ಶ್ರದ್ಧಾ ವಾಕರ್ ಹತ್ಯೆ ಬೆನ್ನಲ್ಲೇ ಲಿವ್-ಇನ್ನಲ್ಲಿರೋ ಜೋಡಿಗಳಿಗೆ ಬಂದಿದೆ ಹೊಸ ಸಂಕಷ್ಟ !?
ಇಡೀ ದೇಶವನ್ನೇ ಒಂದು ಬಾರಿ ದಂಗಾಗಿಸಿದ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣವು ಇದೀಗ ಹೊಸ ರೂಪ ಪಡೆದುಕೊಂಡಿದೆ. ಶ್ರದ್ಧಾ ವಾಲ್ಕರ್ ಹತ್ಯೆ ಬೆನ್ನಲ್ಲೇ ಲಿವ್-ಇನ್ನಲ್ಲಿರೋ ಜೋಡಿಗಳಿಗೆ ಹೊಸ ಸಂಕಷ್ಟ ಎದುರಾಗಿದೆ.
ತನ್ನ ಪ್ರೇಯಸಿ ಶ್ರದ್ಧಾಳನ್ನು ಹತ್ಯೆಗೈದು, ಶವವನ್ನು 35 ಭಾಗಗಳಾಗಿ ಪೀಸ್ ಮಾಡಿ, ಪ್ರಿಡ್ಜ್‌ನಲ್ಲಿ ಇಟ್ಟು, ನಂತರ ದೆಹಲಿಯ ಹಲವೆಡೆ ಅವುಗಳನ್ನು ಎಸೆದಿದ್ದ ಕ್ರೂರಿ ಅಫ್ತಾಬ್‌ನನ್ನು ಬಂಧಿಸಿ ಈಗಾಗಲೇ ವಿಚಾರಣೆ ನಡೆಸಲಾಗುತ್ತಿದೆ. ತನಿಖೆ ವೇಳೆ ಆಘಾತಕಾರಿ ಹೊಸ ಹೊಸ ವಿಷಯವನ್ನು ಆರೋಪಿ ಬಿಚ್ಚಿಡುತ್ತಿದ್ದಾನೆ.
ಆದರೆ ಇಡೀ ದೇಶವನ್ನೇ ಬೆರಗುಗೊಳಿಸಿದ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣವು ಇದೀಗ ಮತ್ತೊಂದು ಆಯಾಮ ಪಡೆದುಕೊಂಡಿದೆ. ಈಗ ಲಿವಿಂಗ್ ಟುಗೆದರ್‌ನಲ್ಲಿರುವ ಯುವಕ-ಯುವತಿಯರ ಮೇಲೆ ಅನುಮಾನ ಪಡುವಂತಾಗಿದೆ. ಸ್ನೇಹಿತರು ಮತ್ತು ದೀರ್ಘಾವಧಿಯ ಲಿವ್-ಇನ್ ಪಾಲುದಾರರ ನಡುವೆ ಅನುಮೋದಿತವಲ್ಲದ ಪ್ರೀತಿಯನ್ನು ಅನುಮಾನಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಗುರ್ಗಾಂವ್ ಮೂಲದ ನಿಕಿತಾ, (29) ಕಳೆದ ಏಳು ವರ್ಷಗಳಿಂದ ತನ್ನ ಸಂಗಾತಿಯೊಂದಿಗೆ ವಾಸಿಸುತ್ತಿದ್ದಾರೆ. ಹಲವರು ಅವರು ವಿವಾಹಿತರು ಎಂದುಕೊಂಡಿದ್ದಾರೆ , ಹಾಗಾಗಿ ಅವರಿಗೆ ಈ ಹಿಂದೆ ಹೆಚ್ಚಿನ ತೊಂದರೆಗಳೇನು ಎದುರಾಗಿರಲಿಲ್ಲ. ಆದರೆ ಅಫ್ತಾಬ್ ಪೂನಾವಾಲಾ ಶ್ರದ್ಧಾ ವಾಲ್ಕರ್‌ಳನ್ನು ಕೊಲೆಯ ಹಿನ್ನೆಲೆ ಇವರ ಮೇಲೆ ಅನುಮಾನಗಳು, ಗೊಣಗಾಟ ಶುರುವಾಗಿದೆಯಂತೆ.
ಅಷ್ಟೇ ಅಲ್ಲದೆ, ಇಂತಹ ಪ್ರಕರಣಗಳು ಸಂಭವಿಸಿದಾಗ ರಿಲೇಶನ್‌ಶಿಫ್‌ನಲ್ಲಿರುವವರ ಮೇಲೆ ಹೆಚ್ಚಿನ ಅನುಮಾನಗಳು ಹುಟ್ಟಿಕೊಳ್ಳುವುದು ಸಹಜವಾದದ್ದೇ. ಹಾಗೆಯೇ ಇಂತಹ ಜೋಡಿಗಳಿಗೆ ಮನೆ ಬಾಡಿಗೆ ಕೊಡಲು ಮಾಲಿಕರು ಹಿಂದೇಟು ಹಾಕುತ್ತಿದ್ದಾರೆ. ಮಾಲೀಕರು ಮದುವೆಯ ಪ್ರಮಾಣಪತ್ರವನ್ನು ಹೊಂದಿರದ ಬಾಡಿಗೆದಾರರಿಗೆ ಮನೆ ನೀಡಲು ಕೊಂಚ ಯೋಚಿಸುತ್ತಾರೆ.
ಇನ್ನು ಭಾರತೀಯ ನ್ಯಾಯಾಂಗವು ಸಹ ಲಿವ್-ಇನ್ ಸಂಬಂಧಗಳ ಬಗ್ಗೆ ಯಾವುದೇ ನಿಲುವನ್ನು ಹೊಂದಿಲ್ಲ. ಅಂತಹ ದಂಪತಿಗಳ ಹಕ್ಕುಗಳನ್ನು ರಕ್ಷಿಸುವ ಯಾವುದೇ ರೀತಿಯ ಕಾನೂನುಗಳಿಲ್ಲ. ಆದರೆ ಪ್ರಗತಿಪರ ವ್ಯಾಖ್ಯಾನಗಳು ಮತ್ತು ಅಸ್ತಿತ್ವದಲ್ಲಿರುವ ಶಾಸನದ ತಿದ್ದುಪಡಿ ಇಂದಾಗಿ ಅವರು ಒಟ್ಟಿಗೆ ವಾಸಿಸುವ ಕಾನೂನುಬದ್ಧ ಹಕ್ಕನ್ನು ಹೊಂದಿದ್ದಾರೆ. ನ್ಯಾಯಾಧೀಶರು ಸಂಬಂಧಗಳನ್ನು ನೈತಿಕವಾಗಿ ಅಸಮರ್ಥನೀಯ ಎಂದು ಕರೆದಿದ್ದಾರೆ, ಮತ್ತು ಸಾಂಸ್ಕೃತಿಕವಾಗಿ ಸ್ವೀಕಾರ ಅರ್ಹವಲ್ಲ ಎನ್ನುತ್ತಾರೆ.