀಗ ಪ್ರಯಾಣ ಬೋರ್ ಆಗದೇ ಇರಲು ವೈಫೈ ಸೌಲಭ್ಯವನ್ನು ಕೂಡ ನೀಡಲು ನಿರ್ಧರಿಸಿದೆ.
ಹೌದು. ಏರ್ ಏಷ್ಯಾ, ಕ್ಲೌಡ್ ಟೆಕ್ನಾಲಜಿ ಕಂಪನಿ ಶುಗರ್ ಬಾಕ್ಸ್ ಸಹಭಾಗಿತ್ವದಲ್ಲಿ, ಹಾರಾಟದ ಸಮಯದಲ್ಲಿ ತನ್ನ ಎಲ್ಲಾ ವಿಮಾನಗಳಲ್ಲಿ ವೈಫೈ ಸೌಲಭ್ಯವನ್ನ ಒದಗಿಸಲು ಪ್ರಾರಂಭಿಸಿದೆ. ಶುಗರ್ ಬಾಕ್ಸ್ನ ಸಹ-ಸಂಸ್ಥಾಪಕ ರೋಹಿತ್ ಪರಂಜ್ಪೆ ಮಾತನಾಡಿ, ‘ಹಲವು ವೈಶಿಷ್ಟ್ಯಗಳೊಂದಿಗೆ ‘ಏರ್ಫ್ಲಿಕ್ಸ್’ ಪ್ರಾರಂಭಿಸಲು ಏರ್ ಏಷ್ಯಾ ಇಂಡಿಯಾದೊಂದಿಗೆ ಪಾಲುದಾರಿಕೆ ಮಾಡಲು ನಾವು ಸಂತೋಷಪಡುತ್ತೇವೆ. ಏರ್ಫ್ಲಿಕ್ಸ್ನ ಪ್ರಯೋಜನವು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಸ್ಥಳೀಯ ವೈಫೈ ಮೂಲಕ ಎಲ್ಲಾ ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ಹೇಳಿದರು.
ಏರ್‌ಏಷ್ಯಾ ಇಂಡಿಯಾದ ಮುಖ್ಯ ಮಾರುಕಟ್ಟೆ ಅಧಿಕಾರಿ ಸಿದ್ಧಾರ್ಥ್ ಬುಟಾಲಿಯಾ, ‘ಅತ್ಯಂತ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ವಿಭಿನ್ನ ಹಾರಾಟದ ಅನುಭವವನ್ನು ನೀಡಲು ನಾವು ಈ ವೇದಿಕೆಯನ್ನು ಬಳಸಿಕೊಳ್ಳಲು ಉತ್ಸುಕರಾಗಿದ್ದೇವೆ’ ಎಂದರು.
ಈ ಸೌಲಭ್ಯವು AirAsia ಇಂಡಿಯಾದಲ್ಲಿ ಪ್ರಯಾಣಿಸುವ ಪ್ರಯಾಣಿಕರು OTT ಅಪ್ಲಿಕೇಶನ್ಗಳಿಂದ ಬಫರ್-ಮುಕ್ತ ವಿಷಯವನ್ನ ಆನಂದಿಸಲು ಅನುವು ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ, ವೆಬ್ ಸರಣಿಗಳು, ಕಿರುಚಿತ್ರಗಳು ಮತ್ತು 1,000 ಕ್ಕೂ ಹೆಚ್ಚು ಭಾರತೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರಗಳ ಸಂಚಿಕೆಗಳನ್ನ ಆನ್-ಬೋರ್ಡ್ ಸಿಸ್ಟಮ್ ಮೂಲಕ ಆನಂದಿಸಬಹುದು ಎಂದು ಜಂಟಿ ಹೇಳಿಕೆ ತಿಳಿಸಿದೆ.