ಗರ್ಭಿಣಿ ನಾಯಿಯನ್ನು ಭಯಾನಕವಾಗಿ ಕೊಂದ ಪಾಪಿಗಳು!

ಸಾಕು ಪ್ರಾಣಿಗಳಲ್ಲಿ ವಿಶ್ವಾಸಕ್ಕೆ ಅರ್ಹವಾದ ಅಷ್ಟೇ ಏಕೆ ಮನೆ ಮಂದಿಯಷ್ಟೇ ಅಕ್ಕರೆ ಕಾಳಜಿ ತೋರುವ ನಾಯಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು ಎಂದರು ತಪ್ಪಾಗದು… ಆದರೆ, ಪ್ರಾಣಿಗಳ ಕಂಡರೆ, ತೊಂದರೆ ನೀಡುವ ಇಲ್ಲವೇ ಪ್ರಾಣಿಗಳಿಗೆ ನೋವು ಮಾಡಿ ಸಂಭ್ರಮಿಸುವ ಪರಿಪಾಠ ಕೆಲವರಿಗೆ ಇದೆ.
ಇದೆ ರೀತಿ, ಗರ್ಭಿಣಿ ನಾಯಿಯನ್ನು ನಾಲ್ವರು ಕಾಲೇಜು ವಿದ್ಯಾರ್ಥಿಗಳು ನಿರ್ದಾಕ್ಷಿಣ್ಯವಾಗಿ ಥಳಿಸಿದ್ದರಿಂದ ನಾಯಿಯೊಂದು ಸಾವನ್ನಪ್ಪಿರುವ ವಿಷಾದನೀಯ ಘಟನೆ ನಡೆದಿದೆ.

 

ಬೇಸ್‍ಬಾಲ್ ಬ್ಯಾಟ್, ಮರದ ದೊಣ್ಣೆ ಮತ್ತು ಕಬ್ಬಿಣದ ರಾಡ್ ಹಿಡಿದುಕೊಂಡು ನಾಯಿ ಇದ್ದ ಕೋಣೆಗೆ ನುಗ್ಗಿ ನಾಯಿ ಮೇಲೆ ಹಲ್ಲೆ ನಡೆಸುತ್ತಾ ಆರೋಪಿಗಳು ನಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಣಿ ಪ್ರಿಯರು ಆಕ್ರೋಶ ಹೊರಹಾಕಿದ್ದಾರೆ.
ನಾಯಿಯನ್ನು ಥಳಿಸಲು ಗುಂಪು ಗುಂಪಾಗಿ ವಿದ್ಯಾರ್ಥಿಗಳು ಸೇರಿದ್ದರಿಂದ ನಾಯಿ ಬೊಗಳು ಆರಂಭಿಸಿದ್ದು, ಇದರಿಂದ ಕೋಪಗೊಂಡ ಯುವಕರು ನಾಯಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಓಖ್ಲಾದ ಡಾನ್ ಬಾಸ್ಕೊ ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ವಿದ್ಯಾರ್ಥಿಯೋರ್ವ ಫೀಲ್ಡ್ ನಲ್ಲಿ ನಾಯಿಯ ಕಾಲನ್ನು ಹಿಡಿದುಕೊಂಡು ಕ್ರೂರವಾಗಿ ಎಳೆದಾಡುತ್ತಿರುವ ದೃಶ್ಯ ಕೂಡ ವೈರಲ್ ಆಗಿದ್ದು ಈ ದೃಶ್ಯ ನೋಡುಗರ ಮನಸ್ಸಿಗೆ ಬೇಸರ ಉಂಟು ಮಾಡುತ್ತದೆ. ಈ ಎಲ್ಲಾ ಘಟನೆ ನ್ಯೂ ಫ್ರೆಂಡ್ಸ್ ಕಾಲೋನಿ ಪ್ರದೇಶದಲ್ಲಿ ನಡೆದಿದ್ದು, ಆರೋಪಿಗಳ ವಿರುದ್ಧ ಪೊಲೀಸರು ನವೆಂಬರ್ 20 ರಂದೇ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ವೀಡಿಯೋದಲ್ಲಿ ನಾಯಿ ಸ್ಪಷ್ಟವಾಗಿ ಕಾಣದಿದ್ದರೂ ಕೂಡ ನಾಯಿಯನ್ನು ಎಳೆಯುವಾಗ ಅದು ಕಿರುಚಾಡುವುದನ್ನು, ನಾಯಿಯನ್ನು ನೋಡುತ್ತಾ ಯುವಕರು ನಗುತ್ತಿರುವುದನ್ನು ಕಾಣಬಹುದಾಗಿದೆ.ಈ ರೀತಿ ನಿರ್ದಯನೀಯವಾಗಿ ಅವರಲ್ಲಿ ಒಬ್ಬ ನಾಯಿಗೆ ಹೊಡೆಯುತ್ತಿದ್ದರೆ, ಇನ್ನೊಬ್ಬ ಪ್ರೇರೆಪಿಸುವ ಸಹಪಾಠಿಗಳು ಜೊತೆಗಿದ್ದಾರೆ.

ಸದ್ಯ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Leave A Reply

Your email address will not be published.