BBK9 : ದೊಡ್ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ!!! ಯಾರು ? ಇಲ್ಲಿದೆ ಉತ್ತರ!

ಬಿಗ್ ಬಾಸ್ ಮನೆಯಲ್ಲಿ ವಾರಕ್ಕೊಂದು ಹೊಸ ಟ್ವಿಸ್ಟ್ ನಡೆಯುತ್ತಿದ್ದು, ಬಿಗ್ ಬಾಸ್ (Bigg Boss) ಇದೀಗ 60 ದಿನಗಳನ್ನ ಪೂರೈಸಿ,ಅಭಿಮಾನಿಗಳಿಗೆ ಮನರಂಜನೆಯ ರಸದೌತಣವನ್ನು ನೀಡುತ್ತಿದೆ.

 

ಬಿಗ್ ಬಾಸ್ ಮನೆಯ ಆಟಗಳನ್ನು ನೋಡುತ್ತಿದ್ದ ಅಭಿಮಾನಿಗಳಿಗೆ ಶಾಕ್ ನೀಡುವ ರೀತಿಯಲ್ಲಿ ಇತ್ತೀಚೆಗಷ್ಟೇ ದೊಡ್ಮನೆಯ ಏಳನೇ ಸ್ಪರ್ಧಿಯಾಗಿ ದೀಪಿಕಾ ದಾಸ್ ಔಟ್ ಆಗಿದ್ದಾರೆ. ಉಳಿದವರಿಗೆ ಒಳ್ಳೆಯ ಪ್ರತಿ ಸ್ಪರ್ಧಿಯಾಗಿದ್ದ ದೀಪಿಕಾ ದೊಡ್ಮನೆ ಆಟ ಮುಗಿಸಿ ಹೊರಟದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದಂತು ಸುಳ್ಳಲ್ಲ!!!.

ದೊಡ್ಮನೆ ಆಟದಲ್ಲಿ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪಿಕ್ಚರ್ ಅಭಿ ಬಾಕಿ ಹೇ ಎಂಬಂತೆ ಮತ್ತೆ ದೀಪಿಕಾ ದಾಸ್ (Deepika Das) ಅವರ ರೀ ಎಂಟ್ರಿಯಾಗಿದ್ದು, ದೊಡ್ಮನೆಯ ಆಟದಲ್ಲಿ ಇದೀಗ ದೊಡ್ಡ ಟ್ವಿಸ್ಟ್ ದೊರೆತಿದೆ.ಬಿಗ್ ಮನೆಯಲ್ಲಿ ಪ್ರತಿ ಸೀಸನ್‌ನಲ್ಲೂ ಅರ್ಧ ಆಟ ಆಗುತ್ತಿದ್ದಂತೆ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಯನ್ನು ಕಳುಹಿಸಲಾಗುತ್ತದೆ.

ಹಾಗಾಗಿ ಸಾನ್ಯ ಅಯ್ಯರ್, ಸೋನು, ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬರಬಹುದು ಎಂದು ಊಹಿಸಲಾಗಿತ್ತು. ಕಹಾನಿ ಮೇ ಟ್ವಿಸ್ಟ್ ಎನ್ನುವಂತೆ, ಇದೀಗ ದೀಪಿಕಾ ದಾಸ್ ಅವರೇ ರೀ (Wild Card Entry)ಎಂಟ್ರಿ ಕೊಟ್ಟಿದ್ದಾರೆ ಎಂದು ಇದೀಗ ವಾಹಿನಿಯಲ್ಲಿ ಕಾಡಿನ ಟಾಸ್ಕ್ ಕುರಿತು ಒಂದು ಪ್ರೋಮೋ ಮೂಲಕ ತಿಳಿದು ಬಂದಿದೆ.

ಈ ಪ್ರೋಮೋದಲ್ಲಿ ರೀ ಎಂಟ್ರಿಯ ಬಗ್ಗೆ ಸೂಚನೆ ಕೊಡಲಾಗಿದ್ದು, ಅದು ದೀಪಿಕಾ ದಾಸ್ ಅವರೇ ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ. ಎಲಿಮಿನೇಟ್ ಆದ ಮೇಲೆ ದೀಪಿಕಾ ದಾಸ್ ಅವರು ಮನೆಗೂ ಕೂಡ ಬಂದಿಲ್ಲ ಜೊತೆಗೆ ಹೊರಗೆಲ್ಲೂ ಕಾಣಿಸಿಕೊಂಡಿಲ್ಲ. ಹಾಗಾಗಿ ದೀಪಿಕಾ ಅವರೇ ರೀ ಎಂಟ್ರಿ ಕೊಟ್ಟಿರಬಹುದು ಎಂದು ಹೇಳಲಾಗುತ್ತಿದೆ.

ಒಂದು ವೇಳೆ ದೀಪಿಕಾ ಅವರಿಗೆ ರೀ ಎಂಟ್ರಿ ಕೊಟ್ಟಿದಲ್ಲಿ ಆಟದಲ್ಲಿ ಮತ್ತಷ್ಟು ಮನರಂಜನೆ ಪಕ್ಕಾ ಎನ್ನುವುದು ದೀಪಿಕಾ ದಾಸ್ ಅಭಿಮಾನಿಗಳ ಅಭಿಮತ. ದೀಪಿಕಾ ಎಲಿಮಿನೇಟ್ ಆದ ಸುದ್ದಿ ಕೇಳಿ ಶಾಕ್ ಆಗಿದ್ದ ಫ್ಯಾನ್ಸ್‌ಗೆ ಈ ಸುದ್ದಿ ಕೇಳಿ ಫುಲ್ ದಿಲ್ ಖುಷ್ ಆಗಿದ್ದು, ದೊಡ್ಮನೆ ಆಟದ ಮನರಂಜನೆಗೆ ಕಾತುರದಿಂದ ಎದುರು ನೋಡುತ್ತಿದ್ದಾರೆ.

Leave A Reply

Your email address will not be published.