FIFA ವಿಶ್ವಕಪ್ | ಫುಟ್ ಬಾಲ್ ಲೋಕದ ಶಿಶು ಸೌದಿ ಅರೇಬಿಯಾ ಕೈಲಿ ಸೋಲುಂಡ ಬಲಿಷ್ಟ ಅರ್ಜೆಂಟೀನಾ , ಸಂಭ್ರಮಾಚರಣೆಗೆ ರಜೆ ಘೋಷಿಸಿದ ಸೌದಿ ದೊರೆ!
ಫುಟ್ ಬಾಲ್ ಲೋಕದ ಶಿಶು ಸೌದಿ ಅರೇಬಿಯಾ ಕೈಯಲ್ಲಿ ಬಲಿಷ್ಟ ಅರ್ಜೆಂಟೀನಾ ಸೋಲುಂಡಿದೆ ಎಂದರೆ ಎಲ್ಲರಿಗೂ ಒಂದು ಬಾರಿ ದಿಗ್ಭ್ರಮೆ ಮೂಡಿದೆ. ಇನ್ನು ಸೌದಿ ಅರೇಬಿಯಾ ದೊರೆ ಸಲ್ಮಾನ್ ಈ ಜಯದ ಸಂಭ್ರಮಾಚರಣೆಯನ್ನು ಭರ್ಜರಿಯಾಗಿ ಮಾಡಲು ರಜೆ ಘೋಷಿಸಿದ್ದಾರೆ.
ಮಂಗಳವಾರ ನಡೆದ ಫಿಫಾ ವಿಶ್ವಕಪ್ ನ ಫುಟ್ಬಾಲ್ ಪಂದ್ಯಾಟದಲ್ಲಿ ಎಲ್ಲರಿಗೂ ಅಚ್ಚರಿ ಉಂಟಾಗಿದೆ. ಕಾರಣ, ಬಲಿಷ್ಠ ಅರ್ಜೆಂಟೀನಾದ ವಿರುದ್ಧ ಫುಟ್ ಬಾಲ್ ಲೋಕದ ಶಿಶುವಾದ ಸೌದಿ ಅರೇಬಿಯಾ ಭಾರೀ ಜಯ ಗಳಿಸಿದೆ. ಇದಂತು ಅನಿರೀಕ್ಷಿತ ಮತ್ತು ಆಶ್ಚರ್ಯವೇ ಸರಿ. 2-1 ಅಂತರದಲ್ಲಿ ಸೌದಿ ಅರೇಬಿಯಾ, ಖ್ಯಾತ ಆಟಗಾರ ಲಿಯೋನಲ್ ಮೆಸ್ಸಿಯ ಬಲಿಷ್ಟ ಅರ್ಜೆಂಟೀನ ತಂಡಕ್ಕೆ ಸೋಲನ್ನು ಪರಿಚಯಿಸಿದೆ.
ಇನ್ನು ವಿಶ್ವಕಪ್ ಗೆದ್ದ ಈ ಗೆಲುವಿನ ಸಂಭ್ರಮಾಚರಣೆಗೆ ನಾಳೆ ಸೌದಿ ದೊರೆ ಸಲ್ಮಾನ್ ದೇಶದಾದ್ಯಂತ ರಜೆ ಘೋಷಿಸಿದ್ದಾರೆ. ಸೌದಿ ದೊರೆ ವಿಶ್ವಕಪ್ ಗೆದ್ದ ಖುಷಿಯನ್ನು ರಜೆ ಘೋಷಣೆ ಮಾಡುವ ಮೂಲಕ ಪ್ರಪಂಚದಾದ್ಯಂತ ಹಂಚಿದ್ದಾರೆ.
“2022ರ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ ತಂಡದ ಅದ್ಭುತ ವಿಜಯದ ಸಂಭ್ರಮದಲ್ಲಿ, ನಾಳೆ, ಬುಧವಾರ, ಸಾರ್ವಜನಿಕ ಮತ್ತು ಖಾಸಗಿ ವಲಯದ ಎಲ್ಲಾ ಉದ್ಯೋಗಿಗಳಿಗೆ ಮತ್ತು ಶಿಕ್ಷಣದ ಎಲ್ಲಾ ಹಂತಗಳ ವಿದ್ಯಾರ್ಥಿಗಳಿಗೆ ರಜಾದಿನವಾಗಿದೆ ಎಂದು ರಾಜ ಸಲ್ಮಾನ್ ಆದೇಶಿಸಿದ್ದಾರೆ” ಎಂದು ಸೌದಿ ಗಝೆಟ್ನಿಂದ ವರದಿಯಾಗಿದೆ.
ಬಹಳಷ್ಟು ಫುಟ್ಬಾಲ್ ಅಭಿಮಾನಿಗಳನ್ನು ಹೊಂದಿದ್ದ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು 1-2 ಗೋಲುಗಳ ಅಂತರದಲ್ಲಿ ಫುಟ್ ಬಾಲ್ ಲೋಕದ ಶಿಶು ಸೌದಿ ಅರೇಬಿಯಾ ಕೈಲಿ ಸೋಲುಂಡಿದೆ. ಅರ್ಜೆಂಟೀನಾದ ಈ ಸೋಲು ವಿಶ್ವಕಪ್ ಇತಿಹಾಸದಲ್ಲಿ ಅಚ್ಚರಿಯ ಫಲಿತಾಂಶ ಕಂಡಂತಹ ಪಂದ್ಯಗಳ ಪಟ್ಟಿಗೆ ಸೇರ್ಪಡೆಯಾಗಿದೆ.