ಮದರ್ ಡೈರಿ ಹಾಲಿನ ದರ 1-2 ರೂ ಏರಿಕೆ!

Share the Article

ನವದೆಹಲಿ: ಇಂದಿನಿಂದ ದೆಹಲಿ ಮತ್ತು ವಿವಿಧೆಡೆ ಮಾರುಕಟ್ಟೆಗಳಲ್ಲಿ ಕೆನೆ ಭರಿತ ಹಾಲಿಗೆ 1 ರೂ. ಮತ್ತು ಟೋಕನ್ ಹಾಲಿಗೆ 2 ರೂ. ಹೆಚ್ಚಿಸಲು ಮದರ್ ಡೈರಿ ( Mother Dairy) ನಿರ್ಧರಿಸಿದೆ.

ಲೀಟರ್‌ಗೆ 63 ರೂಪಾಯಿ ಇದ್ದ ಕೆನೆ ಭರಿತ ಹಾಲಿನ ದರ ಈಗ 64 ರೂಪಾಯಿಗೆ ಏರಿಕೆಯಾಗಿದೆ. ಆದರೂ 500 ಮಿಲಿ ಪ್ಯಾಕ್‍ಗಳಲ್ಲಿ ಮಾರಾಟವಾಗುವ ಕೆನೆ ಭರಿತ ಹಾಲಿನ ಬೆಲೆಯನ್ನು ಕಂಪನಿ ಪರಿಷ್ಕರಿಸಿಲ್ಲ. ಇನ್ನೂ ಟೋಕನ್ ಹಾಲು ಲೀಟರ್‌ಗೆ 50 ರೂ.ಯಂತೆ ಮಾರಾಟವಾಗಲಿದೆ.

ಮದರ್ ಡೈರಿ ಈ ವರ್ಷದಲ್ಲಿ ನಾಲ್ಕನೇ ಬಾರಿಗೆ ಹಾಲಿನ ದರವನ್ನು ಏರಿಕೆ ಮಾಡಿದ್ದು, ಇಂದಿನಿಂದ ಈ ದರ ಜಾರಿಗೆ ಬಂದಿದೆ. ಪೂರೈಕೆ ವ್ಯತ್ಯಯ, ಉತ್ಪಾದನಾ ವೆಚ್ಚದ ಏರಿಕೆಯಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮದರ್ ಡೈರಿ ವಕ್ತಾರರು ತಿಳಿಸಿದ್ದಾರೆ.

Leave A Reply