WhatsApp ಯಾವ ರೀತಿ ದುಡ್ಡು ಮಾಡುತ್ತೆ ? ಈ ಸುದ್ದಿ ಓದಿ
ಜನಪ್ರಿಯ ಮೆಸೇಜಿಂಗ್ ಫ್ಲಾಟ್‌ಫಾರ್ಮ್ ವಾಟ್ಸಾಪ್ ಅನ್ನು ವಿಶ್ವಾದ್ಯಂತ 250 ಕೋಟಿಗೂ ಹೆಚ್ಚು ಜನರು ಉಪಯೋಗಿಸುತ್ತಿದ್ದಾರೆ. ವಾಟ್ಸಾಪ್ ಅಪ್ಲಿಕೇಶನ್‌ನಲ್ಲಿ ಜಾಹಿರಾತುಗಳು ಸಹ ಇರುವುದಿಲ್ಲ. ಅಂದರೆ, ವಾಟ್ಸಾಪ್ ನಮಗೆ ಉಚಿತ ಸೇವೆ ನೀಡುತ್ತಿದೆ. ಆದರೂ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಪ್ರತಿ ವರ್ಷ ಸಾವಿರಾರು ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲದೇ ಸಾವಿರಾರು ಉದ್ಯೋಗಿಗಳಿಗೆ ಸಂಬಳವನ್ನು ನೀಡಲಾಗುತ್ತಿದೆ. ಹಾಗಾದರೆ ನಮ್ಮಿಂದ ಹಣಗಳಿಸುತ್ತಿಲ್ಲವೆಂದಾದರೆ ಸಂಸ್ಥೆಗೆ ಹಣ ಹೇಗೆ ಬರುತ್ತದೆ? ನಮಗೆ ಉಚಿತವಾಗಿ ಸೇವೆ ನೀಡಲು ಹೇಗೆ ಸಾಧ್ಯ? ಈ ಎಲ್ಲಾ ಪ್ರಶ್ನೆಗಳಿಗೆ ಸೂಕ್ತ ಉತ್ತರ ಇಲ್ಲಿದೆ.
ವಾಟ್ಸಾಪ್ ಅಭಿವೃದ್ಧಿ ಮತ್ತು ನಿರ್ವಹಣೆ ಎಲ್ಲವನ್ನೂ ಮೆಟಾ ಸಂಸ್ಥೆಯೇ ನೋಡಿಕೊಳ್ಳುವುದರಿಂದಾಗಿಯೇ ನಾವು ಉಚಿತವಾಗಿ ವಾಟ್ಸಾಪ್ ಅಪ್ಲಿಕೇಶನ್ ಬಳಸಲು ಸಾಧ್ಯವಾಗುತ್ತಿದೆ. ಇದಕ್ಕೆಲ್ಲಾ ಕಾರಣ ‘ವಾಟ್ಸಾಪ್ ಬಳಕೆದಾರರ ಡೇಟಾ’!
ಹೌದು, ವಾಟ್ಸಾಪ್ ತನ್ನ ಬಳಕೆದಾರರಿಂದ ನೇರವಾಗಿ ಹಣಗಳಿಸುತ್ತಿಲ್ಲ ನಿಜ. ಆದರೆ, ವಾಟ್ಸಾಪ್ ಬಳಕೆದಾರರಿಂದ ಮೆಟಾ ಸಂಸ್ಥೆ ಲಕ್ಷಾಂತರ ಕೋಟಿಗಳಷ್ಟು ಹಣಗಳಿಸುತ್ತಿದೆ.
ಇಡೀ ಜಗತ್ತು ಇಂದು ಡೇಟಾದ ಮೇಲೆ ನಿಂತಿದೆ. ಜಾಹಿರಾತು ಜಗತ್ತಿಗೆ ಈ ಮಾಸ್ ಡೇಟಾ ಎಂಬುದು ಚಿನ್ನದ ಮೊಟ್ಟೆ ಇದ್ದಂತೆ. ವಾಟ್ಸಾಪ್ ಅವಶ್ಯಕತೆ ಮೆಟಾ ಸಂಸ್ಥೆಗೆ ಮಾತ್ರವಲ್ಲದೇ ಬಹುತೇಕ ಎಲ್ಲಾ ಆನ್‌ಲೈನ್ ದೈತ್ಯ ಕಂಪೆನಿಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಅಪ್ಲಿಕೇಶನ್‌ಗಳಂತಹ ಜಾಲತಾಣಗಳು ಮಾತ್ರವಲ್ಲದೇ, ಅಮೆಜಾನ್, ಗೂಗಲ್ ಮತ್ತು ಮೈಕ್ರೋಸಾಫ್ಟ್ ಗಳಿಗೂ ಇದರ ಅವಶ್ಯಕತೆ ಇದೆ.
ವಾಟ್ಸಾಪ್ ಇದೀಗ ಮೆಟಾ ಸಂಸ್ಥೆಯ ಕೈಯಲ್ಲಿರುವುದರಿಂದ ವಾಟ್ಸಾಪ್ ಮಾಸ್‌ಡೇಟಾ ದತ್ತಾಂಶವನ್ನು ಉಪಯೋಗಿಸಿಕೊಂಡು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಅಪ್ಲಿಕೇಶನ್‌ಗಳಲ್ಲಿ ಜಾಹಿರಾತು ನೀಡಲು ಬಳಸಿಕೊಳ್ಳುತ್ತಿದೆ ಎಂದು ಹೇಳಲಾಗಿದೆ. ಮಾಸ್ ಡೇಟಾದ ಸಹಾಯದಿಂದ ಯಾರಿಗೆ ಅಗತ್ಯ ಏನಿದೆ ಎಂಬುದನ್ನು ತಿಳಿದು ಜಾಹಿರಾತು ನೀಡಲು ಸಾಧ್ಯವಾಗುತ್ತದೆ.
ವಾಟ್ಸಪ್ ನಲ್ಲಿ ನಡೆಸುವ ಸಂಭಾಷಣೆಯ ಮಾಸ್ ಡೇಟಾದಿಂದ ಜನರ ಮೂಡ್ ಹೇಗಿದೆ, ಅವರು ಈಗ ಏನನ್ನು ಖರೀದಿಸಲು ಬಯಸುತ್ತಿದ್ದಾರೆ, ಅವರು ಎಲ್ಲಿದ್ದಾರೆ ಮತ್ತು ಅವರ ಬಜೆಟ್ ಎಷ್ಟು ಎಂಬೆಲ್ಲಾ ವಿಷಯಗಳನ್ನು ತಿಳಿದುಕೊಳ್ಳಲು ನೆರವಾಗುತ್ತದೆ. ಈ ಡೇಟಾದ ಸಹಾಯದಿಂದ ಜಾಹೀರಾತುಗಳನ್ನು ತೋರಿಸಿ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗುತ್ತದೆ. ನಿಮ್ಮ ಇಷ್ಟ ಏನಿದೆಯೋ ಅದೇ ಜಾಹಿರಾತುವನ್ನು ನಿಮಗೆ ತೋರಿಸಲಾಗುತ್ತದೆ. ವಾಟ್ಸಾಪ್ ಡೇಟಾ ಇದೀಗ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಅಪ್ಲಿಕೇಶನ್‌ಗಳಿಗೆ ಜಾಹಿರಾತುವಿನ ಮೂಲವಾಗಿರುವುದರಿಂದ ಮೆಟಾ ಸಂಸ್ಥೆ ಲಕ್ಷಾಂತರ ಕೋಟಿಗಳನ್ನು ದುಡಿಯುತ್ತಿದೆ.
ವಾಟ್ಸಾಪ್ ದತ್ತಾಂಶವನ್ನು ಹೀಗೆ ಸಂಗ್ರಹಿಸಿದರೆ ನಮ್ಮ ಪ್ರೈವೆಸಿ ಏನಾಗುತ್ತದೆ ಎಂಬುದು ಸಹ ಹಲವು ಪ್ರಶ್ನೆ. ಆದರೆ, ನಾವು ಕಳುಹಿಸುವ ಸಂದೇಶಗಳನ್ನು ವಾಟ್ಸಾಪ್ ಯಾರ ಖಾತೆ ಎಂಬುದಾಗಿ ಮಾತ್ರ ಡಿಕೋಡ್ ಮಾಡುತ್ತದೆ. ಇದರಿಂದ ವಾಟ್ಸಾಪ್ ಬಳಕೆದಾರನ ಪ್ರೈವೆಸಿಗೆ ಧಕ್ಕೆಯಾಗುವುದಿಲ್ಲ. ಮುಂದೊಂದು ದಿನ ವಾಟ್ಸಾಪ್‌ನಲ್ಲಿ ಜಾಹಿರಾತುಗಳು ಕಾಣಿಸಿಕೊಳ್ಳಬಹುದು.