ಗಮನಿಸಿ : ನವೆಂಬರ್ ನಲ್ಲಿ ಈ ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕಾಗಿಲ್ಲ!

ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯ ಅನುಸಾರ ಕೆಲಸ ನೀಡಿರುವ ಉದ್ಯೋಗದಾತ ನಿರ್ದಿಷ್ಟ ಮೊತ್ತದ ಹಣವನ್ನು ತನ್ನ ವಂತಿಗೆಯಾಗಿ ಭರಿಸಲಾಗುತ್ತದೆ. ಉದ್ಯೋಗಿಯ ವಂತಿಗೆಗೆ ಸಮನಾದ ಮೊತ್ತದ ವಂತಿಗೆಯನ್ನು ಉದ್ಯೋಗದಾತ ಇಪಿಎಫ್ ಖಾತೆಗೆ ಸಲ್ಲಿಸಬೇಕಾಗಿದ್ದು, ಈ ಎರಡೂ ಮೊತ್ತಗಳಿಗೆ ಸರಕಾರ ತಾನು ನಿಗದಿಪಡಿಸಿದ ಬಡ್ಡಿಯನ್ನು ನೀಡುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇತ್ತೀಚೆಗಷ್ಟೇ ತನ್ನ ಚಂದಾದಾರರಿಗೆ ಇ-ನಾಮನಿರ್ದೇಶನವನ್ನು ಕಡ್ಡಾಯಗೊಳಿಸಿತ್ತು.

 

ಪಿಂಚಣಿದಾರರು ಪ್ರತಿ ವರ್ಷ ಜೀವನ ಕಡ್ಡಾಯವಾಗಿ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕಾಗಿತ್ತು. ಪ್ರತಿ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕಾಗಿದೆ. ಆದರೆ, ಇಪಿಎಫ್ಒ ಇದೀಗ, ವರ್ಷದ ಯಾವುದೇ ಸಮಯದಲ್ಲಿ ಬೇಕಾದರು ಕೂಡ ಪಿಂಚಣಿದಾರರಿಗೆ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಅವಕಾಶ ಮಾಡಿ ಕೊಟ್ಟಿದೆ.

ಪ್ರಸ್ತುತ ಲಕ್ಷಾಂತರ ಪಿಂಚಣಿದಾರರಿದ್ದು, ಪಿಂಚಣಿದಾರರು ಪ್ರತಿ ವರ್ಷ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕಾದ ಕಡ್ಡಾಯ ನಿಯಮವಿತ್ತು. ಪ್ರತಿ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕಾಗಿದೆ. ಅಲ್ಲದೆ, ಒಂದು ವೇಳೆ ಪಿಂಚಣಿದಾರರು ಈ ನಿಯಮ ಪಾಲಿಸದೆ ಇದ್ದಲ್ಲಿ , ಅವರ ಪಿಂಚಣಿಯನ್ನು ರದ್ದುಗೊಳಿಸಲಾಗುತ್ತದೆ. ಪಿಂಚಣಿ ಪ್ರಮಾಣಪತ್ರವನ್ನು ಪಿಂಚಣಿ ಪಡೆಯುವ ಸಂಸ್ಥೆಗಳಲ್ಲೇ ಅಂದರೆ, ಆಯಾ ಬ್ಯಾಂಕಿನ ಶಾಖೆಗಳಲ್ಲಿ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

60 ವರ್ಷ ಮೇಲ್ಪಟ್ಟ ಹಿರಿಯರಿಗೆ ಜೀವನ ಪ್ರಮಾಣ ಪತ್ರ ಸಲ್ಲಿಕೆಗೆ ನವೆಂಬರ್ 1ರಿಂದ 30ರ ತನಕ ಅಂದರೆ ಇಡೀ ಒಂದು ತಿಂಗಳು ಕಾಲಾವಕಾಶವಿತ್ತು. ಆದರೆ, ಇದೀಗ ಕೆಲವು ಪಿಂಚಣಿದಾರರಿಗೆ ನವೆಂಬರ್ ನಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಕೆಯಿಂದ ವಿನಾಯಿತಿ ಗಡುವು ದೊರೆತಿದೆ.ಹೌದು!!.. ಉದ್ಯೋಗಿಗಳ ಪಿಂಚಣಿ ನಿಧಿ ಸಂಸ್ಥೆ (ಇಪಿಎಫ್ಒ) ವರ್ಷದ ಯಾವುದೇ ಸಮಯದಲ್ಲಿ ಪಿಂಚಣಿದಾರರಿಗೆ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಿದ್ದು, ಹೀಗಾಗಿ ಪಿಂಚಣಿದಾರರಿಗೆ ನವೆಂಬರ್ ನಲ್ಲಿ ತರಾತುರಿಯಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕಾಗಿಲ್ಲ.

ಜೀವನ ಪ್ರಮಾಣಪತ್ರಕ್ಕೆ ಒಂದು ವರ್ಷದ ಅವಧಿಯಿದೆ. ಇಪಿಎಸ್ -95 (EPS-95) ಪಿಂಚಣಿದಾರರು (Pensioners) ವರ್ಷದ ಯಾವುದೇ ಸಮಯದಲ್ಲಿ ಜೀವನ ಪ್ರಮಾಣಪತ್ರ (life certificate) ಸಲ್ಲಿಕೆ ಮಾಡಬಹುದು ಎಂದು ಇಪಿಎಫ್ ಒ (EPFO)ತಿಳಿಸಿದ್ದು, ಈ ನಿಯಮವು ಸಲ್ಲಿಕೆ ಮಾಡಿದ ದಿನಾಂಕದಿಂದ ಇಡೀ ವರ್ಷಕ್ಕೆ ಅನ್ವಯವಾಗಲಿದೆ. ಅಂದರೆ, ಒಂದು ವೇಳೆ ಯಾರಾದರು ಏಪ್ರಿಲ್ ನಲ್ಲಿ 2022ರಲ್ಲಿ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಿದ್ದರೆ, ಮುಂದಿನ ವರ್ಷ ಅಂದರೆ 2023ರಲ್ಲಿ ಮತ್ತೊಮ್ಮೆ ಏಪ್ರಿಲ್ ನಲ್ಲಿ ಸಲ್ಲಿಕೆ ಮಾಡಬೇಕು.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಪಿಂಚಣಿ (Pension) ಪಡೆಯುವವರಿಗೆ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಅನೇಕ ಆಯ್ಕೆಗಳಿವೆ. ಈ ಪ್ರಮಾಣಪತ್ರವನ್ನು ಆನ್ ಲೈನ್ ಅಥವಾ ಆಫ್ ಲೈನ್ ಮೂಲಕ ಸಲ್ಲಿಕೆ ಮಾಡಬಹುದಾಗಿದೆ.

ಬ್ಯಾಂಕ್ (Bank) ಅಥವಾ ಅಂಚೆ ಕಚೇರಿಗೆ (Post office) ಭೇಟಿ ನೀಡಿ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಬಹುದಾಗಿದ್ದು, ಅಲ್ಲಿ ನೀವು ಅರ್ಜಿ ಪಡೆದು ಅದನ್ನು ಭರ್ತಿ ಮಾಡಿ ಸಲ್ಲಿಕೆ ಮಾಡಬೇಕಾಗುತ್ತದೆ. ಅದೇ ರೀತಿ, ನೀವು ಪ್ಯಾನ್ ಕಾರ್ಡ್ (PAN card) ಹಾಗೂ ಆಧಾರ್ ಕಾರ್ಡ್ (Aadhaar card) ಪ್ರತಿಗಳನ್ನು ಗುರುತು ದೃಢೀಕರಣದ ದಾಖಲೆಯಾಗಿ ಸಲ್ಲಿಕೆ ಮಾಡಬೇಕು. ಇಷ್ಟೇ ಅಲ್ಲದೆ, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕೂಡ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಬಹುದಾಗಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲ ಬ್ಯಾಂಕ್ ವ್ಯವಹಾರಗಳು ಕ್ಷಣ ಮಾತ್ರದಲ್ಲಿ ಅದು ಕೂಡ ಮನೆಯಲ್ಲೇ ಕುಳಿತು ಮಾಡಿಕೊಳ್ಳಲು ಅನೇಕ ಬ್ಯಾಂಕ್ ಗಳು ಅವಕಾಶ ಮಾಡಿಕೊಟ್ಟಿದೆ.ಅದೇ ರೀತಿ, ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ಕೂಡ ಜೀವನ ಪ್ರಮಾಣಪತ್ರ (Life Certificate) ಸಲ್ಲಿಕೆ ಮಾಡಬಹುದಾಗಿದೆ.

ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹಾಗೂ ಬ್ಯಾಂಕ್ ಆಫ್ ಬರೋಡಾ (BOB) ವಿಡಿಯೋ (Video) ಕರೆ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡುವ ಅವಕಾಶವನ್ನು ಕೂಡ ಕಲ್ಪಿಸಿ ಕೊಟ್ಟಿದೆ. ಎಸ್ ಬಿಐ ಅಥವಾ ಬ್ಯಾಂಕ್ ಆಫ್ ಬರೋಡಾದ ಅಧಿಕಾರಿಗೆ ವಿಡಿಯೋ ಕರೆ ಮಾಡುವ ಮೂಲಕ ಪಿಂಚಣಿದಾರರು (Pensioners) ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬಹುದಾಗಿದ್ದು , ವೆಬ್ ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ವಿಡಿಯೋ ಕರೆ ಮಾಡಿ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಲು ಅನುವು ಮಾಡಿಕೊಟ್ಟಿದೆ.

Leave A Reply

Your email address will not be published.