Viral News : ಮನುಷ್ಯನ ಮುಖದಂತೆ ಇರೋ ಮರಿಗೆ ಜನ್ಮ ಕೊಟ್ಟ ಮೇಕೆ | ಅಚ್ಚರಿಯ ಕಾರಣ ಬಹಿರಂಗ
ಈ ಜಗವೇ ಒಂದು ವಿಸ್ಮಯ ನಗರಿ. ಅದರಲ್ಲೂ ಕೂಡ ಕೆಲವೊಂದು ವಿಸ್ಮಯಗಳು, ಪ್ರಕೃತಿಯ ಮಡಿಲಲ್ಲಿ ನಡೆಯುವ ಅಚ್ಚರಿಗಳು ನಮ್ಮನ್ನು ದಿಗ್ರಮೆಗೆ ಒಳಗಾಗುವಂತೆ ಮಾಡುತ್ತವೆ. ಹೌದು ಇದೇ ರೀತಿಯ ಜಗತ್ತಿಗೆ ಸವಾಲು ಹಾಕುವ ವಿಸ್ಮಯ ವೊಂದು ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ವಿದಿಶಾದ ಸಿರೊಂಜ್ ತೆಹಸಿಲ್‌ನ ಸೆಮಲ್ ಖೇಡಿ ಗ್ರಾಮದ ನವಾಬ್ ಖಾನ್ ಎಂಬುವವರ ಮನೆಯಲ್ಲಿ ವಿಚಿತ್ರ ಘಟನೆಯೊಂದು ಮುನ್ನಲೆಗೆ ಬಂದಿದೆ. ಅವರ ಮುದ್ದಿನ ಮೇಕೆಯು ಮನುಷ್ಯರಂತೆಯೇ ಇರುವ ಮರಿಗೆ ಜನ್ಮ ನೀಡಿದ್ದು, ಈ ಅಚ್ಚರಿಯ ಕಣ್ಣು ತುಂಬಿಕೊಳ್ಳಲು, ಮೇಕೆಯನ್ನು ನೋಡಲು ದೂರದೂರುಗಳಿಂದ ಜನ ಬರುತ್ತಿದ್ದಾರೆ.
ಜೀವ ಇರುವ ಯಾವುದೇ ಪ್ರಾಣಿಯಾಗಲಿ, ಅಥವಾ ಮನುಷ್ಯರೇ ಆದರೂ ಕೂಡ ರೋಗಗಳು (Disease) ಕಾಣಿಸಿಕೊಳ್ಳುವುದು ಸಹಜ. ಅನೇಕ ಸಂದರ್ಭಗಳಲ್ಲಿ, ಕೆಲವು ಗಂಭೀರ ಕಾಯಿಲೆ ಇಲ್ಲವೇ ಸಮಸ್ಯೆಯಿಂದಾಗಿ, ವಿಭಿನ್ನ ಅಸ್ವಸ್ಥತೆಯು ರೋಗ ಪೀಡಿತರ ದೇಹಕ್ಕೆ ಕುತ್ತು ತರುವ ಪ್ರಮೇಯವೂ ಇದೆ. ಕೆಲವೊಮ್ಮೆ ಕೆಲ ರೋಗವು ದೇಹದ ಆಕಾರವನ್ನೇ ಸಂಪೂರ್ಣವಾಗಿ ಬದಲಾಯಿಸುವ ಮಟ್ಟಿಗೂ ತೊಂದರೆ ಉಂಟು ಮಾಡುತ್ತದೆ.
ಇತ್ತೀಚೆಗೆ, ಮಧ್ಯಪ್ರದೇಶದ (Madhya Pradesh) ಹಳ್ಳಿಯೊಂದರಲ್ಲಿ ಪವಾಡ ರೀತಿಯ ಘಟನೆ ಸಂಭವಿಸಿದ್ದು, ಇಲ್ಲಿ ಮೇಕೆಯೊಂದು ಮಾನವನ ಮುಖವನ್ನು ಹೋಲುವಂತಹ ತನ್ನ ಮರಿಗೆ (Goat) ಜನ್ಮ ನೀಡಿದ್ದು, ನೋಡುಗರಿಗೆ ಅಚ್ಚರಿ ಮೂಡಿಸಿದೆ. ಮಧ್ಯಪ್ರದೇಶದ ವಿದಿಶಾದ ಸಿರೊಂಜ್ ತಹಸಿಲ್‌ನ ಸೆಮಲ್ ಖೇಡಿ ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ನಡೆದಿದ್ದು, ಇಲ್ಲಿ ವಿಸ್ಮಯದ ರೀತಿಯಲ್ಲಿ ಮೇಕೆ ಮಗುವಿಗೆ ಜನ್ಮ ನೀಡಿದೆ. ಗ್ರಾಮದ ನಿವಾಸಿ ನವಾಬ್ ಖಾನ್ ಎಂಬುವರ ಮನೆಯಲ್ಲಿ ಅವರ ಮುದ್ದಿನ ಮೇಕೆ ಮರಿಯೊಂದಕ್ಕೆ ಜನ್ಮ ನೀಡಿದ್ದು, ಅದರ ಮುಖ ಮನುಷ್ಯರಂತಿದ್ದು, ಇದರಿಂದ ಗ್ರಾಮದವರಿಗಷ್ಟೆ ಅಲ್ಲದೆ, ಇಡೀ ತಹಸೀಲ್‌ನ ಜನರು ಬೆರಗಾಗಿದ್ದಾರೆ.
ಮೇಕೆ ಮರಿಯ ಎರಡು ಕಣ್ಣುಗಳು ಮನುಷ್ಯರಂತೆ ಒಂದರ ಹತ್ತಿರ ಮತ್ತೊಂದಿರುವುದಲ್ಲದೆ, ಅವುಗಳ ಸುತ್ತಲೂ ಕಪ್ಪು ವೃತ್ತವಿದ್ದು ಅದು ಕನ್ನಡಕದಂತಹ ಭಾವನೆಯನ್ನು ನೋಡುಗರಿಗೆ ನೀಡುತ್ತದೆ. ಇಷ್ಟೇ ಅಲ್ಲದೆ, ಮೇಕೆಯ ಬಾಯಿಯೂ ಮನುಷ್ಯರಂತೆಯೇ ಇದ್ದು ಅದರ ತಲೆಯ ಮೇಲೆ ಸಾಕಷ್ಟು ಬಿಳಿ ಕೂದಲುಗಳಿವೆ. ಮೇಕೆಯ ಈ ವಿಚಿತ್ರ ಆಕಾರದಿಂದಾಗಿ ಸಿರಿಂಜ್‌ನಿಂದಲೇ ಹಾಲು ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋಗಳು ಮತ್ತು ವಿಡಿಯೋಗಳಲ್ಲಿ ಮೇಕೆಯ ಮುಖವು ತುಂಬಾ ವಿಚಿತ್ರವಾಗಿದ್ದು, ಇದನ್ನು ನೋಡುವ ಸಲುವಾಗಿ ಬೇರೆ ಊರುಗಳಿಂದ ಜನರು ಆಗಮಿಸುತ್ತಿದ್ದಾರೆ.
ಮೇಕೆಯ ಮುಖವು ಯಾವುದೋ ಅಸ್ವಸ್ಥತೆಯಿಂದಾಗಿ ಹೀಗಾಗಿದೆ ಎಂದು ಊಹಿಸಲಾಗಿದೆ.ಆದರೆ ಜನರು ಮಾತ್ರ ಇದನ್ನು ಅದ್ಭುತ ಎಂದು ಪರಿಗಣಿಸುತ್ತಿದ್ದಾರೆ. 50,000 ರಲ್ಲಿ ಕೇವಲ ಒಂದು ಪ್ರಾಣಿ ಮಾತ್ರ ಹೀಗೆ ಬಳಲುತ್ತದೆ ಅಲ್ಲದೆ, ಇದು ಸಾಮಾನ್ಯವಾಗಿ ಹಸುಗಳು ಮತ್ತು ಎಮ್ಮೆಗಳಲ್ಲಿ ಕಂಡು ಬರುವ ಸಮಸ್ಯೆಯಾಗಿದ್ದು, ಆದರೆ ಮೇಕೆಗಳಲ್ಲಿ ಅಲ್ಲ ಎನ್ನುವುದು ಪಶು ವೈದ್ಯರೊಬ್ಬರು ತಿಳಿಸಿದ್ದಾರೆ.
ಈ ಸ್ಥಿತಿಯಲ್ಲಿ ಪ್ರಾಣಿಯ ತಲೆ ಊದಿಕೊಳ್ಳುತ್ತದೆ ಎಂದು ವೈದ್ಯರು ಹೇಳಿದ್ದು , ಗರ್ಭಾವಸ್ಥೆಯಲ್ಲಿ ಪ್ರಾಣಿಗಳಲ್ಲಿ ವಿಟಮಿನ್ ಎ ಕೊರತೆ ಅಥವಾ ಗರ್ಭಾವಸ್ಥೆಯಲ್ಲಿ ತಪ್ಪಾದ ಔಷಧಿಗಳನ್ನು ನೀಡಿದರೆ ಇಂತಹ ಸ್ಥಿತಿಗೆ ಕಾರಣವಾಗುತ್ತದೆ. ಈ ಸ್ಥಿತಿಯನ್ನು “ಹೈಡ್ರೋಸೆಫಾಲಸ್” ಎಂದು ಕರೆಯಲಾಗುತ್ತದೆ ಎನ್ನಲಾಗಿದೆ. ಏನೇ ಆಗಲಿ.. ನೋಡುಗರು ಮಾತ್ರ ಈ ಅದ್ಭುತ ನೋಡಲು ಕಾತುರದಿಂದ ಆಗಮಿಸುತ್ತಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿ ಸಂಚಲನ ಮೂಡಿಸಿದೆ.