ಗಾಳಕ್ಕೆ ಬಿತ್ತು ಬರೋಬ್ಬರಿ 30 ಕೆಜಿ ತೂಕದ ಗೋಲ್ಡ್ ಫಿಶ್ | ವಿಶ್ವ ದಾಖಲೆಯ ಗರಿ ಹೊತ್ತ ಮೀನುಗಾರ!!!

ಮೀನುಗಳನ್ನು ಬೇಟೆಯಾಡುವುದು ಸಹ ಒಂದು ಸಾಹಸವೇ ಸರಿ. ಯಾಕೆಂದರೆ ಮೀನು ಹಿಡಿಯಲು ಸಹ ಕೆಲವೊಂದು ಚಾಕ ಚಕ್ಯತೆ ಗೊತ್ತಿರಲೇ ಬೇಕು. ನಿಜವಾಗಲೂ ಕೆಲವೊಮ್ಮೆ ಮೀನು ಹಿಡಿಯಲು ಹರಸಾಹಸ ಪಡಬೇಕಾಗುತ್ತದೆ.

 

ಆದರೆ ಇಲ್ಲೊಬ್ಬ ವಿಶ್ವದ ಅತಿ ದೊಡ್ಡ ಹಾಗೂ ಅಪರೂಪದ ಗೋಲ್ಡ್ ಫಿಶ್ ಹಿಡಿಯುವ ಮೂಲಕ ಬ್ರಿಟೀಷ್ ಮೀನುಗಾರ ಎಲ್ಲರನ್ನೂ ಬೆರಗುಗೊಳಿಸಿದ್ದಾನೆ .

2019ರಲ್ಲಿ ಅಮೆರಿಕದ ಮಿನೆಸೊಟಾದಲ್ಲಿ ಜಾಸನ್ ಪುಗತೆ ಎಂಬುವರು ಈ ಹಿಂದೆ ವಿಶ್ವದ ಅತಿದೊಡ್ಡ ಗೋಲ್ಡ್ ಫಿಶ್ ಎನಿಸಿಕೊಂಡಿದ್ದ 13.6 ಕೆಜಿ ತೂಕದ ಗೋಲ್ಡ್ ಫಿಶ್ ಸೆರೆಹಿಡಿದಿದ್ದರು.

ಇದೀಗ 42 ವರ್ಷದ ಆ್ಯಂಡೆ ಹ್ಯಾಕೆಟ್ ಎಂಬುವರು 30.5 ಕೆಜಿ ತೂಕದ ಗೋಲ್ಡ್ ಫಿಶ್ ಮೀನನ್ನು ಹಿಡಿದಿದ್ದಾರೆ. ಅದಲ್ಲದೆ ಕಿತ್ತಳೆ ಬಣ್ಣದ ಈ ದೈತ್ಯ ಮೀನಿಗೆ ಕ್ಯಾರೆಟ್ ಎಂಬ ಅಡ್ಡ ಹೆಸರಿದೆ.

ವಿಶ್ವದ ಪ್ರಮುಖ ಕಾರ್ಪ್ ಮೀನುಗಾರಿಕೆಗಳಲ್ಲಿ ಒಂದಾದ ಫ್ರಾನ್ಸ್‌ನ ಶಾಂಪೇನ್‌ನಲ್ಲಿರುವ ಬ್ಲೂವಾಟರ್ ಲೇಕ್ಸ್‌ನಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಈ ಮೀನು ಬಲೆಗೆ ಸಿಕ್ಕಿದೆ.

ಸದ್ಯ ಈ ಗೋಲ್ಡ್ ಫಿಶ್ ಮೀನು ಚರ್ಮದ ಕಾರ್ಪ್ ಮತ್ತು ಕೋಯಿ ಕಾರ್ಪ್‌ನ ಗ್ರೂಪ್ ಹೈಬ್ರಿಡ್ ಜಾತಿಯ ಮೀನಾಗಿದೆ. ಈ ಕ್ಯಾರೆಟ್ ಮೀನು ಇರುವುದು ನನಗೆ ಯಾವಾಗಲೂ ತಿಳಿದಿತ್ತು ಆ ನಾನು ಅದನ್ನು ಹಿಡಿಯುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ ಎಂದು ಹ್ಯಾಕೆಟ್ ತನ್ನ ಮೀನುಗಾರಿಕೆ ವಿಜಯದ ಸಂತಸವನ್ನು ಹಂಚಿಕೊಂಡಿದ್ದಾರೆ.

ಮೀನನ್ನು ಬೆನ್ನಟ್ಟಿ ಹಿಡಿಯಲು ಹ್ಯಾಕೆಟ್‌ಗೆ ಸುಮಾರು 25 ನಿಮಿಷ ಸಮಯ ತೆಗೆದುಕೊಂಡಿತಂತೆ. ಗಾಳಕ್ಕೆ ಸಿಲುಕಿ, ಅದರ ಸಮೇತವೇ ಮೇಲಕ್ಕೆ ಮತ್ತು ಕೆಳಕ್ಕೆ ಹೋದಾಗ ಅದು ದೊಡ್ಡ ಮೀನು ಎಂದು ನನಗೆ ತಿಳಿದಿತ್ತು. ಸ್ವಲ್ಪ ಸಮಯದ ಬಳಿಕ ಅದು ಮೇಲಕ್ಕೆ ಬಂದಿತು. ಕಿತ್ತಳೆ ಬಣ್ಣದ್ದಾಗಿರುವುದನ್ನು ನಾನು ನೋಡಿದೆ. ಅದು ಅದ್ಭುತವಾಗಿದೆ ಮತ್ತು ಅದು ಸಿಕ್ಕಿರುವುದು ನನ್ನ ಅದೃಷ್ಟವೇ ಸರಿ ಎಂದು ಹ್ಯಾಕೆಟ್ ತಿಳಿಸಿದ್ದಾರೆ.

ಮೀನಿನೊಂದಿಗೆ ಛಾಯಾಚಿತ್ರಗಳಿಗೆ ಪೋಸ್ ನೀಡಿದ ನಂತರ ಹ್ಯಾಕೆಟ್ ಅದನ್ನು ಸರೋವರದಲ್ಲಿ ಸುರಕ್ಷಿತವಾಗಿ ಬಿಡುಗಡೆ ಮಾಡಿದರು ಮತ್ತು ನಂತರ ಒಂದು ಕಪ್ ಚಹಾದೊಂದಿಗೆ ಅದನ್ನು ಆಚರಿಸಿದ್ದಾರೆ.

ಸದ್ಯ ಗೋಲ್ಡ್ ಫಿಶ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋ ನೋಡಿದ ಅನೆ ಗ್ರೂಪ್ ನೆಟ್ಟಿಗರು ಮೀನುಗಾರನಿಗೆ ಅಭಿನಂದನೆಗಳ ಸಾಗರ ಹರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮೀನಿನ ಬಣ್ಣ ಮತ್ತು ಆಕಾರ ನೋಡಿ ಬೆರಗಾಗಿದ್ದಾರೆ ಅಲ್ಲದೆ ವೀಕ್ಷಕರು ನಗು ಮುಖದ ಸಂತೋಷ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.