ತಲೆಗೆ ಎಣ್ಣೆ ಹಾಕಿದಾಗ ಇಷ್ಟು ಟಿಪ್ಸ್ ಫಾಲೋ ಮಾಡಿ

ತಲೆಗೆ ಎಣ್ಣೆ ಹಾಕೋದು ಎಂದಾಗ ಅದೆಷ್ಟೋ ಜನ ಮೂಗು ಮುರಿಯುವವರೇ ಹೆಚ್ಚು. ಅಯ್ಯೋ ಜಿಡ್ಡು, ಹಿಂಸೆ ಈತರ ಎಲ್ಲಾ ಕಾರಣಗಳನ್ನು ನೀಡ್ತಾರೆ ಜನ. ಆದರೆ ತಲೆಗೆ ಎಣ್ಣೆ ಹಾಕದೆ ಇದ್ದವರು ಒಂದಲ್ಲ ಒಂದು ದಿನ ಇದರ ಕೆಟ್ಟ ಪರಿಣಾಮಗಳನ್ನು ಎದುರಿಸಲೇ ಬೇಕಾಗುತ್ತದೆ. ಅಂದರೆ ತಲೆ ನೋವು, ಕಣ್ಣು ಉರಿ, ಬಿಳಿ ಕೂದಲು, ಕೂದಲು ಉದುರುವುದು ಹೀಗೆ ನೂರಾರು ಭಾದೆಗಳನ್ನು ಎದುರಿಸಲೇ ಬೇಕಾಗುತ್ತದೆ.

ಜೊತೆಗೆ ತಲೆಗೆ ಎಣ್ಣೆ ಹಾಕಿದಾಗ ಕೂಡ ಕೂದಲು ಉದುರುತ್ತದೆ ಎಂಬ ಸಮಸ್ಯೆ ನಿಮ್ಮಲ್ಲಿ ಇದ್ರೆ ಇಷ್ಟು ಈಸಿ ಟಿಪ್ಸ್ ಫಾಲೋ ಮಾಡಿ ಸಾಕು.

ನೀವು ತಲೆಗೆ ಎಣ್ಣೆ ಹಾಕಿದಾಗ ರಾತ್ರಿಯಿಡೀ ತಲೆಯಲ್ಲಿ ಬಿಡಬಾರದು. 1 ರಿಂದ 3 ಗಂಟೆಯವರೆಗೆ ಮಾತ್ರ ತಲೆಯಲ್ಲಿ ಎಣ್ಣೆ ಬಿಡ್ಬೇಕು. ಕೂದಲು ಹೀರಿಕೊಳ್ಳುತ್ತದೆ. ಇಲ್ಲದಿದ್ದಲ್ಲಿ ಕೂದಲು ಉದುರುವುದು ಜಾಸ್ತಿ ಆಗುತ್ತದೆ. ಮತ್ತು ಶೀತ, ನೆಗಡಿ ಆಗುವ ಸಾದ್ಯತೆ ಇದೆ. ಹೀಗಾಗಿ ಹೆಚ್ಚು ಗಂಟೆಗಳ ಕಾಲ ದಯವಿಟ್ಟು ತಲೆಯಲ್ಲಿ ಎಣ್ಣೆಯನ್ನು ಇಟ್ಕೊಳ್ಳಬೇಡಿ.

ನೀವು ತಲೆಗೆ ಎಣ್ಣೆ ಹಾಕಿದಾಗ ಕೂದಲನ್ನು ಗಟ್ಟಿ ಕಟ್ಟಿಕೊಳ್ಳಬೇಡಿ. ಇದು ಮುಖ್ಯವಾಗಿ ಮಹಿಳೆಯರು ಫಾಲೋ ಮಾಡಬೇಕು. ಎಣ್ಣೆ ಹಾಕಿ ಗಟ್ಟಿಯಾಗಿ ಜೆಡೆಯನ್ನು ಹಾಕಬೇಡಿ. ಅಥವಾ ಜುಟ್ಟು, ಸೂಡಿ ಕಟ್ಟಬೇಡಿ ಮತ್ತು ಬಾಚಣಿಗೆಯನ್ನು ತಾಗಿಸಲೇ ಬೇಡಿ. ಇದರ ಬದಲು ಕಾಟನ್ ಬಟ್ಟೆಯನ್ನು ನೀವು ಕಟ್ಟಿಕೊಂಡರೆ ಅದು ಕೂದಲಿಗೆ ಎಣ್ಣೆಯು ಚೆನ್ನಾಗಿ ಹೀರಿಕೊಳ್ಳುತ್ತದೆ. ಹಾಗೆಯೇ ಹೇನಿನ ಸಮಸ್ಯೆ ಇದ್ದವರು ಈ ರೀತಿ ಮಾಡಿದರೆ ಈ ಸಮಸ್ಯೆ ಇಂದ ಸಂಪೂರ್ಣ ಹೊರ ಬರಬಹುದು.

ನೀವು 5 ರಿಂದ 10 ನಿಮಿಷಗಳ ಕಾಲ ತಲೆಗೆ ಎಣ್ಣೆ ಹಾಕಿದಾಗ ಮಸಾಜ್ ಮಾಡಿಕೊಳ್ತೀರಾ? ಹಾಗಿದ್ರೆ ಉಗುರನ್ನು ತಾಗಿಸಬೇಡಿ. ನಿದಾನವಾಗಿ ಮಸಾಜ್ ಮಾಡಿಕೊಳ್ಳಿ. ತಲೆಗೆ ಎಣ್ಣೆ ಹಾಕುವ ಮೊದಲು ಉಗುರು ಬೆಚ್ಚಗೆ ಬಿಸಿ ಮಾಡಿ ನಂತರ ತಲೆಗೂದಲಿಗೆ ಹಾಕಿದರೆ ಒಳಿತು.
ಇಷ್ಟು ಈಸಿ ಟಿಪ್ಸ್ ಫಾಲೋ ಮಾಡಿ ಮತ್ತು ನಿಮ್ಮ ಕೂದಲಿನಲ್ಲಿ ಆಗುವ ಬದಲಾವಣೆಯನ್ನು ಕಾಣಿ.

Leave A Reply

Your email address will not be published.