Oukitel WP21 Smartphone : ಸೂಪರ್ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ ಕಂಪನಿ | ಬೆಲೆ ಫೀಚರ್ಸ್ ಬಗ್ಗೆ ಕಂಪ್ಲೀಟ್ ವಿವರ ಇಲ್ಲಿದೆ!
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಎಂಬ ಮಾಯವಿ ಎಲ್ಲರನ್ನೂ ಸೆಳೆದು ತನ್ನೊಳಗೆ ಸೇರಿಸಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರಿಗು ಮೊಬೈಲ್ ಬೇಕೇ ಬೇಕು. ಮಾರುಕಟ್ಟೆಯಲ್ಲಿ ಒಂದೊಂದು ಮಾದರಿಯ ನವೀಕರಿಸಿದ ವಿನೂತನ ಆವೃತ್ತಿಯನ್ನೊಳಗೊಂಡ ಸ್ಮಾರ್ಟ್‌ಫೋನ್‌ಗಳು ಕಾಲಕಾಲಕ್ಕೆ
ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ. ಸ್ಮಾರ್ಟ್‌ಫೋನ್‌ನ ವಿನ್ಯಾಸ ಮತ್ತು ವೈಶಿಷ್ಟ್ಯಗಳಿಂದಾಗಿ, ಕೆಲವು ಫೋನ್‌ಗಳು ಪ್ರತಿಯೊಬ್ಬರ ಮನಸ್ಸಿನಲ್ಲಿ ಉಳಿಯುತ್ತವೆ. ಇದೀಗ ಈ ಸ್ಮಾರ್ಟ್‌ಫೋನ್‌ಗಳ ಸಾಲಿಗೆ Oukitel WP21 ಎಂಬ ಮೊಬೈಲ್ ಸೇರಿದೆ.
Oukitel ಕಂಪನಿಯು ಬಿಡುಗಡೆ ಮಾಡಿದ ಈ ಹೊಸ ಫೋನ್ Oukitel WP21 ಅದ್ಭುತ ವೈಶಿಷ್ಟ್ಯಗಳಿಂದ ಕೂಡಿದ್ದೂ, ಇದರ ವಿನ್ಯಾಸವೂ ಚೆನ್ನಾಗಿದೆ. ಶಕ್ತಿಶಾಲಿ ಸ್ಮಾರ್ಟ್‌ಫೋನ್ ಆಗಿದ್ದು, ಇದು ದೊಡ್ಡ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಕಡಿಮೆ ಬೆಲೆಗೆ ಖರೀದಿಸಲು ಬಯಸುವವರಿಗೆ ಸೂಕ್ತವಾದ ಸ್ಮಾರ್ಟ್ ಫೋನ್ ಇದಾಗಿದೆ.
ಈ ಫೋನ್ 64 ಎಂಪಿ ಕ್ಯಾಮೆರಾ, 20 ಎಂಪಿ ನೈಟ್ ವಿಷನ್ ಕ್ಯಾಮೆರಾ ಮತ್ತು 2 ಎಂಪಿ ಮೈಕ್ರೋ ಸೆನ್ಸಾರ್‌ನಂತಹ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ.ಈ ಫೋನ್ IP68 ವಾಟರ್ ಪ್ರೂಫ್ ಮತ್ತು IP69k ಧೂಳಿನ ನಿರೋಧಕ ರೇಟಿಂಗ್ ಅನ್ನು ಒಳಗೊಂಡಿದೆ. ಇತರೆ ಫೋನ್ ಗಳಲ್ಲಿ 5000 ರಿಂದ 7000 mAh ಬ್ಯಾಟರಿ ಸಾಮರ್ಥ್ಯವನ್ನು ನಾವು ಗಮನಿಸಬಹುದು. ಆದರೆ ಈ ಫೋನಿನ ಬ್ಯಾಟರಿ ಸಾಮರ್ಥ್ಯ 9800 mAh ಆಗಿದೆ.
ಇದು 120 Hz ಪೂರ್ಣ HD ಪ್ಲಸ್ ಡಿಸ್ಟ್ ಹೊಂದಿದೆ, ಮ್ಯೂಸಿಕ್ ಆನ್ ಮತ್ತು ಆಫ್ ಮಾಡುವ ನಿಯಂತ್ರಣಗಳಿವೆ. ನೀವು ಈ ಸ್ಮಾರ್ಟ್‌ಫೋನ್ ಅನ್ನು ಗಡಿಯಾರವಾಗಿಯೂ ಬದಲಾಯಿಸಬಹುದು. ವಿವಿಧ ವಾಚ್ ಫೇಸ್‌ಗಳು ಕೂಡ ಇದರಲ್ಲಿ ಲಭ್ಯವಿದೆ. ಕಂಪನಿಯು ಇದರಲ್ಲಿ Helio G99 ಚಿಪ್ ಸೆಟ್ ಅಳವಡಿಸಿದ್ದೂ, ಇದು 6nm ಪ್ರೊಸೆಸರ್ ಆಗಿದೆ. ಈ ಸ್ಮಾರ್ಟ್‌ಫೋನ್ 12 GB RAM ಅನ್ನು ಸಹ ಹೊಂದಿದೆ. ಇದು 256 GB ಮೆಮೊರಿಯನ್ನು ಮತ್ತು ಮೈಕ್ರೋ SD ಕಾರ್ಡ್ ಅನ್ನು ಬೆಂಬಲಿಸುತ್ತದೆ. 66 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ವಿನ್ಯಾಸ ಮತ್ತು ವೈಶಿಷ್ಟ್ಯಗಳಿಂದಾಗಿ ಕೂಡಿದ ಈ ಫೋನಿನ ಆರಂಭಿಕ ಬೆಲೆಯು 280 ಡಾಲರ್. ಅಂದರೆ ಭಾರತದ ಕರೆನ್ಸಿಯಲ್ಲಿ 22,800 ರೂ. ಈ ಸ್ಮಾರ್ಟ್ ಫೋನ್ ನವೆಂಬರ್ 24 ರಿಂದ ಮಾರಾಟವಾಗಲಿದ್ದೂ, ಚೀನಾದ ಮಾರುಕಟ್ಟೆಯಲ್ಲಿ ಲಭ್ಯವಿದೆ.