Flipkart Apple Days: ಆ್ಯಪಲ್ ಫೋನ್ ಭಾರೀ ಅಗ್ಗದ ಬೆಲೆಯಲ್ಲಿ | ಈ ಚಾನ್ಸ್ ಮಿಸ್ ಮಾಡ್ಕೊಂಡರೆ ಮತ್ತೆ ಸಿಗಲ್ಲ!

ಇತ್ತೀಚೆಗೆ ಮೊಬೈಲ್ ಕಂಪನಿಗಳು ಗ್ರಾಹಕರಿಗೆ ಬೇಕಾದ ಹಾಗೆ ಅತಿಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ ಗಳನ್ನು ಮಾರಾಟ ಮಾಡುತ್ತಿದೆ. ಹಾಗೆಯೇ ಇದೀಗ ಫ್ಲಿಪ್​ಕಾರ್ಟ್ ಭರ್ಜರಿ ಆಫರೊಂದನ್ನು ನೀಡಿದೆ. ಫ್ಲಿಪ್​ಕಾರ್ಟ್​​ನಲ್ಲಿ ಆ್ಯಪಲ್ ಡೇಸ್ ಆರಂಭವಾಗಿದ್ದು, ಐಫೋನ್​ಗಳ ಬೆಲೆ ರಿಯಾಯಿತಿಯೊಂದಿಗೆ ಮಾರಾಟ ಮಾಡುತ್ತಿದ್ದಾರೆ. ಇನ್ನು ಆ ಸ್ಮಾರ್ಟ್ಫೋನ್ ಗಳು ಯಾವುದೆಂದರೆ, ಐಫೋನ್ 13, ಐಫೋನ್ 12 ಮಿನಿ ಮತ್ತು ಐಫೋನ್ 11 ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.

 

ಇನ್ನೂ ಈ ಐಫೋನ್ಗಳ ಬೆಲೆ ಎಷ್ಟು? ಅದರ ವಿಶೇಷತೆ ಏನು? ಹಾಗೂ ಫೀಚರ್ಸ್ ಗಳು ಸೇರಿದಂತೆ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಿಗಲಿರುವ ಐಫೋನ್ಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ.

ಐಫೋನ್ 13: ಸೆಪ್ಟೆಂಬರ್‌ನಲ್ಲಿ ಐಫೋನ್ 14 ಬಿಡುಗಡೆಯ ಮೊದಲೇ ಐಫೋನ್ 13 ನ ಬೆಲೆಯನ್ನು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಎರಡರಲ್ಲೂ 69,999 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಇನ್ನೂ ಇದರ ಮೂಲ ಬೆಲೆ ಸುಮಾರು 79,000 ರೂಪಾಯಿ ಆಗಿದೆ. ಆದರೆ ಫ್ಲಿಪ್​ಕಾರ್ಟ್ ಆಫರ್ ನಿಂದಾಗಿ ಈ ಸ್ಮಾರ್ಟ್​ಫೋನ್ ಅನ್ನು ಸುಮಾರು 64,999 ರೂಪಾಯಿಗೆ ಖರೀದಿಸಬಹುದಾಗಿದೆ.

ಇದಿಷ್ಟೇ ಅಲ್ಲದೆ, ಈ ಸ್ಮಾರ್ಟ್​​ಫೋನ್ ಅನ್ನು ಬ್ಯಾಂಕ್​ಗಳ ಮೂಲಕ ಖರೀದಿಸುವ ಯೋಚನೆ ಇದ್ದರೆ, ಫೆಡರಲ್ ಬ್ಯಾಂಕ್‌ನ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳಿಂದ ವಹಿವಾಟುಗಳ ಮೇಲೆ ಶೇಕಡಾ 10% ರಿಯಾಯಿತಿ ಕೂಡ ಇದೆ.

ಐಫೋನ್ 12 ಮಿನಿ: ಇನ್ನು ಈ ಸ್ಮಾರ್ಟ್​ಫೋನ್ ಬಗ್ಗೆ ಹೇಳಬೇಕಾದರೆ, ಇದರ ಮೂಲ ಬೆಲೆ 69,900 ರೂಪಾಯಿ ಆಗಿದೆ. ಆದರೆ ಗ್ರಾಹಕರು ಈ ಸ್ಮಾರ್ಟ್ಫೋನ್ ಅನ್ನು 38,999 ರೂಪಾಯಿಗೆ ಖರೀದಿಸಬಹುದಾಗಿದೆ. ಅಷ್ಟೇ ಅಲ್ಲದೆ, ಇಎಮ್​​ಐನಲ್ಲಿ ಖರೀದಿಸುವುದಾದರೆ ತಿಂಗಳಿಗೆ 6,666 ರೂಪಾಯಿಯಂತೆ ಪಾವತಿಸಬೇಕು. ಇನ್ನು ಈ ಸ್ಮಾರ್ಟ್ಫೋನ್ ಇದೀಗ ಬಹಳ ಬೇಡಿಕೆಯಲ್ಲಿದೆ‌.

ಐಫೋನ್ 11: ಈ ಸ್ಮಾರ್ಟ್ಫೋನ್ ಅನ್ನು ಸೆಪ್ಟೆಂಬರ್ 2019 ರಲ್ಲಿ ಬಿಡುಗಡೆ ಮಾಡಲಾಗಿದೆ. ಸದ್ಯ ಇದರ ಬೆಲೆ 64,900 ರೂಪಾಯಿ ಆಗಿದ್ದು, ಆ್ಯಪಲ್ ಡೇಸ್ ಮೂಲಕ ನೀವು ಈ ಸ್ಮಾರ್ಟ್ಫೋನ್ ಅನ್ನು 39,999 ರೂಪಾಯಿಗೆ ಪಡೆಯಬಹುದಾಗಿದೆ.

ಈ ಮೇಲಿನ ಎಲ್ಲಾ ಆಫರ್​ಗಳನ್ನು ಹೊರತುಪಡಿಸಿ ನಿಮ್ಮ ಅಸ್ತಿತ್ವದಲ್ಲಿರುವ ಸ್ಮಾರ್ಟ್‌ಫೋನ್ ಅನ್ನು ಇನ್ನೊಂದು ಐಫೋನ್‌ ನೀ ಜೊತೆಗೆ ವಿನಿಮಯ ಮಾಡಿಕೊಳ್ಳುವ ಮೂಲಕ ನೀವು ಸುಮಾರು 17,500 ರೂಪಾಯಿವರೆಗೆ ಉಳಿಸಬಹುದು. ವಿನಿಮಯ ಕೊಡುಗೆಯು ಆಫರ್‌ ಎಲ್ಲಾ ಸಾಧನಗಳಿಗೆ ಅನ್ವಯಿಸುತ್ತದೆ. ಇನ್ನು ಈ ಆಫರ್​ಗಳು ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್​ನಲ್ಲಿ ಕೆಲವೇ ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ. ಹಾಗಾಗಿ ಈ ಕೂಡಲೇ ಈ ಮೇಲಿನ ಸ್ಮಾರ್ಟ್ಫೋನ್ ಗಳನ್ನು ಖರೀದಿಸಿ ನಿಮ್ಮದಾಗಿಸಿಕೊಳ್ಳಿ

Leave A Reply

Your email address will not be published.