Crime News: ಅಪ್ಪ, ಅಮ್ಮ, ಅಕ್ಕ, ಅಜ್ಜಿಯನ್ನು ಕೊಂದ ಮನೆ ಮಗ | ಮತ್ತೊಂದು ಭೀಕರ ಕೊಲೆ ಪ್ರಕರಣಕ್ಕೆ ನಡುಗಿದ ದೆಹಲಿ!

ದೇಶದ ರಾಜಧಾನಿ ದೆಹಲಿಯಲ್ಲಿ ಶ್ರದ್ಧಾ ಹತ್ಯೆಯ ಪ್ರಕರಣ ಇಡೀ ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದ್ದು, ಈ ಭೀಕರ ಕೃತ್ಯ ಮಾಡುವ ಮೊದಲೇ ಮತ್ತೊಂದು ರಕ್ತದೋಕುಳಿ ಯ ಬೀಕರ ಕೃತ್ಯ ಬಯಲಿಗೆ ಬಂದಿದೆ.

 

ಹೌದು!! ಪಾಲಂ ಪ್ರದೇಶದಲ್ಲಿ ಒಂದೇ ಮನೆಯಲ್ಲಿ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದು, ತಲ್ಲಣ ಮೂಡಿಸಿದೆ. ಆದರೆ ಇದೊಂದು ಸಾಮೂಹಿಕ ಹತ್ಯೆಯಲ್ಲ ಎಂದು ತಿಳಿದು ಬಂದಿದ್ದು, ಕೊಲೆ ಪ್ರಕರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಂದೆ-ತಾಯಿ ಹಾಗೂ ಅಜ್ಜಿ ಹಾಗೂ ಸಹೋದರಿಯನ್ನು ಆ ಮನೆಯ ಮಗನೇ ಕೊಂದಿರುವ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ (Shraddha Walker Murder Case) ಕರಾಳತೆಯ ಬೆನ್ನಲ್ಲೆ ದೇಶದ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ದೆಹಲಿಯ (Delhi) ನೈಋತ್ಯ ಜಿಲ್ಲೆಯ ಪಾಲಂ (Palam) ಪ್ರದೇಶದ ಮನೆಯೊಂದರಿಂದ ನಾಲ್ವರ ಶವಗಳು ಪತ್ತೆಯಾಗಿದ್ದು, ಸಂಚಲನ ಮೂಡಿಸಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಇದು ಆತ್ಮಹತ್ಯೆಯಲ್ಲ, ಕೊಲೆ (Murder) ಪ್ರಕರಣ ಎನ್ನಲಾಗಿದ್ದು, ಪೋಲಿಸ್ ಮೂಲಗಳ ಪ್ರಕಾರ , ಯುವಕ ತನ್ನ ಹೆತ್ತವರು, ಸಹೋದರಿ ಮತ್ತು ಅಜ್ಜಿಯನ್ನು ಕೊಂದಿದ್ದಾನೆ ಎನ್ನಲಾಗಿದ್ದು, ಸದ್ಯ ಈ ಪ್ರಕರಣದ ಕುರಿತಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

25 ವರ್ಷದ ವ್ಯಕ್ತಿ ನೈರುತ್ಯ ದೆಹಲಿಯ ಪಾಲಮ್‌ ಪ್ರದೇಶದಲ್ಲಿ ತನ್ನ ತಂದೆ, ತಾಯಿ, ಸಹೋದರಿ ಹಾಗೂ ಅಜ್ಜಿಯನ್ನು ಇರಿದು ಕೊಂದಿದ್ದಾರೆ ಎಂದು ಹೇಳಲಾಗಿದೆ. ಮಾದಕ ವ್ಯಸನ ಅಭ್ಯಾಸ ಬಿಡಿಸಲು ಆತನನ್ನು ಮಾದಕ ವ್ಯಸನ ಚಟ ಬಿಡಿಸಲು ಪುನಶ್ಚೇತನ ಕೇಂದ್ರಕ್ಕೆ ಕಳಿಸಲಾಗಿತ್ತು. ಅಲ್ಲಿಂದ ಇತ್ತೀಚೆಗೆ ಆತ ಮನೆಗೆ ವಾಪಸಾದ ಬಳಿಕ ವಿವಾದವೊಂದರ ಸಂಬಂಧ ತನ್ನ ಕುಟುಂಬದವರನ್ನೇ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ವರದಿಗಳ ಪ್ರಕಾರ ಮಂಗಳವಾರ ರಾತ್ರಿ 10.31 ನಿಮಿಷಗಳ ಸುಮಾರಿಗೆ ಪಾಲಂನ ರಾಜ್ ನಗರ ಭಾಗ-2 ಪ್ರದೇಶದಲ್ಲಿ ಈ ಕೊಲೆ ಪ್ರಕರಣ ನಡೆದಿದೆ ಎನ್ನಲಾಗಿದೆ. ಆರೋಪಿಯ ಸೋದರಿಯ ಕಿರುಚಾಟ ಕೇಳಿದ ಸಂಬಂಧಿ ಪೊಲೀಸರಿಗೆ ಕರೆ ಮಾಡಿದ್ದು, ಈ ವೇಳೆ ಆರೋಪಿ ಕೇಶವ್ ಇದು ನಮ್ಮ ಕುಟುಂಬದ ವಿಚಾರ ಎಂದು ಸಂಬಂಧಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಅಷ್ಟರಲ್ಲಾಗಲೇ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಆರೋಪಿ ನಾಲ್ವರನ್ನೂ ಕೂಡ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಆರೋಪಿ ಬಾಲಕ ಮಾದಕ ವ್ಯಸನಿಯಾಗಿದ್ದ ಎನ್ನಲಾಗಿದೆ. ಇತ್ತೀಚೆಗಷ್ಟೇ ಮಾದಕ ವ್ಯಸನ ಕೇಂದ್ರದಿಂದ ಹೊರ ಬಂದಿದ್ದ ಅಲ್ಲದೆ, ಇದಾದ ಬಳಿಕವೇ ಆರೋಪಿ ಭೀಕರ ಕೃತ್ಯ ಎಸಗಿದ್ದಾನೆ . ಆರೋಪಿ ಬಾಲಕನ ಹೆಸರು ಕೇಶವ್ ಎನ್ನಲಾಗಿದ್ದು, ಆತ ಈ ಕೃತ್ಯಕ್ಕೆ ಬಳಸಿದ್ದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದೆಹಲಿಯ ತಮ್ಮ ನಿವಾಸದಲ್ಲಿ ಕುಟುಂಬದ ಎಲ್ಲ ನಾಲ್ವರೂ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎನ್ನಲಾಗಿದ್ದು, ಹತ್ಯೆಗೀಡಾದವರು ದಿವಾನೋ (ಆರೋಪಿಯ ಅಜ್ಜಿ), ದಿನೇಶ್ ಕುಮಾರ್ (ಆರೋಪಿಯ ತಂದೆ), ದರ್ಶನ್ ರಾಣಿ (ಆರೋಪಿಯ ತಾಯಿ) ಊರ್ವಶಿ (ಆರೋಪಿಯ ಸಹೋದರಿ) ಎಂದು ಪೊಲೀಸರು ಗುರುತು ಬಹಿರಂಗಪಡಿಸಿದ್ದಾರೆ.

ಆರೋಪಿಯ ಮನೆಯ ಶೌಚಾಲಯದಲ್ಲಿ ಎರಡು ಮೃತದೇಹಗಳು ಪತ್ತೆಯಾಗಿದ್ದು, ಬೆಡ್‌ರೂಂಗಳಲ್ಲಿ ಮತ್ತೆರಡು ಮೃತದೇಹಗಳು ಪತ್ತೆಯಾಗಿದೆ . ಪೊಲೀಸರು ಸ್ಥಳಕ್ಕೆ ಬಂದಾಗ, ಕುಟುಂಬದ ನಾಲ್ವರು ಸದಸ್ಯರು ಮನೆಯೊಂದರಲ್ಲಿ ಮೃತಪಟ್ಟಿದ್ದರು ಎನ್ನಲಾಗಿದ್ದು, ಅಲ್ಲದೆ, ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟಿದ್ದು, ಆದರೆ, ಸಂಬಂಧಿಕರು ಹಾಗೂ ಕರೆ ಮಾಡಿದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಪ್ರಕರಣದ ಕುರಿತಾಗಿ ಆರೋಪಿ, ತನ್ನದೇ ಸ್ವಂತ ಕುಟುಂಬದ ಸದಸ್ಯರನ್ನು ಕೊಂದಿದ್ದೇಕೆ ಎಂಬ ಪ್ರಶ್ನೆ ಮೂಡಿದ್ದು, ಪೋಲೀಸರು ವಿಚಾರಣೆ ನಡೆಸುತ್ತಿದ್ದು, ಪೊಲೀಸ್ ತಂಡ ಕೊಲೆಯ ನಿಗೂಢ ರಹಸ್ಯ ಭೇದಿಸುವಲ್ಲಿ ನಿರತವಾಗಿದೆ .

Leave A Reply

Your email address will not be published.