ಸತ್ತ ನಂತರದ ವಿಧಿ ವಿಧಾನಗಳನ್ನು ಪೂರೈಸುವ ಹೊಸ ಸ್ಟಾರ್ಟ್ ಅಪ್ ಕಂಪನಿ – ಸಾಯೋದಷ್ಟೆ ನಮ್ ಕೆಲ್ಸ, ಉಳಿದದ್ದನ್ನೆಲ್ಲ ಕಂಪನಿ ನೊಡ್ಕೊಳ್ಳುತ್ತೆ !!

ಸತ್ತ ನಂತರದ ವಿಧಿ ವಿಧಾನಗಳನ್ನು ಪೂರೈಸುವ ಹೊಸ ಸ್ಟಾರ್ಟ್ ಅಪ್ ಕಂಪನಿ – ಸಾಯೋದಷ್ಟೆ ನಮ್ ಕೆಲ್ಸ, ಉಳಿದದ್ದನ್ನೆಲ್ಲ ಕಂಪನಿ ನೊಡ್ಕೊಳ್ಳುತ್ತೆ !!

 

ಹೊಸದೊಂದು ಸ್ಟಾರ್ಟ್ ಅಪ್ ಕಂಪನಿ ಬಂದಿದೆ. ಅದರ ಕೆಲಸವೇ ಬೇರೆ !!! ಇಂದಿನ ಬಹು ಬ್ಯುಸಿ ದಿನಗಳಲ್ಲಿ ಮದುವೆ, ಎಂಗೇಜ್ಮೆಂಟ್, ಬರ್ತ್ ಡೇ, ತೊಟ್ಟಿಲ ಶಾಸ್ತ್ರ ಹೀಗೆ ಥರದ ಸಮಾರಂಭಗಳನ್ನು ಯಶಸ್ವಿಯಾಗಿ ನಡೆಸಿಕೊಡಲು ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳನ್ನು ನೇಮಿಸಿಕೊಳ್ಳುವ ಪರಿಪಾಠ ದೊಡ್ಡ ನಗರಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ.

ಕಾರಣ ಸಮಯದ ಅಭಾವ ಮತ್ತು ಒಂದೇ ಸ್ಥಳದಲ್ಲೇ ಎಲ್ಲಾ ಸೇವೆಗಳನ್ನು ಕೂಡಾ ಕೊಡುವ ಸೌಲಭ್ಯದ ಕಾರಣ ಜನ ಈವೆಂಟ್ ಮ್ಯಾನೇಜ್ಮೆಂಟ್ ನ ಮೊರೆಹೋಗುತ್ತಿದ್ದಾರೆ.

ಆದರೆ ಇದೀಗ ಒಬ್ಬ ವ್ಯಕ್ತಿಯ ಅಂತಿಮ ವಿಧಿಗಳನ್ನು ಕೈಗೊಳ್ಳಲು ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯೊಂದು ಕಾರ್ಯಾಚರಣೆ ಶುರುಮಾಡಿದೆ. ” ಸುಖಾಂತ್ ಫ್ಯುನರಲ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್” ಎನ್ನುವ ಈ ಸಂಸ್ಥೆ ಸಾವಿನ ನಂತರ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಖುದ್ದು ವಹಿಸಿಕೊಂಡು ನಡೆಸಿಕೊಡುತ್ತದೆ.
ಕೇವಲ 37,500 ರೂಗಳ ಸದಸ್ಯತ್ವ ಶುಲ್ಕವನ್ನು ತೆತ್ತರೆ ಸಾಕು, ವ್ಯಕ್ತಿ ಸತ್ತ ನಂತರ ನಡೆಯುವ ಕ್ಷೌರಿಕ ಶುಲ್ಕವನ್ನು ಕಂಪನಿಯೇ ತೆತ್ತು ಎಲ್ಲಾ ಅಗತ್ಯ ಕೆಲಸಗಳನ್ನು ಕಂಪನಿಯೇ ನೋಡಿಕೊಳ್ಳುತ್ತದೆ. ಅರ್ಚಕರ ನೇಮಕಕ್ಕೆ ಕೂಡಾ ಯಾರೂ ಹುಡುಕಾಡಬೇಕಿಲ್ಲ. ಅದನ್ನೂ ಅದೇ ಕಂಪನಿ ನೊಡ್ಕೊಳ್ತದೆ. ಅಷ್ಟೇ ದುಡ್ಡಲ್ಲಿ ಸತ್ತ ವ್ಯಕ್ತಿಯ ಮೆರವಣಿಗೆಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯಲು ಸಹ ವ್ಯವಸ್ಥೆ ಮಾಡುತ್ತಾರೆ.

ಒಟ್ಟಿಗೆ ನಡೆಯುವವರು, ರಾಮನ ಹೆಸರಿನಲ್ಲಿ ಜಪ  ಮಾಡುವವರು ಹೀಗೆ ಈ ಸಂಸ್ಥೆಯೇ ನೋಡಿಕೊಳ್ಳುತ್ತದೆ. ಕೊನೆಗೆ, ಚಿತಾಭಸ್ಮವನ್ನು ಸಹ ಕಂಪನಿಯೇ ಪಡೆದು ನದಿಯಲ್ಲಿ ವಿಸರ್ಜಿಸಿ ಬಿಡುತ್ತಾರೆ.
ಅಂತಿಮ ಸಂಸ್ಕಾರದಲ್ಲಿ ನಮ್ಮದು ಏನೇನೂ ರೋಲ್ ಇರೋದೇ ಬೇಕಿಲ್ಲ, ಕೇವಲ ನಾವು ಅಥವಾ ನಮ್ಮವರಲ್ಲಿ ಒಬ್ರು ಸತ್ರೆ ಸಾಕು, ಉಳಿದದ್ದು ಎಲ್ಲಾ ಕಂಪನಿಯ ಕೈಯಲ್ಲಿ !!!

ಈಗಾಗಲೇ 50 ಲಕ್ಷ ಲಾಭ ಗಳಿಸಿದ ಈ ಹೊಸ ಸ್ಟಾರ್ಟ್ ಅಪ್ ಜಾಗವನ್ನು ಆಕ್ರಮಿಸಿಕೊಂಡು ಕೂತಿದೆ. ಮುಂಬರುವ ಸಮಯದಲ್ಲಿ ಇದರ ವಹಿವಾಟು 2000 ಕೋಟಿ ಆಗುವ ನಿರೀಕ್ಷೆಯಿದೆ ಎನ್ನಲಾಗಿದೆ.

ಭಾರತದಲ್ಲಿ ಬಂದ ಹೊಸ ಸಂಸ್ಕೃತಿ

ಭಾರತದಲ್ಲಿ ಈ ಹೊಸ ಸಂಸ್ಕೃತಿ ಬಂದಿದೆ. ಯಾಕೆಂದರೆ ಭಾರತದಲ್ಲಿ ಸಂಬಂಧವನ್ನು ಉಳಿಸಿಕೊಳ್ಳಲು ಮಗನಿಗಾಗಲಿ, ಸಹೋದರನಾಗಲಿ, ನೆಂಟರಿಷ್ಟರಿಗೆ ಹೀಗೆ ಯಾರಿಗೂ ಸಮಯವಿಲ್ಲ ಎಂಬುದು ಕಂಪನಿಗೆ ಚೆನ್ನಾಗಿ ಗೊತ್ತಾಗಿದೆ. ‘ ಲೈಫ್ ಶಾಶ್ವತವಲ್ಲ. ನಿಮ್ಮ ಅಂತಿಮ ಪ್ರಯಾಣವನ್ನು ಸುಖಾಂತ್ಯ ಮಾಡಿಕೊಳ್ಳಿ. ನಮ್ಮ ಸಹಾಯ ಪಡ್ಕೊಳ್ಳಿ’ ಎಂದು ಕಂಪನಿ ಹೇಳಿದೆ.

ಇಲ್ಲಿಯವರೆಗೆ 5000 ಶವಸಂಸ್ಕಾರಗಳು ಈ ಕಂಪನಿಯ ಅಡಿಯಲ್ಲಿ ನಡೆದಿದೆ ಎನ್ನಲಾಗಿದೆ. ನಾನು ಮೃತದೇಹದ ಅಂಗಡಿಯನ್ನು ನೋಡಿದ್ದೆ, ಮೃತದೇಹದ ವಸ್ತುಗಳ ಪ್ರದರ್ಶನದ ಸ್ಟಾಲ್ ಅನ್ನು ಮೊದಲ ಬಾರಿಗೆ ನೋಡಿದೆ ಎಂದು ಒಬ್ಬರು ಬೇಸರದಲ್ಲಿ ಹೇಳಿಕೊಂಡಿದ್ದಾರೆ.
ನಾವು ಬದುಕಿದ್ದಾಗ ನಾಲ್ಕು ಒಳ್ಳೆಯ ಕೆಲಸ ಮಾಡಿದ್ರೆ, ಕೆಲವರನ್ನಾದರೂ ನಿಜಕ್ಕೂ ಪ್ರೀತಿ ಮತ್ತು ಕೇರ್ ಮಾಡಿದ್ರೆ ನಮ್ಮವರು ಅಂದುಕೊಂಡವರು ಅಳುತ್ತಾರೆ. ಇಲ್ಲದೆ ಹೋದರೆ,  ಅಳಲು, ಗೋಳಿಡಲು, ಬಾಯಿ ಬಡಿದುಕೊಂಡು ಎದೆ ಹೊಡೆದುಕೊಳ್ಳಲು ಕಂಪನಿಯೇ ಜನರನ್ನು ನೇಮಿಸಿತು !!

Leave A Reply

Your email address will not be published.