ಈ ಯುವಕನ ದೊಡ್ಡ ಫ್ಯಾನ್ ಕೊಹ್ಲಿ | ಈ ಹುಡುಗ ಯಾರು ? ವಿರಾಟ್ ಆತನನ್ನು ಫಾಲೋ ಮಾಡಲು ಕಾರಣವೇನು ಗೊತ್ತಾ?

ಭಾರತ ತಂಡದ ಎದುರಾಳಿಗಳ ಬೆವರಿಳಿಸುವ ಆಟಗಾರದ ಆಟದ ವೈಖರಿಯೇ ಒಂದು ಜಾದು.. ಅಷ್ಟೇ ಅಲ್ಲ ಕೊಹ್ಲಿ ಗೆ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ಅಭಿಮಾನಿಗಳಿದ್ದಾರೆ. ಹೌದು.. ಕಿಂಗ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ, 20 ಕೋಟಿಗೂ ಅಧಿಕ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಆದರೆ, ಕೊಹ್ಲಿ ಮಾತ್ರ ಕೇವಲ 262 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ.ಇದರಲ್ಲಿ ಕೂಡ ಒಂದು ವಿಶೇಷವಿದೆ.

 

ಏನಪ್ಪಾ ಅದು ಯೋಚಿಸುತ್ತಿದ್ದೀರಾ??ತಾನು ಫಾಲೋ ಮಾಡುವವರಲ್ಲಿ 19 ವರ್ಷದ ಹುಡುಗನೊಬ್ಬ, ಕೊಹ್ಲಿಗೆ ಸಿಕ್ಕಾಪಟ್ಟೆ ಇಷ್ಟವಂತೆ !! ಅರೇ..ಹಾಗಾದ್ರೆ ಕ್ರಿಕೆಟ್ ಮಾಂತ್ರಿಕನನ್ನೆ ಮೆಚ್ಚಿಸಿದ ಆ ಹುಡುಗ ಯಾರು.? ಕೊಹ್ಲಿ ಆತನನ್ನು ಫಾಲೋ ಮಾಡುತ್ತಾ ಇರುವುದಾದರೂ ಯಾಕೆ ಎಂಬ ಕುತೂಹಲಕಾರಿ ಸಂಗತಿ ನಾವು ಹೇಳ್ತೀವಿ ಕೇಳಿ!!

ಟೀಮ್ ಇಂಡಿಯಾ ಮಾಜಿ ನಾಯಕ, ರನ್ ಮಷಿನ್ ಎಂದೇ ಪ್ರಖ್ಯಾತಿ ಪಡೆದ ವಿರಾಟ್ ಕೊಹ್ಲಿ, ಕ್ರಿಕೆಟ್ ಅಡ್ಡಾ ದಲ್ಲಿ ಮಾತ್ರ ಕಿಂಗ್ ಆಗಿ ಉಳಿದಿಲ್ಲ ಇದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ತನ್ನ ಹವಾ ಮೆಂಟೇನ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಅದರಲ್ಲೂ ಟ್ವಿಟ್ಟರ್, ಇನ್ ಸ್ಟಾಗ್ರಾಮ್, ಫೇಸ್‌ಬುಕ್ ಸೇರಿ, ಕೊಹ್ಲಿ ಫಾಲೋವರ್ಸ್ ಎಷ್ಟಿದ್ದಾರೆ ಗೊತ್ತಾ?? ಬರೋಬ್ಬರಿ 31 ಕೋಟಿ ಕೊಹ್ಲಿಗಿರೋವಷ್ಟು ಫಾಲೋವರ್ಸ್ ಬಹುಶಃ ಬೇರಾವ ಕ್ರಿಕೆಟಿಗರಿಗು ಇಷ್ಟು ಫಾಲೋವರ್ಸ್ ಇರಲಿಕಿಲ್ಲ.

ಇನ್ಸ್‌ಟಾಗ್ರಾಮ್‌ನಲ್ಲಿ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ಬಿರುದುರಿವ ಕ್ರೀಡಾ ಜಗತ್ತಿನ ಮೂರನೇ ಆಟಗಾರ ವಿರಾಟ್ ಕೊಹ್ಲಿಯಾಗಿದ್ದು, ಪುಟ್ಬಾಲ್ ಸೂಪರ್ ಸ್ಟಾ‌ಗಳಾದ ಕ್ರಿಸ್ಟಿಯಾನೋ ರೊನಾಲ್ಡ್, ಲಿಯೊನೆಲ್ ಮೆಸ್ಸಿ ನಂತರದ ಸ್ಥಾನ, ಕೊಹ್ಲಿಯೇ ಬಾಚಿಕೊಂಡಿದ್ದಾರೆ. ಆದರೆ, 21 ಕೋಟಿ ಫಾಲೋವರ್ಸ್ ಇದ್ದರು ಕೂಡ ಕೊಹ್ಲಿ ಫಾಲೋ ಮಾಡೋದು, ಕೇವಲ 262 ಜನರನ್ನ ಮಾತ್ರ ಎಂಬುದನ್ನು ಗಮನಿಸಬೇಕು.

ಈ 262 ಜನರ ಲಿಸ್ಟ್ನಲ್ಲಿ ಹೆಚ್ಚಿನವರು ಫೇಮಸ್ ಆಗಿರುವ ಕ್ರಿಕೆಟರ್ಸ್ ಆ್ಯಂಡ್ ಬಿಗ್ ಸೆಲೆಬ್ರಿಟೀಸ್ ಆಗಿದ್ದರೆ, ಎಲ್ಲೂ ದೊಡ್ಡ ಪಾಪ್ಯುಲಾರಿಟಿ ಗಳಿಸದ ,ಜೊತೆಗೆ ಅಷ್ಟೇನೂ ದೊಡ್ಡ ಸೆಲೆಬ್ರಿಟಿಯೂ ಅಲ್ಲದ, ಜಸ್ಟ್ 19 ವರ್ಷದ ಹುಡುಗನನ್ನು ಕೊಹ್ಲಿ ಫಾಲೋ ಮಾಡ್ತಿದ್ದಾರೆ.

ಹೌದು!!.ರಿಷಿ ಸಿಂಗ್‌ನ ಫಾಲೋ ಮಾಡ್ತಾರೆ ವಿರಾಟ್ ಕೊಹ್ಲಿ.!!ರಿಷಿ ಸಿಂಗ್ ಯಾರಪ್ಪಾ ಅಂದ್ರೆ, ಅದ್ಭುತವಾಗಿ ಹಾಡುವ ಯಂಗ್ ಟ್ಯಾಲೆಂಟ್.. ಈ ಯಂಗ್ ಸಿಂಗರ್ ಹಾಡಿನ ಮೋಡಿಗೆ ಕೊಹ್ಲಿ ಮನಸೋತು ಇನ್ಸ್‌ಟಾಗ್ರಾಮ್‌ನಲ್ಲಿ ಫಾಲೋ ಕೂಡ ಮಾಡುತ್ತಿದ್ದಾರೆ. ಕೊಹ್ಲಿ ರಿಷಿ ಸಿಂಗ್‌ನ ಸಿಂಗಿಂಗ್ ಟ್ಯಾಲೆಂಟ್‌ಗೆ ಎಷ್ಟು ದೊಡ್ಡ ಫ್ಯಾನ್ ಎಂಬುದಕ್ಕೆ ಸಾಕ್ಷಿ ಎಂಬಂತೆ ಬಿಡುವಿದ್ದಾಗ ಕೊಹ್ಲಿ ರಿಷಿ ಸಾಂಗ್ಸ್‌ನಾ ಕೇಳಿ ರಿಲಾಕ್ಸ್ ಆಗುವುದು ಮಾತ್ರವಲ್ಲ ರಿಷಿ ಸಿಂಗ್ ಗೆ ಮೆಸೇಜ್ ಕೂಡ ಮಾಡಿದ್ದಾರೆ. ಕಿಂಗ್ ಕೊಹ್ಲಿಯೇ ರಿಷಿನಾ ಫಾಲೋ ಮಾಡ್ತಿದ್ದಾರೆ ಅಂದರೆ ಈತನ ಟ್ಯಾಲೆಂಟ್ ಎಂತಹದ್ದು ಎಂಬ ಸಣ್ಣ ಚಿತ್ರಣ ಎಲ್ಲರಿಗೂ ಗೊತ್ತಾಗಿರಬಹುದು!

ಕೊಹ್ಲಿ ಎಷ್ಟರ ಮಟ್ಟಿಗೆ ರಿಷಿಗೆ ಫ್ಯಾನ್ ಅಂದ್ರೆ, ರಿಯಾಲಿಟಿ ಶೋನಲ್ಲಿ ರಿಷಿ ಹಾಡು ಕೇಳಿ ಕೊಹ್ಲಿ ಮನಸೋತು ಕಳೆದುಹೋಗಿದ್ದರು. ಅಷ್ಟೆ ಅಲ್ಲದೆ, ಮೆಸೇಜ್ ಕೂಡ ಕಳುಹಿಸಿದ್ದು, ಆ ಮೆಸೇಜ್ ಹೀಗಿದೆ:

‘ಹಾಯ್ ರಿಷಿ ಹೇಗಿದ್ದೀಯಾ..? ನಾನು ಇತ್ತೀಚೆಗೆ ನಿಮ್ಮ ವಿಡಿಯೋಗಳನ್ನ ನೋಡಿದೆ.ಅಲ್ಲದೆ, ನೀನೊಂದು ಅದ್ಭುತ. ನಾನು ನಿನ್ನ ಸಿಂಗಿಂಗ್‌ನಾ ಪ್ರೀತಿಸುತ್ತೇನೆ. ಒಳ್ಳೆಯದ್ದಾಗಲಿ, ದೇವರ ಆಶೀರ್ವಾದ ನಿನ್ನ ಮೇಲಿರಲಿ’ ಎಂದು ಶುಭ ಹಾರೈಸಿದ್ದಾರೆ.

ಹಿಂದಿಯ ಫೇಮಸ್ ಚಾನೆಲ್‌ವೊಂದರ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ರಿಷಿ ಸಿಂಗ್ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ತಮ್ಮ ಹೊಸ ಚಿತ್ರ ಪ್ರಮೋಷನ್ ಗಾಗಿ ಹೀರೋ ಆಯುಷ್ಮಾನ್ ಖುರಾನ ಆಗಮಿಸಿದ್ದರು. ಕೊಹ್ಲಿ ರಿಷಿ ಸಿಂಗ್‌ನಾ, ಫಾಲೋ ಮಾಡ್ತಿರೋದನ್ನು ಕೇಳಿ ಬಾಲಿವುಡ್ ಆ್ಯಕ್ಟರ್ ಆಯುಷ್ಮಾನ್ ಖುರಾನ ಕೂಡ ಶಾಕ್ ಆಗಿದ್ದಾರೆ. ಅಷ್ಟೆ ಅಲ್ಲದೆ, ಇದೆಲ್ಲಾ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು. ರಿಷಿ ಸಿಂಗ್ ನ ಸುಮಧುರ ಕಂಠದ ಗಾಯನ ಕೇಳಿದ ಮೇಲೆ ಕೊಹ್ಲಿ ಯಾಕೆ ನಿಮ್ಮನ್ನ ಫಾಲೋ ಮಾಡ್ತಾರೆ ಎನ್ನುವುದು ಅರ್ಥವಾಗಿದೆ ಎಂದಿದ್ದಾರೆ.

‘ಇಲ್ಲಿರೋ ಎಲ್ಲಾ ಸ್ಪರ್ಧಿಗಳು ಬಹಳ ಖ್ಯಾತಿಗಳಿಸಿದ್ದರು ಕೂಡ ರಿಷಿಯನ್ನು ವಿರಾಟ್ ಕೊಹ್ಲಿ ಫಾಲೋ ಮಾಡ್ತಿದ್ದಾರೆ. ಇದೆಲ್ಲಾ ಹೇಗ್ ಮಾಡ್ತಿರಾ.. ಹೇಗೆ.? ವಿಕಿ ಡೋನರ್‌ನಿಂದ ಈಗ ಆ್ಯಕ್ಷನ್ ಹೀರೋ ಆಗಿದ್ದರು ಸಹಿತ ನನ್ನನ್ನೇ ಕೊಹ್ಲಿ ಫಾಲೋ ಮಾಡಲ್ಲ ಇದಲ್ಲದೇ, ಅನುಷ್ಕಾ ಫಾಲೋ ಮಾತ್ರ ಫಾಲೋ ಮಾಡ್ತಾರೆ, ಆದರೆ ವಿರಾಟ್ ಮಾಡಲ್ಲ’ ಎಂದು ಖ್ಯಾತ ನಟ ಆಯುಷ್ಮಾನ್ ಖುರಾನ ಎಂದು ಪ್ರಶ್ನಿಸಿದ್ದಾರೆ. ನನಗೀಗ ಗೊತ್ತಾಯ್ತು ವಿರಾಟ್ ಕೊಹ್ಲಿ ನಿಮ್ಮನ್ನ ಯಾಕೆ ಫಾಲೋ ಮಾಡ್ತಾರೆ ಅಂತ ಹೇಳಿದ್ದಲ್ಲದೆ, ನಾನು ನಿಮ್ಮ ಫ್ಯಾನ್ ಆಗಿಬಿಟ್ಟೆ, ನಾನೂ ಇವತ್ತಿನಿಂದ ನಿಮ್ಮನ್ನ ಫಾಲೋ ಮಾಡ್ತೀನಿ’ ಎಂದು ಖ್ಯಾತ ಹೀರೋ ಕೂಡ ರಿಶಿ ಸಿಂಗ್ ಫ್ಯಾನ್ ಆಗಿಬಿಟ್ಟಿದ್ದಾರೆ. ಏನೇ ಆಗಲಿ..ವಿರಾಟ್ ಕೊಹ್ಲಿಯನ್ನೇ ಇಂಪ್ರೆಸ್ ಮಾಡಿರೋ ರಿಷಿ, ಈ ರಿಯಾಲಿಟಿ ಶೋನ ವಿನ್ನರ್ ಆಗಲಿ ಎಂದು ಸಿಂಗಿಂಗ್‌ನಲ್ಲಿ ಮತ್ತಷ್ಟು ಎತ್ತರಕ್ಕೇರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

Leave A Reply

Your email address will not be published.