Paytm Updates: ಬಂದೇ ಬಿಡ್ತು ಪೇಟಿಯಂನಲ್ಲಿ ಹೊಸ ಫೀಚರ್ಸ್‌ | ಗ್ರಾಹಕರು ಫುಲ್‌ ಖುಷ್‌

ಮೊದಲೆಲ್ಲಾ ರೈಲು ಸಂಚಾರ ಮಾಡಬೇಕೆಂದರೆ ಅರ್ಧ ಗಂಟೆ ಮೊದಲೇ ಪ್ಲಾಟ್‌ಫಾರ್ಮ್‌ಗೆ ಹೋಗಿ ಕಾಯಬೇಕಿತ್ತು. ಮತ್ತು ನಿರ್ದಿಷ್ಟವಾಗಿ ರೈಲು ಯಾವ ಸಮಯಕ್ಕೆ ಬರುತ್ತದೆ ಎಂದು ಊಹಿಸಲು ಜನರಿಗೆ ಸಾಧ್ಯ ಆಗುತ್ತಿರಲಿಲ್ಲ. ಇನ್ನು ಮುಂದೆ ಪೇಟಿಯಂ ಆ್ಯಪ್​ ಮೂಲಕ ನೀವು ಹತ್ತುವ ರೈಲು ಎಷ್ಟು ಹೊತ್ತಿಗೆ, ಎಲ್ಲಿಗೆ ಬರುತ್ತದೆ ಎಂದು ತಿಳಿಯಬಹುದಾಗಿದೆ.

 

ರೈಲಿನಲ್ಲಿ ಪ್ರಯಾಣ ಬೆಳೆಸುವುದೆಂದರೆ ಬಹಳ ಕಷ್ಟದ ಸಂಗತಿಯಾಗಿತ್ತು. ಏಕೆಂದರೆ ರೈಲಿನಲ್ಲಿ ಟಿಕೆಟ್ ದರ ಕಡಿಮೆ ಇರುವುದರಿಂದ ರಯಲುಗಳನ್ನೇ ಹೆಚ್ಚು ಅವಲಂಬಿಸುತ್ತಿದ್ದರು. ಆದ್ದರಿಂದ ಕೆಲವೊಂದು ಬಾರಿ ರೈಲ್ವೇ ಸ್ಟೇಶನ್​​ಗಳಲ್ಲಿ ಎಲ್ಲಿದೆ ಎಂದು ಹುಡುಕಲು ಕಷ್ಟವಾಗುತ್ತಿತ್ತು. ಇನ್ನು ಮುಂದೆ ಸುಲಭ ದಾರಿ ಇಲ್ಲಿದೆ.

ಹೌದು ಸ್ಮಾರ್ಟ್‌ಫೋನ್‌ನಲ್ಲಿ ರೈಲು ಲೈವ್ ಸ್ಥಳವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇತ್ತೀಚೆಗೆ ರೈಲು ಎಲ್ಲಿದೆ ಎಂಬುದನ್ನು ತಿಳಿಸುವ ಹಲವಾರು ಆ್ಯಪ್‌ಗಳಿವೆ.
ಒಂದಾನೊಂದು ಕಾಲದಲ್ಲಿ ಪ್ರಯಾಣಿಕರು ತಾವು ಹತ್ತಲು ಬಯಸುವ ರೈಲು ಯಾವಾಗ ಪ್ಲಾಟ್‌ಫಾರ್ಮ್‌ಗೆ ತಲುಪುತ್ತದೆ ಎಂದು ತಿಳಿಯಲು ರೈಲು ಪ್ರಕಟಣೆಗಾಗಿ ಕಾಯಬೇಕಾಗಿತ್ತು. ಆದರೆ ತಂತ್ರಜ್ಞಾನದ ಮುಂದುವರಿದ ನಂತರ, ಅವರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ರೈಲು ಲೈವ್ ಸ್ಥಳವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ನಿಮ್ಮಲ್ಲಿ Paytm ಆ್ಯಪ್ ಇದ್ದರೆ ಈ ರೀತಿಯ ಆ್ಯಪ್ ಗಳನ್ನು ಡೌನ್ ಲೋಡ್ ಮಾಡುವ ಮೂಲಕ ರೈಲು ಎಲ್ಲಿದೆ ಎಂದು ತಿಳಿಯಬಹುದು.

Paytm ಅಪ್ಲಿಕೇಶನ್‌ನಲ್ಲಿ ಮಾಹಿತಿ ತಿಳಿಯುವ ಕ್ರಮಗಳು :

  • Paytm ಅಪ್ಲಿಕೇಶನ್‌ನಲ್ಲಿ ಲೈವ್ ರೈಲು ಸ್ಥಿತಿಯನ್ನು ಪರಿಶೀಲಿಸಲು ಮೊದಲು ನಿಮ್ಮ ಫೋನ್‌ನಲ್ಲಿ Paytm ಅಪ್ಲಿಕೇಶನ್ ಓಪನ್ ಮಾಡಿ.
  • ಪ್ರಯಾಣ ವಿಭಾಗದಲ್ಲಿ ರೈಲುಗಳ ಮೇಲೆ ಕ್ಲಿಕ್ ಮಾಡಿ. • ನಂತರ ಅಲ್ಲಿ ಟ್ರೈನ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
  • ನಂತರ ರೈಲು ಸಂಖ್ಯೆ ಅಥವಾ ರೈಲಿನ ಹೆಸರನ್ನು ನಮೂದಿಸಿ.
  • ಆಮೇಲೆ ಬೋರ್ಡಿಂಗ್ ಸ್ಟೇಷನ್ ಆಯ್ಕೆಮಾಡಿ.
  • ಇವೆಲ್ಲಾ ಆದ ನಂತರ ದಿನಾಂಕವನ್ನು ಆಯ್ಕೆ ಮಾಡಿ.
  • ಮತ್ತು ಚೆಕ್ ಲೈವ್ ಸ್ಥಿತಿಯನ್ನು ಕ್ಲಿಕ್ ಮಾಡಿ.
    ಇವಿಷ್ಟು ಕ್ರಮಗಳನ್ನು ನಮೂದಿಸಿದಲ್ಲಿ ರೈಲು ಪ್ರಸ್ತುತ ಯಾವ ನಿಲ್ದಾಣದಲ್ಲಿದೆ ಮತ್ತು ಅದು ನಿಮ್ಮ ನಿಲ್ದಾಣಕ್ಕೆ ಯಾವಾಗ ಬರುತ್ತದೆ ಎಂಬ ವಿವರಗಳನ್ನು ಸ್ಕ್ರೀನ್​ನ ಮೇಲ್ಭಾಗದಲ್ಲಿ ತೋರಿಸುತ್ತದೆ.

ಅದಲ್ಲದೆ ಲೈವ್ ರೈಲಿನ ಸ್ಥಿತಿಯನ್ನು Paytm ವೆಬ್‌ಸೈಟ್‌ನಲ್ಲಿ ಸಹ ಪರಿಶೀಲಿಸಬಹುದು.
ವೆಬ್ ಸೈಟ್ ನಲ್ಲಿ ಮಾಹಿತಿ ತಿಳಿಯುವ ಕ್ರಮಗಳು :
• ಮೊದಲು Paytm ವೆಬ್‌ಸೈಟ್ ಓಪನ್​ ಮಾಡಬೇಕು. • ಅಲ್ಲಿ ಕೂಡ ಆ್ಯಪ್​ನಲ್ಲಿ ಮಾಡಿದ ಹಾಗೆ ಪ್ರಯಾಣ ವಿಭಾಗದಲ್ಲಿ ರೈಲುಗಳ ಮೇಲೆ ಕ್ಲಿಕ್ ಮಾಡಿ.
• ಅದರಲ್ಲಿ ಲೈವ್ ಟ್ರೈನ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ. • ರೈಲು ಸಂಖ್ಯೆ ಅಥವಾ ರೈಲು ಹೆಸರು, ಬೋರ್ಡಿಂಗ್ ನಿಲ್ದಾಣವನ್ನು ಆಯ್ಕೆಮಾಡಿ.
• ನಂತರ ದಿನಾಂಕವನ್ನು ಆಯ್ಕೆ ಮಾಡಿ
• ಮತ್ತು ಚೆಕ್ ಲೈವ್ ಸ್ಥಿತಿಯನ್ನು ಕ್ಲಿಕ್ ಮಾಡಿ. ಈಗ ವಿವರಗಳು ಸ್ಕ್ರೀನ್​ನ ಮೇಲ್ಭಾಗದಲ್ಲಿ ತೋರಿಸುತ್ತದೆ.

ಅದಲ್ಲದೆ PNR ತಪಾಸಣೆ ವೈಶಿಷ್ಟ್ಯವು ಈಗಾಗಲೇ Paytm ನಲ್ಲಿ ಲಭ್ಯವಿದೆ. Paytm ಅಪ್ಲಿಕೇಶನ್‌ನಿಂದ ನೀವು ರೈಲಿನಲ್ಲಿ ಆಹಾರವನ್ನು ಸಹ ಆರ್ಡರ್ ಮಾಡಬಹುದು. ಈ ಸೇವೆಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ. ಈ ಅಪ್ಲಿಕೇಶನ್ ತೆಲುಗು, ಹಿಂದಿ, ಕನ್ನಡ, ತಮಿಳು, ಮರಾಠಿ, ಗುಜರಾತಿ, ಮಲಯಾಳಂ, ಪಂಜಾಬಿ, ಒಡಿಯಾ ಮುಂತಾದ ಭಾಷೆಗಳಲ್ಲಿ ಲಭ್ಯವಿದೆ.

ಇದೀಗ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಬಹಳಷ್ಟು ಅಭಿವೃದ್ಧಿಗಳಾಗುತ್ತಿವೆ. ಇವೆಲ್ಲದಕ್ಕೆ ಕೆಲವೊಂದು ಕಂಪನಿಗಳು ಕಾರಣ ಅಂತ ಹೇಳಬಹುದು. ಅದೇ ರೀತಿ ಇದೀಗ ಪೇಟಿಯಂ ಮೂಲಕ ರೈಲು ಎಲ್ಲಿ ಮತ್ತು ನಿಮಗೆ ಬೇಕಾದ ಫುಡ್ ಅನ್ನು ಮೊಬೈಲ್​ನಲ್ಲೇ ಆರ್ಡರ್​ ಮಾಡಬಹುದಾಗಿದೆ. ಇದು ಹೊಸ ರೀತಿಯ ಅಪ್ಲಿಕೇಶನ್ ಎಂದು ಹೇಳಬಹುದು.

ಈ ರೀತಿಯಾಗಿ Paytm ಅಪ್ಲಿಕೇಶನ್‌ನಲ್ಲಿ ಮಾಹಿತಿ ತಿಳಿಯುವ ಕ್ರಮಗಳನ್ನು ಅನುಸರಿಸಿ ನಿಮ್ಮ ಸಮಯವನ್ನು ಮತ್ತು ಪ್ರಯಾಣವನ್ನು ಸುಗಮಗೊಳಿಸಬಹುದಾಗಿದೆ.

Leave A Reply

Your email address will not be published.