ಪಾನ್ ಗೆ ಆಧಾರ್ ಲಿಂಕ್ ಮಾಡದೇ ಇರೋರಿಗೆ ಕೇಂದ್ರೀಯ ಮಂಡಳಿಯಿಂದ ಮಹತ್ವದ ಮಾಹಿತಿ!
ಪಾನ್ ಕಾರ್ಡ್ ಪ್ರತಿಯೊಂದು ಕೆಲಸಕ್ಕೂ ಮುಖ್ಯವಾದ ದಾಖಲೆಯಾಗಿದೆ. ಈ ಮೊದಲೇ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಎಂಬ ಆದೇಶವನ್ನು ಹೊರಡಿಸಲಾಗಿದ್ದು, ಈವರೆಗೂ ಲಿಂಕ್ ಮಾಡದವರಿಗೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಮಹತ್ವದ ಮಾಹಿತಿಯೊಂದನ್ನು ನೀಡಿದೆ.
ಹೌದು. ಪಾನ್ ಕಾರ್ಡ್ ಹೊಂದಿರುವವರು ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ, ಮಾರ್ಚ್ 2023 ರ ನಂತರ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ನಿಷ್ಕ್ರಿಯವಾಗುತ್ತದೆ ಎಂದು ಸಿಬಿಡಿಟಿ ತಿಳಿಸಿದೆ.
ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡುವ ಗಡುವನ್ನು ಆದಾಯ ತೆರಿಗೆ ಇಲಾಖೆ ಹಲವಾರು ಬಾರಿ ವಿಸ್ತರಿಸಿದ್ದು, ನಿರ್ಣಾಯಕ ದಾಖಲೆಗಳನ್ನು ಲಿಂಕ್ ಮಾಡಲು ಪ್ರಸ್ತುತ ಕೊನೆಯ ದಿನಾಂಕ ಮಾರ್ಚ್ 31, 2022 ಆಗಿತ್ತು. 2017 ರ ಜುಲೈ 1 ರವರೆಗೆ ಪ್ಯಾನ್ ಕಾರ್ಡ್ ಹಂಚಿಕೆ ಮಾಡಲಾದ ಮತ್ತು ಆಧಾರ್ ಸಂಖ್ಯೆಯನ್ನು ಪಡೆಯಲು ಅರ್ಹರಾಗಿರುವ ವ್ಯಕ್ತಿಗಳು ತಮ್ಮ ಆಧಾರ್ ಅನ್ನು 2022 ರ ಮಾರ್ಚ್ 31 ರಂದು ಅಥವಾ ಅದಕ್ಕೂ ಮೊದಲು ನಿಗದಿತ ಪ್ರಾಧಿಕಾರಕ್ಕೆ ತಿಳಿಸಬೇಕು ಎಂದು ಸಿಬಿಡಿಟಿ ಹೇಳಿದೆ.
ಹಾಗೆ ಮಾಡಲು ವಿಫಲವಾದರೆ, ಅವನ ಪ್ಯಾನ್ ನಿಷ್ಕ್ರಿಯವಾಗುತ್ತದೆ ಮತ್ತು ಪ್ಯಾನ್ ಅಗತ್ಯವಿರುವ ಎಲ್ಲಾ ಕಾರ್ಯವಿಧಾನಗಳನ್ನು ನಿಲ್ಲಿಸಲಾಗುತ್ತದೆ. ನಿಗದಿತ ಶುಲ್ಕವನ್ನು ಪಾವತಿಸಿದ ನಂತರ ನಿಗದಿತ ಪ್ರಾಧಿಕಾರಕ್ಕೆ ಆಧಾರ್ ಮಾಹಿತಿ ನೀಡಿದ ನಂತರ ಪ್ಯಾನ್ ಅನ್ನು ಮತ್ತೆ ಕಾರ್ಯರೂಪಕ್ಕೆ ತರಬಹುದು ಎಂದು ಇಲಾಖೆ ತಿಳಿಸಿದೆ. ಅದರಂತೆ, ಈವರೆಗೂ ಆಧಾರ್ ಲಿಂಕ್ ಮಾಡದೇ ಇರೋರ ಖಾತೆ ಸಂಖ್ಯೆ ನಿಶ್ಕ್ರಿಯವಾಗಲಿದೆ.