ಶ್ರದ್ಧಾ ಹತ್ಯೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತೇನೆ : ಆರೋಪಿ ಅಫ್ತಾಬ್ ತಪ್ಪೊಪ್ಪಿಗೆ
ಈಗಾಗಲೇ ಇಡೀ ದೇಶವೇ ಬೆಚ್ಚಿ ಬಿದ್ದ ಫಟನೆಯಾದ ಶ್ರದ್ಧಾ ವಾಲ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲನನ್ನು ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು.
ಹೌದು ಮುಂಬೈ ಮೂಲದ ಯುವತಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ ಕೋರ್ಟ್ ಮುಂದೆ ಮೊದಲ ಬಾರಿ ತಪ್ಪು ಒಪ್ಪಿಕೊಂಡಿರುತ್ತಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅದಲ್ಲದೆ ಪೊಲೀಸ್ ಕಸ್ಟಡಿಯಲ್ಲಿ ವಿಸ್ತರಣೆ ವೇಳೆ ಹತ್ಯೆ ಮಾಡಿರುವುದಾಗಿ ಕೋರ್ಟ್ ನಲ್ಲಿ ಹೇಳಿಕೆ ನೀಡಿರುತ್ತಾನೆ .
ಸದ್ಯ ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾದ ನಂತರ ಸಾಕೇತ್ ಜಿಲ್ಲಾ ನ್ಯಾಯಲಯದ ಮುಂದೆ ಅಫ್ತಾಬ್ ನನ್ನು ಹಾಜರುಪಡಿಸಲಾಗಿತ್ತು. ಆ ಸಂಧರ್ಭ ನ್ಯಾಯಾಧೀಶರ ಮುಂದೆ ತಪ್ಪು ಒಪ್ಪಿಕೊಂಡಿದ್ದು ಅಲ್ಲದೆ ಅಫ್ತಾಬ್ ಜಗಳದ ಆವೇಶದಲ್ಲಿ ಹತ್ಯೆ ಮಾಡಿದ್ದೇನೆ, ಹತ್ಯೆಯ ಮಾಡಿರುವುದಕ್ಕೆ ಪಶ್ಚಾತ್ತಾಪ ಇದೆ ಮತ್ತು ಘಟನೆಯನ್ನು ನೆನಪಿಸಿಕೊಳ್ಳಲು ಬೇಸರ ಇದೆ ಎಂದು ಹೇಳಿಕೊಂಡಿದ್ದಾನೆ.
ಪೊಲೀಸ್ ಮಾಹಿತಿ ಪ್ರಕಾರ ಆರೋಪಿ ತಪ್ಪು ಒಪ್ಪಿದರ ಹಿನ್ನೆಲೆ ಅಫ್ತಾಬ್ ಹೇಳಿಕೆ ಆಧರಿಸಿ ತನಿಖೆ ಮಾಡಬೇಕಿದೆ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ತನಿಖೆ ನಡೆಸಬೇಕಿದೆ. ಈ ಹಿನ್ನಲೆ ಅವಧಿ ವಿಸ್ತರಣೆ ಮಾಡಬೇಕು ಎಂದು ದೆಹಲಿ ಪೊಲೀಸರ ಪರ ವಕೀಲರು ಮನವಿ ಮಾಡಿದರು. ಮನವಿಗೆ ಸ್ಪಂಧಿಸಿದ ಕೋರ್ಟ್ ನಾಲ್ಕು ದಿನಕ್ಕೆ ಕಸ್ಟಡಿಯನ್ನು ವಿಸ್ತರಿಸಿ ಆದೇಶ ನೀಡಿದೆ ಎಂದು ಮಾಹಿತಿ ದೊರೆತಿದೆ.
ಈಗಾಗಲೇ ಪೊಲೀಸರು ಆರೋಪಿ ಅಫ್ತಾಬ್ನ ಮಂಪರು ಪರೀಕ್ಷೆ ಮಾಡಲು ತಯಾರಿ ನಡೆಸುತ್ತಿದ್ದು , ಅದಕ್ಕೂ ಮೊದಲು ಫಾಲಿಗ್ರಾಫ್ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಇಂದು ಅಫ್ತಾಬ್ ಫಾಲಿಗ್ರಾಫ್ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಸದ್ಯ ಫಾಲಿಗ್ರಾಫ್ ಪರೀಕ್ಷೆಯಲ್ಲಿ ಅಫ್ತಾಬ್ ಹೇಳಿರುವ ಸತ್ಯ ಮತ್ತು ಸುಳ್ಳುಗಳನ್ನು ಪರಿಶೀಲಿಸುವ ಪ್ರಯತ್ನವನ್ನು ದೆಹಲಿ ಪೊಲೀಸರು ಮಾಡಲಿದ್ದಾರೆ. ಅಪರಾಧಿಗೆ ತಕ್ಕ ಶಿಕ್ಷೆ ನೀಡಲು ಶತ ಪ್ರಯತ್ನ ನಡೆಯುತ್ತಿದೆ.