ಅಯ್ಯಪ್ಪ ಭಕ್ತರಿಗೆ ಭರ್ಜರಿ ಗುಡ್‌ ನ್ಯೂಸ್‌!

Share the Article

ಶಬರಿಮಲೆ ದೇವಸ್ಥಾನಕ್ಕೆ ತೆರಳುವ ಅಯ್ಯಪ್ಪ ಭಕ್ತರಿಗೆ ವಿಮಾನದಲ್ಲಿ ಇರುಮುಡಿ ಕಟ್ಟು ಒಯ್ಯಲು ನಿಷೇಧವಿತ್ತು. ಆದರೆ ಇದೀಗ ಅದಕ್ಕೆ ಅನುಮತಿ ದೊರಕಿದೆ. ಇನ್ನೂ ಭಕ್ತಾದಿಗಳು ಇರುಮುಡಿ ಕಟ್ಟಿನೊಂದಿಗೆ ನಿರಾಳವಾಗಿ ಶಬರಿಮಲೆಗೆ ತೆರಳಬಹುದಾಗಿದೆ.

ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಯಾತ್ರೆ ಕೈಗೊಳ್ಳುವ ಭಕ್ತಾದಿಗಳಿಗೆ ವಿಮಾನದ ‘ಕ್ಯಾಬಿನ್‌ ಬ್ಯಾಗೇಜ್‌’ನಲ್ಲಿ ತೆಂಗಿನಕಾಯಿಯನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋಗಲು ವಿಮಾನಯಾನ ಭದ್ರತಾ ನಿಯಂತ್ರಕ ಸಂಸ್ಥೆಯಾದ ‘ಬಿಸಿಎಎಸ್‌’ ಇದೀಗ ಅನುಮತಿ ನೀಡಿದೆ.

ತೆಂಗಿನಕಾಯಿ ದಹನಶೀಲವಾಗಿದ್ದರಿಂದ ಅದನ್ನು ವಿಮಾನದೊಳಗಡೆ ಕ್ಯಾಬಿನ್‌ ಬ್ಯಾಗೇಜ್‌ನಲ್ಲಿ ಕೊಂಡೊಯ್ಯಲು ಅವಕಾಶವಿರಲಿಲ್ಲ. ಆದರೆ ಶಬರಿಮಲೆ ಯಾತ್ರಾರ್ಥಿಗಳ ಇರುಮುಡಿ ಇರುವ ಬ್ಯಾಗೇಜ್‌ ಅನ್ನು ಸ್ಫೋಟಕ ಪತ್ತೆ ಪರೀಕ್ಷೆ ಸೇರಿದಂತೆ ಕೆಲವು ಪರೀಕ್ಷೆಗಳನ್ನು ವಿಮಾನಯಾನ ಭದ್ರತಾ ಸಿಬ್ಬಂದಿ (ಎಎಸ್‌ಜಿ) ನಡೆಸಿದ ಬಳಿಕ ಅನುಮತಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ, ಶಬರಿಮಲೆಗೆ ಭೇಟಿ ನೀಡುವ ಅನೇಕ ಭಕ್ತಾದಿಗಳು ದೇವರಿಗೆ ಸಮರ್ಪಿಸಲು ತಮ್ಮ ಜೊತೆಗೆ ಇರುಮುಡಿ ಕಟ್ಟನ್ನು ಕೊಂಡೊಯ್ಯುತ್ತಾರೆ. ಹಾಗಾಗಿ ಭಕ್ತಾದಿಗಳ ಅನುಕೂಲಕ್ಕೆಂದು ನಿಗದಿತ ಅವಧಿಯವರೆಗೆ ಮಾತ್ರ ಈ ವಿಶೇಷವಾದ ವಿನಾಯಿತಿಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

Leave A Reply