Airtel Xstrem : ಗ್ರಾಹಕರೇ ಗಮನಿಸಿ, ಏರ್‌ ಟೆಲ್‌ ನ ಈ ಸಾಧನ ನೀವೇನಾದರೂ ಖರೀದಿಸಿದರೆ ಇದೆಲ್ಲಾ ಉಚಿತ ಉಚಿತ ಉಚಿತ

ಅಮೆಜಾನ್ ಭಾರತದಲ್ಲಿ ಅತಿ ಹೆಚ್ಚಿನ ಚಂದಾದಾರರನ್ನು ಹೊಂದಿದ್ದು ಉತ್ತಮ ಸೇವೆಯನ್ನು ಜನರಿಗೆ ಒದಗಿಸುತ್ತಿದೆ. ಅದಲ್ಲದೆ ಪ್ರಮುಖ ಟೆಲಿಕಾಂ ದೈತ್ಯ ಏರ್‌ಟೆಲ್ ಸಂಸ್ಥೆಯು ಎಕ್ಸ್‌ಸ್ಟ್ರೀಮ್ ಫೈಬರ್ ಮಾಸಿಕ ಯೋಜನೆಗಳಲ್ಲಿ ಭಾರಿ ಕೊಡುಗೆಗಳನ್ನು ನೀಡಲು ನಿರ್ಧರಿಸಿದೆ. ಇಂಟರ್ನೆಟ್ ಸೇವೆಗಳು ಡಿಟಿಹೆಚ್ ಸೇವೆಗಳನ್ನು ಒದಗಿಸುವ ಸಂಸ್ಥೆಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಹಾಗೂ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಆಫರ್ ಗಳನ್ನು ಕೊಡುತ್ತಲೇ ಇದೆ.

 

ಹೌದು ಈಗ ಏರ್​​​ಟೆಲ್​​ ಎಕ್ಸ್ ಟ್ರೀಮ್ ಸಹ ತನ್ನ ಕೆಲವು ಕೊಡುಗೆಗಳನ್ನು ಗ್ರಾಹಕರಿಗಾಗಿ ನೀಡುತ್ತಿದೆ. ಈ ಕೊಡುಗೆಯಿಂದ ಬಳಕೆದಾರರು ಇನ್ನಷ್ಟು ಪ್ರಯೋಜನವನ್ನು ಪಡೆಯಲಿದ್ದಾರೆ.

ಮೊದಲು ನೀವು Airtel Xstream Fiber ನ ಕನೆಕ್ಷನ್ ಒಂದನ್ನು ಮಾಡಿಕೊಳ್ಳಬೇಕು ಅಷ್ಟೇ.
ಹೊಸ Airtel Xstream Fiber ನ ಕನೆಕ್ಷನ್‌ ಅನ್ನು ಖರೀದಿ ಮಾಡುವ ಕ್ರಮ :

  • ಏರ್‌ಟೆಲ್ ಬ್ರಾಡ್‌ಬ್ಯಾಂಡ್ ವೆಬ್‌ಪುಟಕ್ಕೆ ಭೇಟಿ ನೀಡಿ.
  • ಅತ್ಯುತ್ತಮ ಇಂಟರ್ನೆಟ್ ಯೋಜನೆಯನ್ನು ಆಯ್ಕೆಮಾಡಿ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ.
  • ನಿಮ್ಮ ಆಯ್ಕೆ ವಿಳಾಸದಲ್ಲಿ ನೀವು ಹೊಸ ಬ್ರಾಡ್‌ಬ್ಯಾಂಡ್ ಕನೆಕ್ಷನ್‌ ಅನ್ನು ಪಡೆಯಬಹುದು.
  • 48 ಗಂಟೆಗಳ ಒಳಗೆ ಹೊಸ ಯೋಜನೆಯನ್ನು ಸಕ್ರಿಯಗೊಳಿಸಲಾಗುತ್ತದೆ.
  • ಇನ್‌ಸ್ಟಾಲೇಷನ್‌ ಶುಲ್ಕಕ್ಕೆ ಸಂಬಂಧಿಸಿದಂತೆ, ಬ್ರಾಡ್‌ಬ್ಯಾಂಡ್ ಕನೆಕ್ಷನ್‌ ಅನ್ನು ಪಡೆಯಲು ನೀವು ರೂ 1,000 ಪಾವತಿಸಬೇಕಾಗುತ್ತದೆ.
  • ಎಕ್ಸ್‌ಸ್ಟ್ರೀಮ್ ಬಾಕ್ಸ್‌ಗಾಗಿ, ಬಳಕೆದಾರರು ಮರುಪಾವತಿಸಬಹುದಾದ ಭದ್ರತಾ ಠೇವಣಿ 1,500 ಅನ್ನು ಪಾವತಿಸಬೇಕಾಗುತ್ತದೆ.
  • ಇದಲ್ಲದೆ, ಆಯ್ಕೆಮಾಡಿದ ಬ್ರಾಡ್‌ಬ್ಯಾಂಡ್ ಯೋಜನೆಗಾಗಿ 3 ತಿಂಗಳುಗಳು, 6 ತಿಂಗಳುಗಳು ಮತ್ತು ವಾರ್ಷಿಕ ಪಾವತಿ ಆಯ್ಕೆಯನ್ನು ಆರಿಸುವ ಮೂಲಕ ಇನ್‌ಸ್ಟಾಲೇಷನ್‌ ಶುಲ್ಕಗಳನ್ನು ಸೇವ್ ಮಾಡಬಹುದು.

ಅದಲ್ಲದೆ ಜೊತೆಗೆ, ಚೆಕ್ ಔಟ್ ಮೆನುವಿನಿಂದ ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಚಂದಾದಾರಿಕೆಯನ್ನು ಸಹ ಆಯ್ಕೆ ಮಾಡಬಹುದು. ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಲು ಬಳಕೆದಾರರು ಅದೇ ಪ್ರಕ್ರಿಯೆಯನ್ನು ಅನುಸರಿಸಬಹುದು.

Airtel Xstream Fiber ನ ಬ್ರಾಡ್‌ಬ್ಯಾಂಡ್ ಯೋಜನೆಗಳು ಮತ್ತು ಡೇಟಾ ಪ್ರಯೋಜನಗಳು:

  • ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್‌ ನ ಆರಂಭಿಕ ಯೋಜನೆಗಳು ರೂ 499 ದಿಂದ ರೂ 799, ರೂ 999 ರವರೆಗಿನ ಚಂದಾದಾರಿಕೆಗಳನ್ನು ಒಳಗೊಂಡಿವೆ. ಇದರ ಜೊತೆಗೆ ಹೈ-ಸ್ಪೀಡ್ ಇಂಟರ್ನೆಟ್ ಮತ್ತು ಕರೆಗಳನ್ನು ಸಹ ಒಳಗೊಂಡಿವೆ. ಹಾಗೆಯೇ ಅಮೆಜಾನ್ ಪ್ರೈಮ್​ ವಿಡಿಯೋ ಮತ್ತು ಡಿಸ್ನಿ ಪ್ಲಸ್ ಹಾಟ್​​ಸ್ಟಾರ್​ ನಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಕೂಡ ಉಚಿತವಾಗಿ ದೊರೆಯುತ್ತವೆ.
  • ಟೆಲಿಕಾಂ ಆಪರೇಟರ್ ಕನಿಷ್ಠ 200Mbps ವೇಗ, OTT ಚಾನೆಲ್‌ಗಳೊಂದಿಗೆ ಆಯ್ಕೆಯ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಗಳೊಂದಿಗೆ, ನೀವು ಯಾವುದೇ ಅಡೆತಡೆಯಿಲ್ಲದೆ ಇಂಟರ್ನೆಟ್ ವೇಗ, ಗೇಮ್ ಪ್ಲೇ, ವಿವಿಧ ಸಾಧನಗಳಲ್ಲಿ ಸ್ಟ್ರೀಮಿಂಗ್‌ನಂತಹ ಪ್ರಯೋಜನಗಳನ್ನು ಪಡೆಯಬಹುದು.
  • ದೇಶದ ಬಹುತೇಕ ಎಲ್ಲಾ ಪ್ರಮುಖ ನಗರಗಳು ಪ್ರಸ್ತುತ Airtel Xstream Fiber ನ ಲಭ್ಯತೆಯನ್ನು ಹೊಂದಿವೆ. ದೆಹಲಿ, ಗುರ್ಗಾಂವ್, ನೋಯ್ಡಾ, ಫರಿದಾಬಾದ್, ಗಾಜಿಯಾಬಾದ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ಪುಣೆ, ಆಗ್ರಾ, ಅಹಮದಾಬಾದ್, ಅಂಬಾಲಾ, ಅಮೃತಸರ, ಭೋಪಾಲ್, ಭುವನೇಶ್ವರ, ಚಂಡೀಗಢ, ಕೊಚ್ಚಿನ್, ಕೊಯಮತ್ತೂರು, ಡೆಹ್ರಾಡೂನ್, ಹಿಸಾರ್, ಇಂದೋರ್, ಜೈಪುರ, ಜಮ್ಮು, ಜಮ್ಶೆಡ್‌ಪುರ ಕಾನ್ಪುರ್, ಗುಂಟೂರು, ವಿಶಾಖಪಟ್ಟಣಂ ಮತ್ತು ಹಲವಾರು ನಗರಗಳಲ್ಲಿ ಲಭ್ಯವಿದೆ.

ಈ ಮೇಲಿನ ನಿಯಮನುಸಾರ ನೀವಿನ್ನು ಸುಲಭವಾಗಿ ಅಮೆಜಾನ್ ಪ್ರೈಮ್​ ವಿಡಿಯೋ ಮತ್ತು ಡಿಸ್ನಿ ಪ್ಲಸ್ ಹಾಟ್​​ಸ್ಟಾರ್​ ನಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಗಳನ್ನು ಉಚಿತವಾಗಿ ನೋಡಬಹುದಾಗಿದೆ.

1 Comment
  1. e-commerce says

    Wow, superb blog layout! How long have you ever been running a blog for?
    you made blogging glance easy. The whole glance of your website is magnificent, let alone the content material!
    You can see similar here sklep internetowy

Leave A Reply

Your email address will not be published.